ಮಂಗಳೂರು:
ಎಂ.ಸಿ.ಸಿ. ಬ್ಯಾಂಕ್
ವತಿಯಿಂದ 28 ಮೇ 2026 ರಂದು ಸಂಜೆ 6:00 ಗಂಟೆಗೆ
ಯರ್ಮಾಳಿನ ಪೆನಿನ್ಸುಲಾ ಡೆಲ್ ಮಾರ್ನಲ್ಲಿ
“ಇಂಪ್ರಿಂಟ್ಸ್ ಅಂಡ್ ಇಂಪ್ರೆಶನ್ಸ್” ಎಂಬ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರು, ನಿರ್ದೇಶಕರು, ಶಾಖಾ ವ್ಯವಸ್ಥಾಪಕರು, ಗಣ್ಯರು,
ಧರ್ಮಗುರುಗಳು, ಚಾರ್ಟರ್ಡ್ ಅಕೌಂಟೆಂಟ್ಸ್ ಹಾಗೂ ಸಮಾಜದ ವಿವಿಧ
ಕ್ಷೇತ್ರಗಳ ವಿಶಿಷ್ಟ ಅತಿಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್
ಲೋಬೋ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ|
ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹಾಗೂ ಉಡುಪಿ ಧರ್ಮಪ್ರಾಂತ್ಯದ
ನಿವೃತ್ತ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ|
ಜೆರಾಲ್ಡ್ ಐಸಾಕ್ ಲೋಬೋ ಉಪಸ್ಥಿತರಿದ್ದರು. ಎನ್ಆರ್ಐ ಉದ್ಯಮಿ
ಹಾಗೂ ದಾನಿ ಶ್ರೀ ಮೈಕಲ್
ಡಿಸೋಜಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಂ.ಸಿ.ಸಿ. ಬ್ಯಾಂಕಿನ
ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್
ಲೋಬೋ ಸ್ವಾಗತಿಸಿ ಸಂಸ್ಥೆಯನ್ನು
ಬಲಪಡಿಸುವಲ್ಲಿ ಹಾಗೂ ಎಂ.ಸಿ.ಸಿ. ಬ್ಯಾಂಕಿನ ಪರಂಪರೆ
ಮತ್ತು ದೃಷ್ಟಿಕೋನವನ್ನು ಮುಂದುವರಿಸುವಲ್ಲಿ ಸರ್ವರ ಪಾತ್ರವನ್ನು ಶ್ಲಾಘಿಸಿದರು.
ಸಭೆಯನ್ನು
ಉದ್ದೇಶಿಸಿ ಮಾತನಾಡಿದ ಪರಮ ಪೂಜ್ಯ ಡಾ|
ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ಎಂ.ಸಿ.ಸಿ. ಬ್ಯಾಂಕ್, ಅದರ
ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿ ಹಾಗೂ ಹಿತೈಷಿಗಳ ಬಗ್ಗೆ
ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿದರು. “ಸ್ವಾರ್ಥವಲ್ಲ ಸೇವೆ”,
“ವಹಿವಾಟಲ್ಲ ವಿಶ್ವಾಸ”,
“ಲಾಭವಲ್ಲ ವ್ಯಕ್ತಿ” ಎಂಬ ಮೌಲ್ಯಗಳನ್ನು ಸಂಸ್ಥೆಗಳು
ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಿಹೇಳಿದರು.
ಈ ತತ್ವಗಳನ್ನು ನಿಷ್ಠೆಯಿಂದ ಅನುಸರಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವೆಂದು ತಿಳಿಸಿದರು.
ಪ್ರೇರಣಾದಾಯಕ
ಸಂದೇಶ ನೀಡಿದ ನಿವೃತ್ತ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ|
ಜೆರಾಲ್ಡ್ ಐಸಾಕ್ ಲೋಬೋ ಅವರು ಇಂತಹ
ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ ಎಂ.ಸಿ.ಸಿ
ಬ್ಯಾಂಕ್ಗೆ ಕೃತಜ್ಞತೆ ಸಲ್ಲಿಸಿದರು.
ಪ್ರತಿಯೊಂದು ಯಶಸ್ವಿ ಸಂಸ್ಥೆಗೆ ದೃಢವಾದ ದೃಷ್ಟಿಕೋನ ಮತ್ತು ಧ್ಯೇಯ ಅಗತ್ಯವಿದ್ದು, ಎಂ.ಸಿ.ಸಿ.
ಬ್ಯಾಂಕಿನ ಸಾಧನೆಗಳು ಅದರ ಸಷ್ಟ ಉದ್ದೇಶ
ಮತ್ತು ಸಮಾಜಮುಖಿ ಬದ್ಧತೆಯ ಫಲವೆಂದು ಹೇಳಿ. ಪ್ರಸ್ತುತ ವರ್ಷವನ್ನು ಬಡವರಿಗಾಗಿ ಸಮರ್ಪಿಸಲಾಗಿದೆ ಎಂದು ತಿಳಿಸಿದ ಪರಮ
ಪೂಜ್ಯ ಡಾ| ಐಸಾಕ್ ಲೋಬೋ
ಅವರು ಸಮಾಜಕ್ಕೆ ಮರಳಿ ಕೊಡುವ ಅಭ್ಯಾಸ
ಬೆಳೆಸಿಕೊಳ್ಳಬೇಕು ಎಂದು ಹೇಳಿ ಸಿಬ್ಬಂದಿಯನ್ನು
ಸಾಮಾಜಿಕ ಸೇವೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು.
ಮೈಕಲ್
ಡಿಸೋಜಾ ಮಾತನಾಡಿ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶ್ವಾಸ ಮತ್ತು ಗ್ರಾಹಕ ಸಂಬಂಧಗಳ ಮಹತ್ವವನ್ನು ಒತ್ತಿಹೇಳಿದರು. ಗ್ರಾಹಕರು ಸಂಸ್ಥೆಯನ್ನು ಸಂಪೂರ್ಣವಾಗಿ ನಂಬಬೇಕು ಮತ್ತು ಅದರ ಶ್ರೇಷ್ಟ ರಾಯಭಾರಿಗಳಾಗಬೇಕು
ಎಂದು ಹೇಳಿದರು. 2018ರ ನಂತರ ಎಂ.ಸಿ.ಸಿ. ಬ್ಯಾಂಕ್
ಸಾಧಿಸಿರುವ ಬೆಳವಣಿಗೆಯನ್ನು ಶ್ಲಾಘಿಸಿ, ಅಧ್ಯಕ್ಷರು, ನಿರ್ದೇಶಕರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗೆ ಅಭಿನಂದನೆ
ಸಲ್ಲಿಸಿ ಮುಂದಿನ ವರ್ಷಗಳಲ್ಲಿ ಬ್ಯಾಂಕಿನ ಠೇವಣಿಗಳು, ಸಾಲಗಳು ಹಾಗೂ ಒಟ್ಟು ವ್ಯವಹಾರ
ಗಣನೀಯವಾಗಿ ವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿ
ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾದ ಪರಮ
ಪೂಜ್ಯ ಡಾ| ಲೆಸ್ಲಿ ಕ್ಲಿಫರ್ಡ್
ಡಿಸೋಜಾ ಅವರಿಗೆ ಭವ್ಯ ಸನ್ಮಾನ ಕಾರ್ಯಕ್ರಮ
ನಡೆಯಿತು. ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ|
ಜೆರಾಲ್ಡ್ ಐಸಾಕ್ ಲೋಬೋ ಅವರಿಗೂ ಅವರ
ಅಮೂಲ್ಯ ಕೊಡುಗೆ ಹಾಗೂ ಆಧ್ಯಾತ್ಮಿಕ ನಾಯಕತ್ವಕ್ಕಾಗಿ
ಸನ್ಮಾನಿಸಲಾಯಿತು.
ಕಾರ್ಯಕ್ರಮವು
ಬ್ಯಾಂಕಿನ ಸಿಬ್ಬಂದಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಬ್ಯಾಂಕಿನ ನಿರ್ದೇಶಕರಾದ ಡಾ| ಜೆರಾಲ್ಡ್ ಪಿಂಟೋ
ಧನ್ಯವಾದ ಸಮರ್ಪಿಸಿ ಶ್ರೀ ಸ್ಟೀವನ್ ಕುಲಾಸೋ
ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



