ಕುಳಾಯಿ ಕುಲಾಲ ಸಂಘದಿಂದ ವಿದ್ಯಾರ್ಥಿಗಳಿಗೆ 1.25 ಲಕ್ಷ ಮೌಲ್ಯದ ಶೈಕ್ಷಣಿಕ ಸವಲತ್ತು ವಿತರಣೆ

Upayuktha
0

ಸುರತ್ಕಲ್: ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೀಡುವ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಕಷ್ಟ ಕಾಲದಲ್ಲಿ ಸಂಘವು ಸಮುದಾಯಕ್ಕೆ ನೆರವಾಗಲಿದೆ ಎಂಬ ಆತ್ಮಸ್ಥೈರ್ಯ ಮೂಡಿಸುವ ಕಾರ್ಯವನ್ನು ಕುಳಾಯಿ ಕುಲಾಲ ಸಂಘ ಮಾಡುತ್ತಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.


ಕುಳಾಯಿ ಕುಲಾಲ ಸಂಘ, ಮಹಿಳಾ ಮಂಡಲ ಹಾಗೂ ಕುಲಾಲ ರಜತ ಸೇವಾ ಟ್ರಸ್ಟ್ ವತಿಯಿಂದ ಕುಳಾಯಿ ವೆಂಕಟರಮಣ ಶಾಲೆಯ ಸಭಾಭವನದಲ್ಲಿ ನಡೆದ ಶೈಕ್ಷಣಿಕ ಸವಲತ್ತು ವಿತರಣೆ, ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಕುಂಬಾರ ಜನಾಂಗದ ಬಗ್ಗೆ PhD ಪದವಿ ಪಡೆದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಉಪನ್ಯಾಸಕಿ ಆಶಾಲತಾ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದ ವೃಷಾ ಮತ್ತು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆದ ಶಾರ್ವರಿ ಅವರನ್ನು ಸನ್ಮಾನಿಸಲಾಯಿತು.


ಸವಲತ್ತು ವಿತರಣೆ:

ಸುಮಾರು 120 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ದತ್ತು ಪಡೆದ 10 ವಿದ್ಯಾರ್ಥಿಗಳಿಗೆ ನಗದು ಸಹಿತ ಸುಮಾರು 1,25,000 ರೂ. ಮೌಲ್ಯದ ಶೈಕ್ಷಣಿಕ ಸವಲತ್ತು ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ 12 ವಿದ್ಯಾರ್ಥಿಗಳಿಗೆ ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.


ವೇದಿಕೆಯಲ್ಲಿ ಮನಪಾ ನಿಕಟಪೂರ್ವ ಸದಸ್ಯ ವರುಣ್ ಚೌಟ, ಎಂಆರ್‌ಪಿಎಲ್-ಒಎನ್‌ಜಿಸಿ ಚೀಫ್ ಮ್ಯಾನೇಜರ್ ದೀಪಕ್ ಅತ್ತಾವರ್, ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ, The Rays ಮಾಂಟೆಸರಿ ಹೌಸ್ ಆಫ್ ಚಿಲ್ಡ್ರನ್ ಡೈರೆಕ್ಟರ್ ರಶ್ಮಿ ಕಿರಣ್ ಮುಖ್ಯ ಅತಿಥಿಗಳಾಗಿದ್ದರು.


ಕುಲಾಲ ಸಂಘದ ಅಧ್ಯಕ್ಷ ಗಂಗಾಧರ್ ಬಂಜನ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಗಣೇಶ್ ಎಸ್ ಕುಲಾಲ್, ಮಹಿಳಾ ಮಂಡಲ ಅಧ್ಯಕ್ಷೆ ಲೋಲಾ ಹರೀಶ್, ಕುಲಾಲ ರಜತ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ್ ಕುಲಾಲ್, ಜನಾರ್ಧನ್ ಸಾಲಿಯಾನ್, ಗಂಗಾಧರ್ ಕೆ, ಮೋಹನ್ ಐ ಮೂಲ್ಯ, ಉಮೇಶ್ ಕೆ ಎನ್, ಪದ್ಮನಾಭ ಬಂಗೇರ ಮೈಂದಗುರಿ, ಯೋಗೀಶ್ ಡಿ, ಹರ್ಷಿತ್ ಕುಲಾಲ್, ಹರೀಶ್ ಕಾವಿನಕಲ್ಲು, ಮೋಹನ್ ಕಾವಿನಕಲ್ಲು, ರಮೇಶ್ ಆರ್ ಕೆ, ಮಾಧವ್ ಕುಲಾಲ್, ನಾಗೇಶ್ ಟಿ, ದೇವದಾಸ್ ಟೈಲರ್, ಗಣೇಶ್ ಕುಲಾಲ್ ರಜತ, ಸಂಜೀವ ಕುಲಾಲ್, ಗಣೇಶ್ ಅಂಚನ್, ಬೇಬಿ ಟೀಚರ್, ಮೀರಾ ಮೋಹನ್, ಶೋಭಾ ವಿಶ್ವನಾಥ್, ಪ್ರಫುಲ್ಲ ಸುಧಾಕರ್, ಶಶಿಕಲಾ ಮಾಧವ್, ಸುಷ್ಮಾ ಗಣೇಶ್, ಕವಿತಾ ದೇವದಾಸ್ ಉಪಸ್ಥಿತರಿದ್ದರು. 


ನಾಗೇಶ್ ಕುಲಾಲ್ ನಿರೂಪಿಸಿದರು. ಗಣೇಶ್ ಕುಲಾಲ್ ವಂದಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top