ಹಾಸನ : ನಮ್ಮ ಶಾಲೆ ಮತ್ತು ನಮ್ಮೂರ ಶಾಲೆ ಎಂಬ ಪರಿಕಲ್ಪನೆಗಳ ಮೂಲಕ ಪ್ರತೀ ವರ್ಷವೂ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ವ್ಯಾಸಂಗಕ್ಕೆ ಅಳಿಲು ಸೇವೆಯನ್ನು ಸಲ್ಲಿಸುತ್ತಿರುವ ವಿಶ್ವಮಾನವ ಪ್ರಶಸ್ತಿ ಪುರಸ್ಕೃತರಾದ ಅಕ್ಷರಸಂತ ಜೆ.ಬಿ. ತಮ್ಮಣ್ಣ ಗೌಡರಿಗೆ ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ನ್ನು ನೀಡಿ ಗೌರವಿಸಲಾಗಿದೆ.
ತಮಿಳುನಾಡಿನ ಏಸಿಯಾ ಇಂಟರ್ ನ್ಯಾಷನಲ್ ಕಲ್ಚರ್ ರೀಸರ್ಚ್ ಅಕಾಡೆಮಿ ಹೊಸೂರು ಇವರು ಟಿ.ಜಿ.ಐ. ಗ್ರ್ಯಾಂಡ್ ಫಾರ್ಚೂನಾ ಹಾಲ್ ನಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜೆ.ಬಿ. ತಮ್ಮಣಗೌಡರಿಗೆ ಗೌರವ ಡಾಕ್ಟರೇಟ್ ನ್ನು ನೀಡಿ ಗೌರವಿಸಿದೆ. ಅಕಾಡೆಮಿಯು ಜೆ. ಬಿ. ಟಿ. ಯವರ ಅನನ್ಯ ಕಾರ್ಯವನ್ನು ಗುರುತಿಸಿ, ಶ್ಲಾಘಿಸಿದೆ.
ಸಂಸ್ಥೆಯ ಗೌರವಾಧ್ಯಕ್ಷರಾದ ಪ್ರಣವ ಸ್ವರೂಪ ಮುನಿ ನಿರಂಜನ ಪೂಜ್ಯ ಶ್ರೀ ಶ್ರೀ ಡಾ. ಕೃಷ್ಣಮೂರ್ತಿ ಮಹಾಸ್ವಾಮೀಜಿಗಳು, ಗಿನ್ನಿಸ್ ಬುಕ್ ನಲ್ಲಿ ನಾಲ್ಕು ಬಾರಿ ವಿಶ್ವ ದಾಖಲೆ ನಿರ್ಮಿಸಿದ ಡಾ. ಕರಾಟೆ ಎ.ಪಿ. ಶ್ರೀನಾಥ್ ರವರು, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಎಸ್.ಟಿ. ಸೊಂಬೇಗೌಡ, ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ. ಸಂಗನಬಸಪ್ಪ ಬಿರಾದಾರ್, ಕರ್ನಾಟಕದ ಉಚ್ಚ ನ್ಯಾಯಾಲಯದ ಡಿಎಂಸಿಎಸ್ ನಿರ್ದೇಶಕರಾದ ಶ್ರೀ ಮನೋಹರ, ಸಿಲ್ವರ್ ಸ್ಕ್ರೀನ್ ವರ್ಲ್ಡ್ ರೆಕಾರ್ಡ್ ತರಬೇತಿಯ ಸಹ ನಿರ್ದೇಶಕರಾದ ಡಾ. ಅರುಣ್ ಚಿನ್ನದುರೈ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಸುಶೀಲಮ್ಮ ರವರು ಉಪಸ್ಥಿತರಿದ್ದು ಗೌರವ ಡಾಕ್ಟರೇಟ್ ಪ್ರದಾನ ಸಮಾರಂಭವನ್ನು ನಡೆಸಿಕೊಟ್ಟರು. ಹಿರಿಯ ವಿದ್ಯಾರ್ಥಿ ವೃಂದ, ಮಿತ್ರ ವೃಂದ, ಅಭಿಮಾನಿ ವೃಂದದವರು ಹೃದಯ ತುಂಬಿ ಅಭಿನಂದಿಸಿರುತ್ತಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


