ಮುಳುಗಡೆ ಸಂತ್ರಸ್ತರ ಬೇಡಿಕೆಗಾಗಿ ಅನಿರ್ದಿಷ್ಟ ಧರಣಿ 38ನೇ ದಿನಕ್ಕೆ

Upayuktha
0


ಹುನಗುಂದ: ತಾಲ್ಲೂಕಿನ ಇದ್ದಲಗಿ ಗ್ರಾಮದ ಸಂತ್ರಸ್ತರು ಮೂಲಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ 38ನೆಯ ದಿನವಾದ ಶುಕ್ರವಾರದಂದು ತಾಲ್ಲೂಕಿನ ಅನಪಕಟ್ಟಿ ಗ್ರಾಮದ ನೂರಾರು ಮುಳುಗಡೆ ಸಂತ್ರಸ್ತರು ಸಾಥ್ ನೀಡುವ ಮೂಲಕ ಬೇಡಿಕೆಗಳು ಈಡೇರುವರೆಗೆ ಧರಣಿಗೆ ಬೆಂಬಲವಿದೆ ಸೂಚಿಸಿದರು.


ಕಳೆದ 18 ವರ್ಷಗಳಿಂದ ತುಕ್ಕು ಹಿಡಿದ ಈಗಲೋ ಆಗಲೋ ಬೀಳಲಿರುವ ತಾತ್ಕಾಲಿಕ ಶೆಡ್ಡಿನಲ್ಲಿ ನಿತ್ಯ ನರಕಯಾತನೆ ಅನುಭವಿಸುತ್ತಾ ಕಾಲ ಕಳೆಯುತ್ತಿರುವ ಸಂತ್ರಸ್ತರ ಸಂಕಷ್ಟದ ಬದುಕನ್ನು ಕೇಳಿಯೂ ಕಿವುಡಾದ ಸರ್ಕಾರ. ನಮ್ಮ ಕಷ್ಟದ ಪರಿಸ್ಥಿತಿಯನ್ನು ಪರಿಹರಿಸುವಂತೆ ಅಂಗಲಾಚಿದರೂ ಸಹಾಯದ ಕೈಗಳನ್ನು ಮುಂದೆ ಮಾಡದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವರ್ಗದ ವಿರುದ್ಧ ಸಂತ್ರಸ್ತರು ಘೋಷಣೆ ಕೂಗುತ್ತಾ ನಮ್ಮ ಹಕ್ಕಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದೇವೆ.


ಇದ್ದಲಗಿ ಸಂತ್ರಸ್ತರ ಸಮಸ್ಯೆಗಳೇ ಅನಪಕಟ್ಟಿಯ ಮುಳುಗಡೆ ಸಂತ್ರಸ್ತರದಾಗಿವೆ. ಪುನರ್ವಸತಿ ಕೇಂದ್ರ ಮಾಡಿದರೂ ಮೂಲಭೂತ ಸೌಕರ್ಯಗಳ ಕೊರತೆ, ಕುಟುಂಬ ಸದಸ್ಯರು ವಾಸಿಸಲು ಸಾಕಾಗದಷ್ಟು ನಿವೇಶನದ ಜಾಗೆ ನೀಡಿಸಂತ್ರಸ್ತರ ಬದುಕನ್ನು ಅತಂತ್ರ ಸ್ಥಿತಿಗೆ ತಳಿದ್ದಂತಾಗಿದೆ. ಇದಕ್ಕೆ ಸರ್ಕಾರ ಶಾಶ್ವತ ಪರಿಹಾರ ಒದಗಿಸುವರೆಗೂ ಸಂತ್ರಸ್ತರ ಹೋರಾಟ ನಿರಂತರವಾಗಿರುತ್ತೇ. ಸಂಕಷ್ಟದಲ್ಲಿರುವ ಸಂತ್ರಸ್ತರ ಬದುಕಿನ ಸ್ಥಿತಿಯನ್ನು ನೋಡಿ ಕೇಳಿಯೂ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದಾರೆ, ಕಿವಿ ಇದ್ದು ಕಿತ ಕಿವುಡರಾಗಿದ್ದಾರೆ. ಇದರಿಂದ 38 ದಿನಗಳಿಂದ ನಿರಂತರ ಹೋರಾಟಕ್ಕೆ ಸ್ಪಂದಣೆ ಇಲ್ಲದಿರುವುದು ದುರಂತ ಸಂಗತಿಯಾಗಿದೆ.


ಈ ಸಂದರ್ಭದಲ್ಲಿ ಅನಪಕಟ್ಟಿಯ ಸಂತ್ರಸ್ತರಾದ ಮಹಾಂತೇಶ ಕೂಡೂರು, ಮುರ್ಜುಸಾಬ ವಾಲಿಕಾರ, ಶೇಖರಪ್ಪ ಪೂಜಾರಿ, ಹುಸೇನಸಾಬ ವಾಲಿಕಾರ, ಹನುಮಂತ ಅಂಟರದಾನಿ, ಸೋಮಣ್ಣ ಟಕ್ಕಳಕಿ, ಮಂಗಳಪ್ಪ ತಿಮ್ಮಾಪುರ, ಹುಸೇನಸಾಬ ಚಪ್ಪರಬಂದಿ, ನಾಗರಾಜ ಗೌಡರ, ಗದ್ದೆಣ್ಣ ಮಂಗಳಗುಡ್ಡ, ವಿಜಯ ಗೌಡರ, ನಾಗಪ್ಪ ಮಾದರ, ಮಂಜು ಗಡೇದ, ಅಮಜಪ್ಪ ಮಾದರ, ನಾಗರಾಜ ಗೌಡರ, ಖಾಸಿಂಸಾಬ್ ಹಾವರಗಿ, ಭೀಮಪ್ಪ ಮಂಗಳಗುಡ್ಡ, ಅಬ್ದುಲ್ ವಾಲಿಕಾರ, ಶಾರವ್ವ ಬೇಗಾರ, ರೇಣವ್ವ ಬೇಗಾರ, ರೇಣವ್ವ ಮಾದರ ಸೇರಿ ದಂತೆ ನೂರಾರು ಜನರು ಧರಣಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.


ಖಜಗಲ್ ಮತ್ತು ಕೆಂಗಲ್  ಸಂತ್ರಸ್ತರು ಬೆಂಬಲ 

ಹುನಗುಂದ: ತಾಲ್ಲೂಕಿನ ಇದ್ದಲಗಿ ಗ್ರಾಮದ ಸಂತ್ರಸ್ತರು ಮೂಲಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 39ನೇಯ ದಿನವಾದ ಶನಿವಾರವು ಮುಂದುವರೆಯಿತು.  ಧರಣಿ ಸ್ಥಳಕ್ಕೆ ಶನಿವಾರ ಖಜಗಲ್ ಮತ್ತು ಕೆಂಗಲ್ ಗ್ರಾಮಗಳ ಸಂತ್ರಸ್ತರು   ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top