ಸುರತ್ಕಲ್: ಹಿಂದೂ ವಿದ್ಯಾದಾಯಿನೀ ಸಂಘ ದ ಅಡಳಿತಕ್ಕೊಳಪಟ್ಟ ಸುರತ್ಕಲ್ ನ ಅನುದಾನಿತ ಇಡ್ಯಾ ವಿದ್ಯಾದಾಯಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ. ಗುಲಾಬಿ. ಎನ್. ಮತ್ತು ಪಿ. ವಿ. ಸುನೀತಾ ದತ್ತಿ ನಿಧಿ ಮತ್ತು ದಾನಿಗಳ ಸಹಭಾಗಿತ್ವದ ವಿದ್ಯಾರ್ಥಿ ವೇತನ ಮತ್ತು ಸಮವಸ್ತ್ರ ವಿತರಣಾ ಸಮಾರಂಭವು ನಡೆಯಿತು.
ಮುಖ್ಯ ಅತಿಥಿ ನವೀನ್. ಪಿ. ಮಾತನಾಡಿ ನೂತನ ತಂತ್ರಜ್ಞಾನದ ಅರಿವಿನೊಂದಿಗೆ ವಿದ್ಯಾರ್ಥಿಗಳು ನಿರಂತರವಾಗಿ ಮುನ್ನಡೆಯಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಗೆಲುವನ್ನು ಸಂಭ್ರಮಿಸುವುದನ್ನು ಕಲಿಸಿ ಕೊಡುವುದರೊಂದಿಗೆ ಸೋಲನ್ನು ಸ್ವೀಕರಿಸುವ ಮನೋಭಾವವನ್ನು ತಿಳಿಸಿಕೊಡ ಬೇಕೆಂದರು.
ಹಿಂದೂ ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಅಧ್ಯಕ್ಷೀಯ ಮಾತುಗಳನ್ನಾಡಿ ಶಾಲಾ ವಿದ್ಯಾರ್ಥಿಗಳ ಉನ್ನತಿಗಾಗಿ ಹಳೆ ವಿದ್ಯಾರ್ಥಿಗಳು ನಿರಂತರವಾಗಿ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನಯ ಆಚಾರ್, ಹಳೆ ವಿದ್ಯಾರ್ಥಿ ಕಿಶೋರ್, ಸಂಧ್ಯಾ ಕಿಶೋರ್, ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷೆ ಮಲ್ಲಿಕಾ, ಶಾಲಾ ಸಂಚಾಲಕಿ ಪಿ. ಕಸ್ತೂರಿ, ಶಾಲಾ ಮುಖ್ಯ ಶಿಕ್ಷಕಿ ಶಾಂತ ಮತ್ತು ಅಧ್ಯಾಪಕ ವೃಂದವರು ಉಪಸ್ಥಿತರಿದ್ದರು.
ಸುಜಾತ ಯಂ. ಜೋಗಿ ವಂದಿಸಿದರು. ಶಕುಂತಳಾ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


