ಕೆನಡಾದಲ್ಲಿ ಪುತ್ತಿಗೆ ಶ್ರೀಗಳಿಗೆ ಭವ್ಯಸ್ವಾಗತ ಮತ್ತು ಪೌರ ಸಮ್ಮಾನ

Upayuktha
0


ಟೊರೊಂಟೋ, ಕೆನಡಾ: ತಮ್ಮ ಚತುರ್ಥ ಪರ್ಯಾಯವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ ನಂತರ ಮೊದಲ ಬಾರಿಗೆ ಕೆನಡಾ ದೇಶಕ್ಕೆ ಆಗಮಿಸಿದ ಪೂಜ್ಯ ಶ್ರೀ ಪುತ್ತಿಗೆ ಶ್ರೀಪಾದರನ್ನು ನೂರಾರು ಭಕ್ತರು   ಟೊರೊಂಟೋ ಮಹಾನಗರದಲ್ಲಿ  ಭಾರೀ ಗೌರವಾದರಗಳೊಂದಿಗೆ ಬರಮಾಡಿಕೊಂಡರು. ಗೀತಾಪಾರಾಯಣ, ವೃಂದಗಾನ,  ಭಜನೆ, ಭರತನಾಟ್ಯ ಮತ್ತು ವೇದ ಘೋಷಗಳೊಂದಿಗೆ ಪೂಜ್ಯಶ್ರೀಪಾದರನ್ನು ಸ್ವಾಗತಿಸಲಾಯಿತು.


ತದನಂತರ ನಡೆದ ಪೌರ ಸಮ್ಮಾನದಲ್ಲಿ ಸ್ಥಳೀಯ ಸಂಸದೆ ಮತ್ತು ಕೇಂದ್ರ ಸಚಿವೆ ಶ್ರೀಮತಿ ಕಿಸ್ಟಿನಾ ಡೆರ್ಕ್ ಸನ್ ಅವರು ಕೆನಡಾ ಸರಕಾರದ ಪರವಾಗಿ ಪೂಜ್ಯ ಶ್ರೀಗಳಿಗೆ ಅಭಿನಂದನಾ ಪತ್ರವನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಕ್ರಿಸ್ಟಿನಾ ಪೂಜ್ಯಶ್ರೀಪಾದರು ವಿಶ್ವದಾದ್ಯಂತ ಸಂಚರಿಸಿ ಶಾಂತಿ ಮತ್ತು ಸೌಹಾರ್ದತೆಯನ್ನು  ಪಸರಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು. ಮತ್ತು ಕೆನಡಾ ದೇಶದ ಅಭಿವೃದ್ಧಿಗೆ ಸ್ಥಳೀಯ ಹಿಂದೂ ಸಮುದಾಯ ಕೊಡುಗೆಯೂ ಅಪಾರ ಎಂದರು. ಟೊರೊಂಟೋ ಮಹಾನಗರದ ಪುರಸಭೆಯ ಕೌನ್ಸಿಲರ್ ಶ್ರೀ ಜೇಸನ್ ಅವರು ಕೂಡ ಉಪಸ್ಥಿತರಿದ್ದರು.


ಕೆನಡಾ ಭಕ್ತರ ಭಾವಪೂರ್ಣ  ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಪೂಜ್ಯ ಶ್ರೀಪಾದರು, ಭಕ್ತಿಗಿಂತ ಮಿಗಿಲಾದ ಶಕ್ತಿ ಈ ಭೂಮಿಯಲ್ಲಿ ಮತ್ತೊಂದಿಲ್ಲ. ಭಕ್ತಿಯುಕ್ತವಾದ ಪೂಜೆ, ಸೇವೆ ಮತ್ತು ಪ್ರಾರ್ಥನೆಗಳು ಭಗವಂತನನ್ನು ಖಂಡಿತವಾಗಿಯೂ ಒಲಿಯುವಂತೆ ಮಾಡುತ್ತವೆ. ಮತ್ತು ದೇವರ ಅನುಗ್ರಹವನ್ನು ಸಂಪಾದಿಸಿದವರಿಗೆ ಅಸಾಧ್ಯವೆಂಬುವುದೇ ಇಲ್ಲ. ಅದೇ ನಮ್ಮ ಎಲ್ಲ ಯಶಸ್ಸುಗಳ ಹಿಂದಿರುವ ಸತ್ಯ ಎಂದರು.    ನಿಮ್ಮ ಭಕ್ತಿ ಭಾವ ಯುಕ್ತವಾದ ಪ್ರಾರ್ಥನೆ ಉಡುಪಿಯ ಶ್ರೀ ಕೃಷ್ಣನನ್ನೂ ಕೆನಡಾದೇಶಕ್ಕೆ ಕರೆತಂದಿತು.  ಅವನ ಸೇವೆಗಾಗಿ ನಮ್ಮನ್ನೂ ಇಲ್ಲಿಗೆ ಬರುವಂತೆ ಮಾಡಿತು ಎಂದು ಹೇಳಿದರು.


ಎಲ್ಲ ಭಕ್ತರ ಪರವಾಗಿ ಶ್ರೀ ಜಗನ್ನಾಥ ರಾವ್, ಶ್ರೀ ರಮೇಶ್ ಬೆಂಗಳೂರು ಮತ್ತು ಶ್ರೀ ಜ್ಞಾನಚಂದ್ರನ್ ರಾಸಲಿಂಗಂ ಅವರು  ಮಾತನಾಡಿ ತಮ್ಮ ನುಡಿನಮನಗಳನ್ನು ಸಲ್ಲಿಸಿದರು. ಡಾ.ಯೋಗೀಂದ್ರ ಭಟ್ ಉಳಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮತ್ತು ಶ್ರೀ ಮತಿ ರತ್ನ ಮತ್ತು ಶ್ರೀ ಹರೀಶ್ ರಾವ್ ಶ್ರೀಮಠದ ಪ್ರಾಸ್ತಾವಿತ  ಅಭಿವೃದ್ಧಿಯೋಜನೆಗಳ ಬಗ್ಗೆ ಸಭೆಗೆ ವಿವರಿಸಿದರು.  ಶ್ರೀಮಠದ ಪ್ರ. ಅರ್ಚಕ ಶ್ರೀ ರಾಘವೇಂದ್ರ ದೇಸಾಯಿ, ಶ್ರೀ ಸಂದೇಶ್ ಮೂಡತ್ತಾಯ, ಶ್ರೀ ಚಿಂತನ್ ವೇದಘೋಷಮಾಡಿದರು.  ಶ್ರೀ  ಶ್ರೀಮತಿ ಸುಜಾತಾ ನರಸಿಂಹ , ಶ್ರೀಮತಿ ವೀಣಾಕವಳೆ  ಶ್ರೀ ಕಿಶೋರ್ ಶೆಟ್ಟಿ ,  ಶ್ರೀ ನಿತಿನ್ ರಾವ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.ಶ್ರೀ ಅಕ್ಷಯ್ ನಿರೂಪಣೆಗೈದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top