ಬಿ.ಎ.ಎಸ್.ಎಫ್ ವತಿಯಿಂದ ಉಚಿತ ಸಮವಸ್ತ್ರ, ಪುಸ್ತಕ ವಿತರಣೆ

Upayuktha
0

ಸುರತ್ಕಲ್‌: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ ಫಿಶರೀಶ್ ಇಲ್ಲಿ ವಿದ್ಯಾರ್ಥಿಗಳಿಗೆ ಇಲಾಖಾ ವತಿಯಿಂದ ನೀಡಲಾಗಿರುವ ಸಮವಸ್ತ್ರ ಮತ್ತು ಬಿ.ಎ.ಎಸ್.ಎಫ್ ನೀಡಲಾಗಿರುವ ಉಚಿತ ನೋಟ್ಸ್ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳ ವಿತರಣೆ ಸಮಾರಂಭವು ನಡೆಯಿತು.


ಜಿಲ್ಲಾ ಲಯನ್ಸ್ ನ ಮಾನವ ಹಕ್ಕುಗಳ ಪ್ರಸಾರ ವಿಭಾಗ ದ ಅಧ್ಯಕ್ಷ ಮನೋಜ್ ಕುಮಾರ್ ತಣ್ಣೀರುಬಾವಿ ಮಾತನಾಡಿ,  ಬಿ.ಎ.ಎಸ್.ಎಫ್ ಸಂಸ್ಥೆಯು ಶೈಕ್ಷಣಿಕ ವಲಯಕ್ಕೆ ವಿಶೇಷ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ. ಪ್ರಗತಿ ಪಥದಲ್ಲಿರುವ ಚಿತ್ರಾಪುರ ಶಾಲೆಯ ಅಭಿವೃದ್ಧಿಗೆ ಕೈಗಾರಿಕಾ ಹಾಗೂ ಸಾಮಾಜಿಕ ಸೇವಾ ಸಂಸ್ಥೆಗಳ ಮೂಲಕ ಹೆಚ್ಚಿನ ಅನುದಾನಗಳನ್ನು ದೊರಕಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.


ಶಾಲಾ ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಕುಮಾರ ಬಂಗೇರ ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಶಶಿಕಲಾ ಶುಭ ಹಾರೈಸಿದರು.


ಸುರತ್ಕಲ್ ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷ ಶ್ರೀಧರ್ ಟಿ.ಎನ್. ಮಾತನಾಡಿ, ಪ್ರಾಥಮಿಕ ಶಿಕ್ಷಣವು ಬಹು ಮುಖ್ಯ ಹಂತವಾಗಿದ್ದು, ಶಾಲಾ ಬೆಳವಣಿಗೆಗೆ ಸಹಕರಿಸಲಾಗುವುದು ಎಂದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಸುಕೇಶಿನಿ ವಂದಿಸಿದರು. ಶಿಕ್ಷಕಿಯರಾದ ಸಿಂತಿಯ, ರೂಪ, ವ ನಿತಾಮತ್ತು ಪೋಷಕರು ಉಪಸ್ಥಿತರಿದ್ದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top