ದಿ.ಕೊಕ್ಕರ್ಣೆ ರಾಜೀವ ಶೆಟ್ಟಿಯವರಿಗೆ ನುಡಿ ನಮನ

Upayuktha
0

ಕುಂದಾಪುರ: ಇತ್ತೀಚೆಗೆ ನಿಧನರಾದ ನಿವೃತ್ತ ಸಹಾಯಕ ವಿದ್ಯಾಧಿಕಾರಿ ದಿ.ಕೊಕ್ಕಣೆ೯ ರಾಜೀವ ಶೆಟ್ಟಿಯವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಕುಂದಾಪುರ ಬಂಟರ ಸಭಾಭವನದಲ್ಲಿ ಜೂನ್ 5ರಂದು ಜರುಗಿತು.


ಒಬ್ಬ ಆದಶ೯ ಶಿಕ್ಷಕ ಹೇಗಿರಬೇಕು ಅನ್ನುವುದಕ್ಕೆ ದಿ. ಕೊಕ್ಕಣೆ೯ ರಾಜೀವ ಶೆಟ್ಟಿಯವರು ಒಬ್ಬ ಮಾದರಿ ವ್ಯಕ್ತಿಯಾಗಿ ನಿಲ್ಲುತ್ತಾರೆ. ನಿವೃತ್ತಿ ಹೊಂದಿ ನಾಲ್ಕು ದಶಕಗಳು ಕಳೆದರೂ ಶಿಕ್ಷಕರ ಮೇಲಿನ ಗೌರವ ಪ್ರೀತಿ ಕಿಂಚಿತ್ತು ಮಾಸದಿರುವುದು ಅವರ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದು ಎಂಜಿಎಂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ನುಡಿ ನಮನ ಸಲ್ಲಿಸಿದರು.


ಬಾಕೂ೯ರು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ, ಕುಂದಾಪುರ ಪುರ ಸಭೆಯ ಮಾಜಿ ಅಧ್ಯಕ್ಷ ಮೇೂಹನದಾಸ್ ಶೆಣೈ, ಶಿಕ್ಷಕಿ ರೇವತಿ ನುಡಿನಮನ ಸಲ್ಲಿಸಿ ಮಾತನಾಡಿದರು.


ನುಡಿ ನಮನ ವೇದಿಕೆಯಲ್ಲಿ ದಿವಂಗತ ಕೊಕ್ಕರ್ಣೆ ರಾಜೀವ್‌ ಶೆಟ್ಟಿಯವರ ಪುತ್ರರಾದ ಡಾ.ಅನಿಲ್‌ ಕುಮಾರ್ ಶೆಟ್ಟಿ, ಸುನೀಲ್ ಕುಮಾರ್ ಶೆಟ್ಟಿ, ಪುತ್ರಿ ಆಶಾ ಜೆ.ಶೆಟ್ಟಿ, ಅಳಿಯ ಜಯಪ್ರಕಾಶ್ ಶೆಟ್ಟಿ, ಮತ್ತು ಡಾ. ಸವೇೂ೯ತ್ತಮ ಶೆಟ್ಟಿ  ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾವಿರಾರು ಮಂದಿ ಅಭಿಮಾನಿಗಳು ಕುಟುಂಬಸ್ಥರು ಗಣ್ಯರು ಪುಷ್ಪ ನಮನ ಸಲ್ಲಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top