ಸಿಎ ಅಂತಿಮ ಪರೀಕ್ಷೆ: ಫಿಲೋಮಿನಾ ಪ ಪೂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಾಧನೆ

Upayuktha
0


ಪುತ್ತೂರು: ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯ ನಡೆಸಿದ 2026 ರ ಸಿಎ ಅಂತಿಮ ಪರೀಕ್ಷೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಕೆ. ನಿಶ್ಚಯ್ ಕುಡ್ವ ಮತ್ತು ಸ್ಕಂದ ಕೃಷ್ಣ. ಸಿ  ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ಕೆ. ನಿಶ್ಚಯ್ ಕುಡ್ವ ಇವರು ಪುತ್ತೂರಿನ ಸಾಮೇತಡ್ಕದ ನಿವಾಸಿ ಕೆ. ನಾರಾಯಣ ಕುಡ್ವ ಹಾಗೂ
ಕೆ. ನಂದಿತಾ ಕುಡ್ವ ದಂಪತಿಗಳ ಪುತ್ರ. ಸ್ಕಂದ ಕೃಷ್ಣ. ಸಿ ಅಮರ ಪಡ್ನೂರು ನಿವಾಸಿ ಶಿವಪ್ರಸಾದ್ ಮತ್ತು ವಿದ್ಯಾಸರಸ್ವತಿ ದಂಪತಿಯ  ಪುತ್ರನಾಗಿದ್ದು, ಇವರಿಬ್ಬರೂ ಸಂತ ಫಿಲೋಮಿನಾ ಪ. ಪೂ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ.
        
ಕಾಲೇಜಿನ  ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಅಭಿನಂದನೆಯನ್ನು ಸಲ್ಲಿಸಿದರು. ಉಪನ್ಯಾಸಕರಾದ ಸಂಜಯ್ ಎಸ್, ರಾಹುಲ್, ಭರತ್. ಜಿ. ಪೈ ಹಾಗೂ ಗೀತಾ ಕುಮಾರಿ ಎಂ ಉಪಸ್ಥಿತರಿದ್ದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top