ಮಂಗಳೂರು: ಸೇವಾಭಾರತಿ(ರಿ), ಮಂಗಳೂರು ಇದರ ಸೇವಾ ಪ್ರಕಲ್ಪವಾದ ‘ಅನಂತಸೌಖ್ಯ” ಹಾಗೂ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮತ್ತು ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್ಟಂಟ್ ಟ್ರಸ್ಟ್ (ರಿ), ಮಂಗಳೂರು ಇದರ ಸಹಯೋಗದೊಂದಿಗೆ, ಹಿರಿಯ ನಾಗರಿಕರಿಗಾಗಿ ಭಾನುವಾರ (ಜೂ.7) ಮೂಳೆ ಖನಿಜ ಸಾಂದ್ರತೆ ಮತ್ತು ರಕ್ತದೊತ್ತಡ ಹಾಗೂ ಸಕ್ಕರೆ ಪರೀಕ್ಷೆಗಳು ಸೇರಿದಂತೆ “ಮೂಳೆ ತಪಾಸಣಾ ಶಿಬಿರ”ವು ವಿ.ಟಿ. ರಸ್ತೆಯಲ್ಲಿರುವ ಚೇತನಾ ಬಾಲ ವಿಕಾಸ ಕೇಂದ್ರದ ವಠಾರದಲ್ಲಿ ನಡೆಯಿತು.
“ಮೂಳೆ ಸವೆತ ಎನ್ನುವುದು ಸೈಲೆಂಟ್ ಕಿಲ್ಲರ್. ಅದನ್ನು ಪ್ರಾರಂಭದಲ್ಲೇ ಪತ್ತೆ ಹಚ್ಚಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವುದು ಅಗತ್ಯ” ಎಂದು ಈ ಸಂದರ್ಭದಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಮೂಳೆ ಶಸ್ತ್ರ ಚಿಕಿತ್ಸಕರಾದ ಡಾ.ಕೆ.ಆರ್.ಕಾಮತ್ ಅವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಹೇಳಿದರು. ಮೂಳೆಯ ಸವೆತದ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಅಲ್ಲಿ ನೆರೆದವರಿಗೆ ವೈದ್ಯರು ವಿವರಿಸಿದರು. ವಯಸ್ಸಾದಂತೆ ಸವೆತವು ಸಾಮಾನ್ಯ ಆದರೆ ಅದನ್ನು ನಿಭಾಯಿಸುವಲ್ಲಿ ವೈದ್ಯರು ಹಾಗೂ ರೋಗಿಯ ಜವಾಬ್ದಾರಿಯನ್ನು ತಿಳಿ ಹೇಳಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಡಾ.ಮಿಥುನ್ ಪೈ ಅವರು ಮಾತನಾಡಿ 45 ವರ್ಷದ ನಂತರ ಎಲ್ಲರೂ ಕೂಡಾ ಮೂಳೆ ತಪಾಸಣೆ ಮಾಡಿಸುವುದು ಅವಶ್ಯ ಮತ್ತು ಮುಂದೆ ತೊಂದರೆಯಾಗದMತೆ ಆರಂಭಿಕ ಹಂತದಲ್ಲೇ ಅದಕ್ಕೆ ಸೂಕ್ತ ಚಿಕಿತ್ಸೆ ಮಾಡಬೇಕೆಂದು ತಿಳಿಸಿದರು.
ಸೇವಾಭಾರತಿ(ರಿ), ಮಂಗಳೂರು ಇದರ ಗೌರವ ಕಾರ್ಯದರ್ಶಿ ಹೆಚ್.ನಾಗರಾಜ ಭಟ್ ಅವರು ಸ್ವಾಗತಿಸಿ ಸೇವಾ ಭಾರತಿಯ ಸಮಾಜ ಮುಖಿ ಕಾರ್ಯಕ್ರಮಗಳನ್ನು ವಿವರಿಸಿದರು. ವೇದಿಕೆಯಲ್ಲಿ ‘ಅನಂತಸೌಖ್ಯ” ಸಂಚಾಲಕ ಉಮೇಶ್ ಶೆಣೈ, ಸೇವಾಭಾರತಿ(ರಿ), ಮಂಗಳೂರು ಇದರ ವಿಶ್ವಸ್ಥರಾದ ವಿನೋದ್ ಶೆಣೈ, ಅವರೂ ಉಪಸ್ಥಿತರಿದ್ದರು. ಉಮೇಶ್ ಶೆಣೈ ಅವರು ವಂದಿಸಿದರು.
ಉಮೇಶ್ ಶೆಣೈ ಅವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಡಾ.ಕೆ.ಆರ್.ಕಾಮತ್, ಡಾ.ಮಿಥುನ್ ಪೈ ಮತ್ತು ಕೆ.ಎಂ.ಸಿ ಆಸ್ಪತ್ರೆ, ಮಂಗಳೂರು ಇದರ ವೈದ್ಯರು ಮತ್ತು ಸಿಬ್ಬಂದಿ, ಎಎಂಸಿ ಟ್ರಸ್ಟ್ ಇದರ ಸದಸ್ಯರು, ಚೇತನಾ ಬಾಲ ವಿಕಾಸ ಕೇಂದ್ರದ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ, ಸೇವಾಭಾರತಿ (ರಿ), ಮಂಗಳೂರು ಇದರ ಸಿಬ್ಬಂದಿ ಹಾಗೂ ಸ್ವಯಂಸೇವಕರು ಭಾಗವಹಿಸಿ ಸಹಕರಿಸಿದರು.
ತಪಾಸಣಾ ಶಿಬಿರವು ಉಚಿತವಾಗಿದ್ದು ಒಟ್ಟು 135 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

