ಸಮಾಜಸೇವೆಗೆ ಸದ್ಗುರುಗಳ ಆಶೀರ್ವಾದ: ಜೋಶಿ ಫೌಂಡೇಶನ್‌ನ ಸಮಾಜಮುಖಿ ಕಾರ್ಯಕ್ಕೆ ಚಾಲನೆ

Upayuktha
0

  


ಸಾಗರ: ಪರಮಪೂಜ್ಯ ಸದ್ಗುರು ಶ್ರೀಧರ ಸ್ವಾಮಿಗಳ ತ್ರಿಕಾಲ ಪೂಜೆಯನ್ನು ಅಪ್ಪಟ ಬ್ರಹ್ಮಚರ್ಯ, ನಿರಂತರ ಅಧ್ಯಯನ ಮತ್ತು ಕಠಿಣ ಅನುಷ್ಠಾನದೊಂದಿಗೆ ಮುನ್ನಡೆಸುತ್ತಿರುವ ಗೌರವಾನ್ವಿತ ಋಷಿಮುನಿ ರಾಮಣ್ಣನವರು, ಇಂದು ಜೋಶಿ ಫೌಂಡೇಶನ್‌ನ ಸಮಾಜಮುಖಿ ಕಾರ್ಯಗಳಿಗೆ ಪವಿತ್ರ ಆಶೀರ್ವಾದ ನೀಡಿದರು.


ಜೋಶಿ ಫೌಂಡೇಶನ್ ಪ್ರತಿ ವರ್ಷದಂತೆ ಈ ವರ್ಷವೂ ಆರ್ಥಿಕವಾಗಿ ಹಿಂದುಳಿದ ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು ನೋಟ್‌ಪುಸ್ತಕಗಳನ್ನು ಶ್ರೀಧರ ಸ್ವಾಮಿಗಳ ಸನ್ನಿಧಾನದಲ್ಲಿ ಸಮರ್ಪಿಸಿ, ಲೋಕಾರ್ಪಣೆಗೊಳಿಸಲಾಯಿತು.


ಈ ಸಂದರ್ಭದಲ್ಲಿ ಫೌಂಡೇಶನ್‌ನ ಅಧ್ಯಕ್ಷರಾದ ಅಬಸೆ ದಿನೇಶ್ ಕುಮಾರ್ ಎನ್. ಜೋಶಿ ಅವರ ಜನಪರ ಕಾಳಜಿಯನ್ನು ಶ್ಲಾಘಿಸಿದ  ರಾಮಣ್ಣನವರು, ಸಂಸ್ಥೆಯ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ಬಡವರ, ಶೋಷಿತರ ಹಾಗೂ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಜನೋಪಯೋಗಿ ಕಾರ್ಯಗಳು ನಿರಂತರವಾಗಿ ನೆರವೇರಲಿ ಎಂದು ಹಾರೈಸಿದರು.


ಈ ಪವಿತ್ರ ಸಂದರ್ಭವು ಕೇವಲ ಪುಸ್ತಕ ವಿತರಣೆಯಾಗದೆ, ಸೇವಾ ಮನೋಭಾವ, ಶಿಕ್ಷಣಕ್ಕೆ ಪ್ರೋತ್ಸಾಹ ಹಾಗೂ ಸಮಾಜದ ಸಮಗ್ರ ಅಭಿವೃದ್ಧಿಯ ಸಂಕಲ್ಪಕ್ಕೆ ಮತ್ತಷ್ಟು ಶಕ್ತಿ ತುಂಬಿದ ಸಾರ್ಥಕ ಕ್ಷಣವಾಗಿ ಮೂಡಿಬಂದಿತು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top