ಬೆಳ್ತಂಗಡಿ: 'ನಮ್ಮ ಕ್ಲಿನಿಕ್‌ʼ ನಲ್ಲಿ ಉಚಿತ ದಂತ ಆರೋಗ್ಯ ಶಿಬಿರ

Upayuktha
0

ಬೆಳ್ತಂಗಡಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇಂದು (ಜೂ.5) ಭಾರತೀಯ ದಂತ ವೈದ್ಯರ ಸಂಘ (Indian Dental Association- IDA), ಪುತ್ತೂರು ಶಾಖೆಯ ಸಹಯೋಗದಲ್ಲಿ ನಮ್ಮ ಕ್ಲಿನಿಕ್, ಬೆಳ್ತಂಗಡಿಯಲ್ಲಿ ಉಚಿತ ಬಾಯಿ ಮತ್ತು ದಂತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.


ಶಿಬಿರದಲ್ಲಿ ಸಾರ್ವಜನಿಕರಿಗೆ ದಂತ ತಪಾಸಣೆ ನಡೆಸಲಾಯಿತು. ಭಾರತೀಯ ದಂತ ವೈದ್ಯರ ಸಂಘ (IDA) ಪುತ್ತೂರು ಶಾಖೆಯ ದಂತ ವೈದ್ಯರಾದ ಡಾ. ರೇಶ್ಮಾ ಭಟ್ ಅವರು ರೋಗಿಗಳ ದಂತ ಹಾಗೂ ಬಾಯಿ ಆರೋಗ್ಯ ತಪಾಸಣೆ ನಡೆಸಿ, ಬಾಯಿ ಮತ್ತು ದಂತ ಆರೋಗ್ಯದ ಮಹತ್ವ, ಸರಿಯಾದ ದಂತ ಸ್ವಚ್ಛತಾ ಕ್ರಮಗಳು ಹಾಗೂ ಉತ್ತಮ ಆರೋಗ್ಯಕ್ಕಾಗಿ ಬಾಯಿ ಸ್ವಚ್ಛತೆಯ ಅಗತ್ಯತೆಯ ಕುರಿತು ಆರೋಗ್ಯ ಶಿಕ್ಷಣ ಮತ್ತು ಜಾಗೃತಿ ಮೂಡಿಸಿದರು.


ವಿಶ್ವ ಪರಿಸರ ದಿನದ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಸಂದೇಶ ನೀಡಿದರು.


ಕಾರ್ಯಕ್ರಮದಲ್ಲಿ ಚೈತ್ರಾ- ಆರೋಗ್ಯ ನಿರೀಕ್ಷಕಿ (Health Inspector), ಜಯಶ್ರೀ-ಸ್ಟಾಫ್ ನರ್ಸ್, ನಮ್ಮ ಕ್ಲಿನಿಕ್ ಕೇಂಬ್ರಜೆ (Kembarje) ಹಾಗೂ ನಮ್ಮ ಕ್ಲಿನಿಕ್‌ನ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಶಿಬಿರವು ಯಶಸ್ವಿಯಾಗಿ ನಡೆಯಿತು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top