'ಬಣ್ಣಗಳ ಚಿತ್ತಾರ' ಪುಸ್ತಕ ಲೋಕಾರ್ಪಣೆ

Upayuktha
0


ಮಂಗಳೂರು: ಕೊಂಕಣಿ ಲೇಖಕ, ಕವಿ ಹಾಗೂ ಪತ್ರಕರ್ತ ಆವಿಲ್ ರಸ್ಕಿನ್ಹಾ ಅವರ ಪ್ರಥಮ ಕನ್ನಡ ಕವನ ಸಂಕಲನ 'ಬಣ್ಣಗಳ ಚಿತ್ತಾರ' ಪುಸ್ತಕದ ಲೋಕಾರ್ಪಣೆ ಸಮಾರಂಭ ಮೇ 31 ರಂದು ಸಂಜೆ 4.30ಕ್ಕೆ ಮಂಗಳೂರಿನ ಎಂ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಜರಗಿತು.


ಪುಸ್ತಕ ಲೋಕಾರ್ಪಣೆಗೊಳಿಸಿದ ಕರ್ನಾಟಕ ರಾಜ್ಯೋತ್ಸವ ಕನ್ನಡ ಸಾಹಿತ್ಯ ಪ್ರಶಸ್ತಿ ವಿಜೇತ ವಂ। ಪ್ರಶಾಂತ್ ಮಾಡ್ತ ಮಾತನಾಡಿ ಕವಿತೆಗಳನ್ನು ರಚಿಸುವ ವಿಧಾನ ಇಂದು ಬದಲಾಗಿದೆ. ದಶಕಗಳ ಹಿಂದೆ ಪ್ರಾಸ ಮತ್ತು ಅಲಂಕಾರಕ್ಕೆ ಹೆಚ್ಚು ಮಹತ್ವ ಕೊಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಭಾವನೆ ಮತ್ತು ವಿಚಾರ ಓದುಗರಿಗೆ ಮನದಟ್ಟಾಗುವ ರೀತಿಯಲ್ಲಿ, ಹೃದಯ ಸ್ಪರ್ಶಿಸುವ ರೀತಿಯಲ್ಲಿ ಪ್ರತಿಪಾದಿಸುವುದಕ್ಕೆ ಹೆಚ್ಚು ಮಹತ್ವ ಕೊಡಲಾಗುತ್ತದೆ. ಇದು ಸ್ವಾಗತಾರ್ಹ ಬದಲಾವಣೆ. ಕವಿ ಆವಿಲ್ ರಸ್ಕಿನ್ಹಾ ಮಾನವ ಜೀವನದ ಮತ್ತು ಪ್ರಕೃತಿಯ ಬಗ್ಗೆ ಸೊಗಸಾಗಿ ಕವಿತೆಗಳನ್ನು ಪೋಣಿಸಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಮುಖ್ಯ ಅತಿಥಿಗಳಾಗಿದ್ದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಎಂ ಪಿ.ಶ್ರೀನಾಥ್ ಮಾತನಾಡಿ ಬಣ್ಣಗಳ ಚಿತ್ತಾರ ಕವನ ಸಂಕಲನದಲ್ಲಿ ಓದುಗರ ಮನ ಸೆಳೆಯುವ ಅನೇಕ ಕವಿತೆಗಳು ಇವೆ. ಇಂದಿನ ಯುವಜನತೆ ಸಾಹಿತ್ಯದ ಒಲವು ಹೆಚ್ಚಿಸಿಕೊಳ್ಳಬೇಕಾದ ಅವಶ್ಯಕತೆ ಇದೆ' ಎಂದು ಹೇಳಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟೇನಿ ಅಲ್ವಾರಿಸ್ ಮತ್ತು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಆನಿಲ್‌ ಲೋಬೊ ಅವರು ಕವಿ ಆವಿಲ್ ರಸ್ಕಿನ್ಹಾರವರನ್ನು ಅಭಿನಂದಿಸಿ ಶುಭ ಹಾರೈಸಿದರು.


ಕು. ಮೆಲಿಶಾ ಫೆರ್ನಾಂಡಿಸ್ ಪ್ರಾರ್ಥನಾ ಗೀತೆ ಹಾಡಿದರು. ಆವಿಲ್ ರತ್ನನ್ಹಾ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ಫೆಲ್ಸಿ ಲೋಬೋ ಪುಸ್ತಕ ಪರಿಚಯಿಸಿದರು. ಜಿಯೊ ಆಗ್ರಾರ್ ಕಾರ್ಯಕ್ರಮ ನಿರೂಪಿಸಿದರು. ಮಾರಿಯೆಟ್ ರಸ್ಕಿನ್ಹಾ ವಂದಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top