ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ

Upayuktha
0


ಬಾಗಲಕೋಟೆ: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನ ನೀಡಲಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ತಿಮ್ಮಾಪುರ ಗ್ರಾಮದ ವೇದಮೂರ್ತಿ ನಿವೃತ್ತ ಶಿಕ್ಷಕ ಬಸಯ್ಯನವರು ಹಿರೇಮಠ ಹೇಳಿದರು.


ಅವರು ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ಯ ಗ್ರಾಮದ ಗ್ರಾಮ ದೇವತೆಗಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಲಿಂಗಸೂರ ಗ್ರಾಮದ ಶ್ರೀಮತಿ ಸರೋಜಿನಿ ದೇವಿ ಶೇಖರಗೌಡ ಪಾಟೀಲ್ ರವರ ತವರು ಗ್ರಾಮವಾದ ತಿಮ್ಮಾಪುರದ ಎಲ್ಲ ಮಹಿಳೆಯರಿಗೆ ಹಾಗೂ ಕುಟುಂಬದವರು ಹೇಮರೆಡ್ಡಿ ಮಲ್ಲಮ್ಮಳ ದೇವಸ್ಥಾನದಲ್ಲಿ ಉಡಿ ತುಂಬುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.


ಅಂತಹ ಸಂಪ್ರದಾಯ ವನ್ನು ಎಂದಿಗೂ ಪಾಲಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ ಶುಭ ಕಾರ್ಯಗಳಲ್ಲಿ ಅಥವಾ ವಿಶೇಷ ಪೂಜೆಗಳಲ್ಲಿ ನೆರೆದ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ ಹುಡಿ ತುಂಬಿ ಗೌರವಿಸುವುದು, ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿವೆ ಮಂಗಳವಾಗಲಿ ಎಂದು ಹಾರೈಸಲಾಗುವುದು ಎಂದರು.


ಹಿಂದೂ ಸಂಪ್ರದಾಯಗಳಲ್ಲಿ ಅತ್ಯಂತ ಮಂಗಳಕರ ಮತ್ತು ಪವಿತ್ರವಾದ ಆಚರಣೆಯಾಗಿದೆ ಇದು ಸಮೃದ್ಧಿ ಸಂತಾನ ಮತ್ತು ಒಳಿತನ್ನು ಆಶಿಸುವ ಸಂಕೇತವಾಗಿದೆ ದೇವಸ್ಥಾನಗಳಲ್ಲಿ ವಿಶೇಷ ಹಬ್ಬಗಳು ಅಥವಾ ಅಧಿಕಮಾಸ ಜಾತ್ರೆ ಗ್ರಾಮ ದೇವತೆಯ ಪೂಜೆ ಮುಂತಾದ ಸಂದರ್ಭಗಳಲ್ಲಿ ಉಡಿ ತುಂಬಲಾಗುತ್ತಿದೆ, ಎಂದು ಹೇಳಿದರು ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಉಡಿ ತುಂಬಿಸಿಕೊಂಡರು, ವೇದಿಕೆಯಲ್ಲಿ ಗಿರೀಶ್ ಗೌಡ ದಾದ್ಮಿ ಇತರರು ಇದ್ದರು.

ಸರೋಜಿನಿದೇವಿ ಪಾಟೀಲ್ ಸ್ವಾಗತಿಸಿದರು. ಜಯಶ್ರೀ ದಾದಮಿ ವಂದಿಸಿದರು ಇದೇ ಸಂದರ್ಭದಲ್ಲಿ ಗ್ರಾಮದ ಮಹಿಳೆಯರ ಪರವಾಗಿ ಉಡಿ ತುಂಬುವ ಕಾರ್ಯಕ್ರಮವನ್ನು ನಡೆಸಿಕೊಟ್ಟ ಸರೋಜಿನಿ ದೇವಿ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top