ಅಥಣಿ: ರೋಗಮುಕ್ತ ಮತ್ತು ರಾಸಾಯನಿಕ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ

Upayuktha
0

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ನಗರದ ಆರ್ ಹೋಟೆಲ್‌ನಲ್ಲಿ ಮೈಸೂರಿನ ಧನ್ವಂತರಿ ಲೋಕಸಿರಿ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ (DLS) ವತಿಯಿಂದ ರೋಗಮುಕ್ತ ಮತ್ತು ರಾಸಾಯನಿಕ ಮುಕ್ತ ಭಾರತ ಕಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಜಾಗೃತಿ ಮೂಡಿಸುವ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.


ಮೈಸೂರಿನಿಂದ ಆಗಮಿಸಿದ ಡಿ ಎಲ್ ಎಸ್ ಸೇಲ್ಸ್ ಹೆಡ್ ಮತ್ತು ಮಾರ್ಗದರ್ಶಕರಾದ ಚರಣ್ ರಾಜ್, ಡಿ ಎಲ್ ಎಸ್ ಚಾಂಪಿಯನ್ ತಂಡದ ಸಂಸ್ಥಾಪಕ ವಿಜಯಕುಮಾರ್ ಕೆ.ಸಿ. ಹಾಗೂ ಡಿ ಎಲ್ ಎಸ್ ಸಿಲ್ವರ್ ಡೈರೆಕ್ಟರ್ ರೇಖಾ ಎಸ್. ಅವರನ್ನು ಭವ್ಯ ಮೆರವಣಿಗೆಯ ಮೂಲಕ ಹೂಹರ ಹಾಕಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ವೇದಿಕೆಯ ಮೇಲೆ ರೈತ ಗೀತೆಯನ್ನು ಹಾಡುವ ಮೂಲಕ ರೈತರಿಗೆ ಗೌರವ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.


ಜನರ ಆರೋಗ್ಯದ ಕುರಿತು ಮಾತನಾಡಿದ ಚರಣ್ ರಾಜ್, ಆಯುರ್ವೇದ ಗಿಡಮೂಲಿಕೆಗಳು, ಹಣ್ಣುಗಳು ಮತ್ತು ಮನೆಯಲ್ಲಿರುವ ಆಹಾರ ಪದಾರ್ಥಗಳಿಂದ ದೇಹದಲ್ಲಿ ಸಮತೋಲನ ತಂದು ರೋಗಗಳಿಗೆ ಚಿಕಿತ್ಸೆ ನೀಡುವ ಪ್ರಾಚೀನ ವೈದ್ಯಕೀಯ ಪದ್ಧತಿ ಇದಾಗಿದೆ. ಇದು ಕೇವಲ ರೋಗಲಕ್ಷಣಗಳನ್ನು ಮಾತ್ರ ಗುಣಪಡಿಸದೆ, ದೇಹ, ಮನಸ್ಸು ಮತ್ತು ಆತ್ಮವನ್ನು ಒಟ್ಟಾರೆಯಾಗಿ ಪರಿಗಣಿಸಿ ಮನುಷ್ಯ ರೋಗಮುಕ್ತನಾಗಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.


ರೈತರನ್ನುದ್ದೇಶಿಸಿ ಮಾತನಾಡಿದ ವಿಜಯಕುಮಾರ್ ಕೆ.ಸಿ., ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಹಾಳಾಗಿರುವ ಕೃಷಿ ಭೂಮಿಯನ್ನು ವಿಷಮುಕ್ತವನ್ನಾಗಿ ಮಾಡಲು ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿಗಳೇ ಮುಖ್ಯ ದಾರಿಯಾಗಿದೆ. ಧನ್ವಂತರಿ ಲೋಕಸಿರಿ ಬಯೋಟೆಕ್ ಸಂಸ್ಥೆಯಿಂದ ತಯಾರಾಗಿರುವ ಸಾವಯವ ಔಷಧಗಳನ್ನು ಉಪಯೋಗಿಸುವುದರಿಂದ ಕಡಿಮೆ ಖರ್ಚಿನಲ್ಲಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು ಎಂದರು.


ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಗತಿಪರ ರೈತ ಚಿದಾನಂದ ದರೂರ ಮಾತನಾಡಿ, ರಾಸಾಯನಿಕಗಳ ಬಳಕೆ ಮಾಡದೆ ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಗಳನ್ನು ಬಳಸುವುದರಿಂದ ಮನೆಯ ಆರೋಗ್ಯವನ್ನು ಕಾಪಾಡಬಹುದು. ಬಸವಣ್ಣನವರು ಹೇಳಿದಂತೆ 'ಕಾಯಕವೇ ಕೈಲಾಸ' ತತ್ವದಂತೆ ರೈತರು ಶ್ರಮಿಸಬೇಕು ಮತ್ತು ಪ್ರತಿಯೊಬ್ಬರೂ ಹಸು, ಎಮ್ಮೆಗಳನ್ನು ಸಾಕಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮವನ್ನು 7 ಸ್ಟಾರ್ ಅಥಣಿ ಟೀಮ್ ಲೀಡರ್ ಬಂದೆ ನವಾಜ್ ಗಡ್ಡೇಕರ ಹಾಗೂ ಆಶಿಪ್ ಮುಲ್ಲಾ ಅವರು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಗುರುದೇವ ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಮಹಾದೇವ ನಾಯಿಕ, ನಿಂಗಪ್ಪಾ ಹಡಪದ, ಮಲ್ಲಪ್ಪಾ ಕೆಂಪವಾಡ, ಮುತ್ತಪ್ಪಾ ದನ್ಯಾಳ, ಬಸಪ್ಪಾ ದನ್ಯಾಳ, ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖಂಡ ಪ್ರವೀಣ ನಾಯಿಕ, ಚನ್ನಪ್ಪಾ ಪಾಟೀಲ ಹಾಗೂ ಸುರೇಶ ಪಾಟೀಲ ಉಪಸ್ಥಿತರಿದ್ದರು.


ಪ್ರವೀಣ ನಾಡಗೌಡ, ಈರಪ್ಪಾ ರೋಗಿ, ಸಿದ್ರಾಯ ಸಾತನವರ, ಅನಿಲ ಭಾಮನೆ, ಶರಣಪ್ಪಾ ಶಿಂಧೆ, ಮಹೇಶ ಶರ್ಮಾ, ಶಿವಾನಂದ ನಾವಿ, ಸುರೇಖಾ ಜಾಧವ, ಸೃಷ್ಟಿ ನಾಯಿಕ, ಕವಿತಾ ಬೋಸಲೆ, ಬೌರವಾ ದನ್ಯಾಳ, ಶಂಕರ ಪಾಟೀಲ, ಅಸ್ಲಾಂ ಮುಲ್ಲಾ, ವಿಶ್ವನಾಥ ಭಂಡಾರೆ, ಆದಿತ್ಯ ನಾಯಿಕ, ಅಖಿಲೇಶ ನಾಯಿಕ, ಶರದ ಶೆಟ್ಟಿ, ಸಂತೋಷ ನಾಯಿಕ, ಸುರೇಶ ಮಡಿವಾಳ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.


ಶಿವಲೀಲಾ ಪಟ್ಟಣಶೆಟ್ಟಿ ಅವರು ಕಾರ್ಯಕ್ರಮದ ನಿರೂಪಣೆ ಹಾಗೂ ಸಂಗೀತ ಸೇವೆಯನ್ನು ಪ್ರಸ್ತುತಪಡಿಸಿದರು. ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಶಕ್ತಿದಳದ ಸಿಬ್ಬಂದಿಗಳಾದ ಅಶೋಕ ಬಡಿಗೇರ ಮತ್ತು ರಾಜು ಸಿಂಧೆ ಅವರು ಬುದ್ಧನ ಮೂರ್ತಿಗೆ ಹೂವಿನ ಮಾಲೆ ಹಾಕಿ ಗೌರವ ಸಲ್ಲಿಸಿದ್ದಲ್ಲದೆ, ಕಾರ್ಯಕ್ರಮದ ಭದ್ರತೆಯ ಜವಾಬ್ದಾರಿಯನ್ನು ನಿರ್ವಹಿಸಿದರು.


ವರದಿ: ಮಹೇಶ ಶರ್ಮಾ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top