ವಿದ್ಯಾರ್ಥಿಗಳಿಗೆ, ಜನನಾಯಕರಿಗೆ ಸನ್ಮಾನ, ಪುಸ್ತಕ ವಿತರಣೆ
ಕಾಸರಗೋಡು: ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಆಶ್ರಯದಲ್ಲಿ ಸಂಘದ 42ನೇ ವಾರ್ಷಿಕೋತ್ಸವವನ್ನು ಕುಂಜತ್ತೂರು ತೂಮಿನಾಡಿನಲ್ಲಿರುವ ಜಿಲ್ಲಾ ಕುಲಾಲ ಸಮುದಾಯ ಭವನದಲ್ಲಿ ಮೇ 31ರಂದು ಸಂಭ್ರಮದಿಂದ ಆಚರಿಸಲಾಯಿತು.
ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ, ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಕೇರಳ ಮಣ್ ಪಾತ್ರ ನಿರ್ಮಾಣ ಸಮುದಾಯ ಸಭಾದ ರಾಜ್ಯ ಅಧ್ಯಕ್ಷರಾದ ರಾಜೇಶ್ ಪಾಲಂಗಾಟ್ ದೀಪ ಪ್ರಜ್ವಲನೆ ಮಾಡಿ ಶುಭ ಕೋರಿದರು.
ಅಖಿಲ ಭಾರತ ಗ್ರಾಹಕರ ಕಲ್ಯಾಣ ಪರಿಷತ್‌ನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಮೈಸೂರಿನ ಡಾ. ಎಂ.ಪಿ. ವರ್ಷ ಮಾತನಾಡಿ, ಕುಂಬಾರ ಜನಾಂಗದವರ ಸಾಧನೆಯ ಇತಿಹಾಸವನ್ನು ಮೆಲುಕು ಹಾಕುತ್ತಾ ಮಹಾರಾಷ್ಟ್ರದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಡಾ.ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆಯಲ್ಲಿ ಸಹಕಾರ ನೀಡಿದ ರತ್ನಪ್ಪ ಪರಮಪ್ಪ ಕುಂಬಾರ್ ಅವರ ಕುರಿತು ವಿವರಿಸಿ ಮಾಹಿತಿಯನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಸ್‌ಎಫ್‌ನ ನಿವೃತ್ತ ಕಮಾಂಡೆಂಟ್ ಉಪ್ಪಿನಂಗಡಿಯ ಚಂದಪ್ಪ ಮೂಲ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯಿತಿಯ ಉಪಾಧ್ಯಕ್ಷರಾದ ಕಮಲಾಕ್ಷಿ ವಿ. ಕುಲಾಲ್, ಕೇರಳ ಮಣ್ ಪಾತ್ರ ನಿರ್ಮಾಣ ಸಮುದಾಯದ ರಾಜ್ಯ ಉಪಾಧ್ಯಕ್ಷರಾದ ಕೆ. ಭಾಸ್ಕರನ್ ಕೇರಳ ಮಣ್ ಪಾತ್ರ ನಿರ್ಮಾಣ ಸಮುದಾಯದ ರಾಜ್ಯ ಕಾರ್ಯದರ್ಶಿ ಕೆ. ವಿಜಯನ್, ಕೇರಳ ಮಣ್ ಪಾತ್ರ ನಿರ್ಮಾಣ ಸಮುದಾಯ ಸಭಾದ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಕೆ. ಜಿತೇಶ್ ಕುಮಾರ್‌ಕೆ. ಜಿತೇಶ್ ಕುಮಾರ್, ಮೀಂಜ ಮೀಯಪದವು ಕೃಷಿ ಅಧಿಕಾರಿ ಚಂಚಲಾ, ಉದ್ಯಮಿ ಕೊರಗಪ್ಪ ಜೆ. ಬಂಜನ್, ದಯಾನಂದ ಮುಜಂಗಾವು, ರವೀಂದ್ರ ಸಾಲ್ಯಾನ್, ಸುಜಿತ್ ಕೊಂಚಾಡಿ, ಹೂವಯ್ಯ ನೂಜಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.
ಕುಲಾಲ ಸಾಧಕ ಪ್ರಶಸ್ತಿ: ಸೇಸಮ್ಮ ನಾರಾಯಣ ಮೂಲ್ಯ ಮುನ್ನಿಪ್ಪಾಡಿ, ಲೀಲಾ ಟೀಚರ್ ಪೆರ್ಮುದೆ, ರಾಮಚಂದ್ರ ಬಡಾಜೆ, ಶ್ರೀನಿವಾಸ ಮೂಲ್ಯ, ಹೇರೂರು, ಕೆ. ಸೀತಾರಾಮ ಕುಲಾಲ್ ಕಣ್ವತೀರ್ಥ, ಮೋಹನ ಕಡಂಬಾರು, ಚಂದ್ರಹಾಸ ದೈಗೋಳಿ, ಸತೀಶ್ ದೈಗೋಳಿ, ಕೃಷ್ಣ ಎನ್. ನೆಲ್ಲಿಕಳಯ, ಡಾ. ಆನಂದ ಎಂ. ಕಿದೂರು, ರಾಮ ತುಳುವನ ಉಪ್ಪಿನೆ, ಸಂದೀಪ್ ಕೋಳ್ಯೂರು, ಚಂದ್ರಶೇಖರ್ ಬೇಡಗುಡ್ಡೆ, ಕು. ನಮಿತಾ ಕೆ.ಜಿ, ಕುಮಾರ್ ಸುದೀಪ್ ಪಳ್ಳತಡ್ಕ ಮೀಯಪದವು ಇವರಿಗೆ ಕುಲಾಲ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜನನಾಯಕರಿಗೆ ಸನ್ಮಾನ: ಕೇರಳ ತ್ರಿಸ್ತರ ಪಂಚಾಯಿತಿ ಚುನಾವಣೆಯಲ್ಲಿ ಸ್ಫರ್ಧಿಸಿ ವಿಜೇತರಾದ ಕಮಲಾಕ್ಷಿ ವಿ. ಕುಲಾಲ್ ವರ್ಕಾಡಿ, ಶಾಂತಾಕುಮಾರಿ ಬೋಳಂತಕೋಡಿ, ಲತೇಶ್ ಕೆ. ಮಜಿಬೈಲ್, ಗೋಪಾಲಕೃಷ್ಣ ಪಜ್ವ ಕೊಡ್ಲಮೊಗರು, ಮಾಲತಿ ಕೆ, ಗಾಯತ್ರಿ ರವೀಂದ್ರ ಕಾಯರಡ್ಕ, ಚಂದಶೇಖರ ಗುದ್ದಲಕೋಡಿ, ಐತಪ್ಪ ಕುಲಾಲ್ ನಲ್ಕ, ವಿಜಯ ಕುಲಾಲ್, ಜಗದೀಶ್ ಎಣ್ಮಕಜೆ, ಮಹೇಶ್ ಅಜ್ಜಿಮೂಲೆ, ಸೀತಾ ಭಾಸ್ಕರ್ ತಚ್ಚಾಣಿ ಇವರುಗಳನ್ನು ಜನಪ್ರತಿನಿಧಿಗಳಡಿಯಲ್ಲಿ ಜಿಲಾ ಸಂಘದ ಪರವಾಗಿ ಅಭಿನಂದಿಸಲಾಯಿತು.
ವಿರ್ದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ 40ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ವಿಶೇಷ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಹಾಯಧನ ವಿತರಣೆ: ಕುಲಾಲ ಸಂಘದ 15 ಮತ್ತು 16ನೇ ಆಸರೆ ಕಾರ್ಯಕ್ರಮದಡಿಯಲ್ಲಿ ಇಬ್ಬರು ಫಲಾನುಭವಿಗಳಿಗೆ ಸಹಾಯಧನವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಪುಸ್ತಕ ವಿತರಣೆ: ಈ ಸಂದಭದಲ್ಲಿ ಸಂಘದ ವತಿಯಿಂದ ಸುಮಾರು 400ಕ್ಕಿಂತಲೂ ಅಧಿಕ ಮಕ್ಕಳಿಗೆ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು.
ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಪ್ರಸಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ದಾಮೋದರ ಮಾಸ್ಟರ್ ಕಬ್ಬಿನಹಿತ್ತಿಲು ವಂದಿಸಿದರು. ಯುವ ಸಾಹಿತಿ ನವೀನ್ ಕುಲಾಲ್ ಕಜೆ ಚಿಪ್ಪಾರು ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳು, ಕಟ್ಟಡ ಸಮಿತಿಯ ಪದಾಧಿಕಾರಿಗಳು ಮತ್ತು 10 ಪಂಚಾಯತ್ ಶಾಖೆಗಳ ಅಧ್ಯಕ್ಷರು ಮತ್ತು ಪ್ರತಿನಿಧಿಗಳು ಭಾಗವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


