ಬದಿಯಡ್ಕ: ಕುಂಬಡಾಜೆ ಗ್ರಾಮ ಪಂಚಾಯತ್ ಮಟ್ಟದ ವಿಶ್ವ ಪರಿಸರ ದಿನಾಚರಣೆಯು ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆ, ಅಗಲ್ಪಾಡಿಯಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಯಶೋದಾ ಎನ್ ಸಸಿ ನೆಡುವ ಮೂಲಕ ಔಪಚಾರಿಕವಾಗಿ ಉದ್ಘಾಟಿಸಿದರು. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಪ್ರಿಯಾಂಕಾ ಎ.ಸಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ನಯನ ಕುಮಾರಿ, ಶಾಲಾ ವಾರ್ಡ್ ಸದಸ್ಯೆ ಶ್ರೀಮತಿ ಸೌಭಾಗ್ಯಲಕ್ಷ್ಮಿ, ಮೂರನೇ ವಾರ್ಡ್ ಸದಸ್ಯ ಎಸ್. ಅಬ್ದುಲ್ ಕುಞ್ಞಿ, ಕೃಷಿ ಭವನದ ಕೃಷಿ ಅಧಿಕಾರಿ ಗಿರೀಶ್, ಪಿ.ಟಿ.ಎ. ಅಧ್ಯಕ್ಷ ನಟರಾಜ ಕೆ. ಹಾಗೂ ಶಾಲಾ ವ್ಯವಸ್ಥಾಪಕ ನಾರಾಯಣ ಶರ್ಮ ಬಿ ಶುಭಾಶಂಸನೆಗೈದರು.
ಸ್ಕೌಟ್ & ಗೈಡ್ಸ್ ವಿದ್ಯಾರ್ಥಿಗಳು ಪ್ರಕೃತಿ ಗೀತೆ ಹಾಡಿದರು. ಎಲ್ಲ ವಿದ್ಯಾರ್ಥಿಗಳು ಈ ವರ್ಷದ ಧ್ಯೇಯವಾಕ್ಯದಂತೆ ಸಸ್ಯ ಸಂಪತ್ತನ್ನು ಬೆಳೆಸಿ ಸಂರಕ್ಷಿಸುವುದರೊಂದಿಗೆ, ಪ್ರಕೃತಿಗೆ ಹಾನಿಕಾರಕವಾದ ತ್ಯಾಜ್ಯಗಳನ್ನು ಕನಿಷ್ಠಗೊಳಿಸಿ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಸ್ವೀಕರಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಗಿರೀಶ್ ಎನ್ ಸ್ವಾಗತಿಸಿದರು. ಸ್ಟಾಫ್ ಕೌನ್ಸಿಲ್ ಕಾರ್ಯದರ್ಶಿ ಹರಿನಾರಾಯಣ ಎಸ್ ವಂದನಾರ್ಪಣೆಗೈದರು. ಕನ್ನಡ ಅಧ್ಯಾಪಕ ರಾಧಾ ಮಾಧವ ಎ. ನಿರೂಪಣೆ ನಡೆಸಿದರು. ಶಾಲಾ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಹಕರಿಸಿದರು.
ಶಾಲಾ ಇಕೋ ಕ್ಲಬ್ ವತಿಯಿಂದ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ಸಂರಕ್ಷಣೆಯ ಹೊಣೆ ವಹಿಸಲಾಯಿತು. ಕುಂಬಡಾಜೆ ಕೃಷಿ ಭವನ ಹಾಗೂ ಬದಿಯಡ್ಕ ಅಬಕಾರಿ ಇಲಾಖೆ ಉತ್ತಮ ತಳಿಯ ಹಣ್ಣಿನ ಗಿಡಗಳು ಮತ್ತು ನೆರಳು ನೀಡುವ ಮರಗಳ ಸಸಿಗಳನ್ನು ಒದಗಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


