ಸರಕಾರಿ ಶಾಲೆಯಲ್ಲಿ ಕಲಿತ ಸಾಧಕರೇ ಪ್ರೇರಕರು - ವೇದವ್ಯಾಸ ಕಾಮತ್

Upayuktha
0

 


ಮಂಗಳೂರು: ಸರಕಾರಿ ಶಾಲೆ ಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಸಾಧನೆ ಮಾಡಿದ ಅಸಂಖ್ಯ ಸಾಧಕರು ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಪ್ರೇರಕರು. ವರ್ಷ ದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಈ ಶಾಲೆ ಯಲ್ಲಿ ಹೆಚ್ಚಲು ಕಾರಣರಾದ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಪೋಷಕರು ಅಭಿನಂದಾರ್ಹರು ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅಭಿನಂದಿಸಿದರು.


ಅವರು ಜೂ. 16 ರಂದು ಟ್ರೈನಿಂಗ್ ಶಾಲೆ ಎಂದು ಪ್ರಸಿದ್ದಿ ಪಡೆದ, ಶತಮಾನ ಗಳ ಇತಿಹಾಸಉಳ್ಳ ಬಲ್ಮಠ ದ. ಕ. ಜಿ ಪಂ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಗಳೂರು ಉತ್ತರ ಇಲ್ಲಿ ವಿವೇಕ ಯೋಜನೆ ಅಡಿಯಲ್ಲಿ ನಿರ್ಮಾಣವಾದ ನೂತನ ಶಾಲಾ ಕಟ್ಟಡದ ಉದ್ಘಾಟನೆ ಹಾಗೂ ಹಳೆ ವಿದ್ಯಾರ್ಥಿಗಳಿಂದ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನುಡಿದರು.


ನಾಲ್ಕು ಕೊಠಡಿಗಳ ನೂತನ ಕಟ್ಟಡವನ್ನು ಗಿಡಕ್ಕೆ ನೀರೆರೆದು, ದೀಪ ಹಚ್ಚಿ ಶಾಸಕರು ಉದ್ಘಾಟನೆಯನ್ನು ನೆರವೇರಿಸಿದರು.  ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ  ಕದ್ರಿ ನವನೀತ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾ ಶೇಖಬ್ಬಾ , ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವನಿತಾ ದೇವಾಡಿಗ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶರ್ಮಿಳಾ ಶೆಟ್ಟಿ, ಬಿ ಐ ಆರ್  ಟಿ ರವರಾದ  ನಾಗರಾಜ್, CRP ಪ್ರಸಾದ್,ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.


 ಹಳೆ ವಿದ್ಯಾರ್ಥಿಗಳಾದ ವೆಂಕಟೇಶ್ ಎಮ್ , ಸೂರ್ಯಕಾಂತ್ ಶೇಟ್ , ನಿರ್ಮಲ ಎಸ್ ಶೆಟ್ಟಿ , ವಿದ್ಯಾ ರಾಕೇಶ್, ವಿದ್ಯಾ ರಘು ಶೆಟ್ಟಿ , ಲತಾ ಶೆಣೈ, ದೇವದತ್, ನರೇಂದ್ರ ಬಾಳಿಗ ಮೊದಲಾದವರು ಸಮವಸ್ತ್ರ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 


ಇತ್ತೀಚೆಗೆ ಅಗಲಿದ ಹಳೆ ವಿದ್ಯಾರ್ಥಿ ಟಿ. ನಾಗರಾಜ್ ರಾವ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಶಿಕಲಾ ಆರ್ ಇವರ ಸ್ವಾಗತಿಸಿದರು. ಶಿಕ್ಷಕರಾದ ಶ್ರೀಮತಿ ಅನುಸೂಯ  ವಂದಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top