ಎಸ್.ಡಿ.ಎಂ, ಉಜಿರೆ: ವಿಟಿಯು ವಲಯ ಮತ್ತು ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ತೆರೆ

Upayuktha
0

 ಮಂಗಳೂರು ವಲಯ ಚಾಂಪಿಯನ್ಸ್ ಎಜೆಐಇಟಿ ಪ್ರಥಮ, ವಿಸಿಇಟಿ ದ್ವಿತೀಯ

 

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಒಳಾಂಗಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಂಗಳೂರು ವಲಯ ಅಂತರ್ ಕಾಲೇಜುಗಳ ಪುರುಷರ ಕಬ್ಬಡ್ಡಿ ಪಂದ್ಯಾಟ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ್ ವಲಯ ಕಾಲೇಜುಗಳ ರಾಜ್ಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟಕ್ಕೆ ತೆರೆ ಎಳೆಯಲಾಯಿತು.

 

ಎರಡು ದಿನ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ್ ವಲಯಗಳ ರಾಜ್ಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಮಂಗಳೂರಿನ ಎಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಹಾಗೂ ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ಪುರುಷರ ತಂಡವು ಫೈನಲ್ ಪ್ರವೇಶ ಪಡೆಯಿತು. ಅಂತಿಮ ಸುತ್ತಿನಲ್ಲಿ ಮಂಗಳೂರಿನ ಎಜೆ ಇನ್ಸ್ಟಿಟ್ಯೂಟ್ ತಂಡವು 35-24 ಅಂಕಗಳ ಅಂತರದಿಂದ ಚಾಂಪಿಯನ್ ಪಟ್ಟ ಅಲಂಕರಿಸಿತು.

 

ಚಿಕ್ಕಬಳ್ಳಾಪುರದ ಶ್ರೀ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡವು ತೃತೀಯ ಸ್ಥಾನ ಪಡೆದರೆ, ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ದಿನ ರಾಜ್ಯದ ಬೆಂಗಳೂರು, ಬೆಳಗಾವಿ, ಕಲಬುರ್ಗಿ,ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳ ಸುಮಾರು 16 ತಂಡಗಳು ಭಾಗವಹಿಸಿದ್ದವು.

 

ಮೇ 15ರಂದು ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಂಗಳೂರು ವಲಯದ ಅಂತರ್ ಕಾಲೇಜುಗಳ ಪಂದ್ಯಾಟದಲ್ಲಿ ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ಪುರುಷರ ತಂಡವು ಮಂಗಳೂರಿನ ಎಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಎದುರಿಸಿ 36 -35 ಅಂಕಗಳ ಅಂತರದಿಂದ ಜಯ ಸಾಧಿಸಿತು. ಮಂಗಳೂರಿನ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತೃತೀಯ ಹಾಗೂ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ದಿನ ವಲಯದ ಸುಮಾರು 14 ಅಂತರ್ ಕಾಲೇಜುಗಳ ತಂಡವು ಸ್ಪರ್ಧಿಸಲಿದ್ದವು.

 

ಪಂದ್ಯಾವಳಿಯನ್ನು ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರೊ ಕಬಡ್ಡಿ ಖ್ಯಾತಿಯ ರಾಷ್ಟ್ರೀಯ ಕಬಡ್ಡಿ ಆಟಗಾರ ಗಗನ್ ಗೌಡ ಉದ್ಘಾಟಿಸಿದ್ದರು. ರಾಜ್ಯ ಮಟ್ಟದ ಪಂದ್ಯಾಟವನ್ನು ಅಂತಾರಾಷ್ಟ್ರೀಯ ಕಬ್ಬಡ್ಡಿ ತರಬೇತುದಾರರಾದ ರವೀಂದ್ರ ಶೆಟ್ಟಿ ಚಾಲನೆ ನೀಡಿದ್ದರುಇದೇ ವೇಳೆ ಬೆಳ್ತಂಗಡಿ ವಿಭಾಗದ ಡೆಪ್ಯುಟಿ ರೇಂಜ್ ಅರಣ್ಯ ಅಧಿಕಾರಿ ರಂಜಿತ್ ಕುಮಾರ್ ಎಸ್ ಭಾಗಿಯಾಗಿದ್ದರು.

 

ಸಮಾರೋಪ ಸಮಾರಂಭದಲ್ಲಿ ಉಜಿರೆಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ಟಿ ಸೇರಿದಂತೆ ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ಕಬ್ಬಡಿ ತರಬೇತುದಾರ ಉಜಿರೆಯ ಕೃಷ್ಣಾನಂದ ರಾವ್ ಹಾಗೂ ಬೆಳಗಾವಿ ವಿಟಿಯು ದೈಹಿಕ ಶಿಕ್ಷಣ ವಿಭಾಗದ ಡಾ. ರಾಜೇಶ್ ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಿದರು.

 

ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ತಂಡಗಳು ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಡಾ. ರವೀಶ್ ಪಡುಮಲೆ ನಿರೂಪಿಸಿದರು. ಉಜಿರೆಯ ಐಟಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಭಾಕರ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿದರು.

 

ವಿಟಿಯು ಕಬಡ್ಡಿ ತಂಡದ ಆಯ್ಕೆ ಪರೀಕ್ಷೆ:

 

ಪಂದ್ಯಾಟ ಮುಕ್ತಾಯದ ಬಳಿಕ ವಿಟಿಯು ಕಬಡ್ಡಿ ತಂಡದ ಆಯ್ಕೆ ಪರೀಕ್ಷೆ ನಡೆಯಿತು. ಸಂದರ್ಭ ರಾಜ್ಯದ ವಿವಿಧ ಕಾಲೇಜುಗಳಿಂದ ಸುಮಾರು 125 ಕ್ಕೂ ಅಧಿಕ ಕಬ್ಬಡಿ ಕ್ರೀಡಾ ಪಟುಗಳು ಸಕ್ರೀಯವಾಗಿ ಭಾಗವಹಿಸಿದ್ದರು. ಆಯ್ಕೆ ಸಮಿತಿಯ ಸದಸ್ಯರಾಗಿ ಸೋಮಶೇಖರ್, ಡಾ. ಮುರಳೀಧರ, ಗಂಗಾಧರ್ ಹಾಗೂ ಬಾಲಚಂದ್ರ ಗೌಡ ಕಾರ್ಯನಿರ್ವಹಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top