ಮಾನಸಿಕ ಆರೋಗ್ಯ ಕಾರ್ಯಕ್ರಮಗಳು ಯುವಜನತೆಗೆ ಅಗತ್ಯ: ಡಾ ಪಿ.ವಿ ಭಂಡಾರಿ

Upayuktha
0

  

 ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಡಾ. .ವಿ. ಬಾಳಿಗಾ ಸ್ಮಾರಕ  ಆಸ್ಪತ್ರೆ ದೊಡ್ಡಣಗುಡ್ಡೆ, ಇವರ ಸಹಯೋಗದಲ್ಲಿ ಯುವಜನತೆಯಲ್ಲಿ ಮಾನಸಿಕ ಆರೋಗ್ಯ ಎಂಬ ಮಾಹಿತಿ ಕಾರ್ಯಕ್ರಮ ನಡೆಯಿತು.

 

ಕಾರ್ಯಕ್ರಮದಲ್ಲಿ ಎ.ವಿ.ಬಾಳಿಗ ಆಸ್ಪತ್ರೆಯ ಮನೋವೈದ್ಯರಾದ  ಡಾ. ಪಿ.ವಿ ಭಂಡಾರಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡುತ್ತಾ ಶಾಲಾ ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯದಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ. ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಎರಡೂ ಕೂಡಾ ಪ್ರಾಮುಖ್ಯತೆ ಪಡೆದಿದೆ. ಒತ್ತಡ, ಆತಂಕ ಮತ್ತು ಶೈಕ್ಷಣಿಕ ಒತ್ತಡವನ್ನು ಸರಿಯಾಗಿ ನಿಭಾಯಿಸಲು ವ್ಯಾಯಾಮ, ಕ್ರೀಡೆ ಮತ್ತು ಆರೋಗ್ಯಕರ ಚಟುವಟಿಕೆಗಳನ್ನು ಮಾಡಿ. ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

 


ನಾಗರಾಜ್ ಮೂರ್ತಿ ಇವರು ವಿವಿಧ ರೀತಿಯ ವರ್ತನಾ ವ್ಯಸನಗಳ ಬಗ್ಗೆ ಮಾತನಾಡುತ್ತಾ ಕೇವಲ ಮಾದಕ ವ್ಯಸನಗಳಲ್ಲದೆ, ಕೆಲವು ವರ್ತನೆಗಳೂ ವ್ಯಸನಗಳಾಗುತ್ತವೆ. ಮೊಬೈಲ್‌ ಫೋನ್‌, ಸಾಮಾಜಿಕ ಜಾಲತಾಣಗಳು, ಆನ್‌ ಲೈನ್‌ ಗೇಮಿಂಗ್‌, ಜೂಜಾಟ, ಶಾಪಿಂಗ್, ಅಶ್ಲೀಲ ವಿಷಯ ವೀಕ್ಷಣೆ ಮತ್ತು ಇಂಟರ್‌ ನೆಟ್‌ ಬಳಕೆ ಇವುಗಳು ಮಿತಿ ಮೀರಿದಾಗ ವ್ಯಸನ ಉಂಟಾಗಬಹುದು ಇವುಗಳಿಂದ ಓದು, ಕೆಲಸ, ಕುಟುಂಬ ಜೀವನದ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ಇವುಗಳಿಂದ ಹೊರಬರಲು ಕ್ರೀಡೆ, ಪುಸ್ತಕ ಓದು ಹಾಗೂ ಹವ್ಯಾಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಮೊಬೈಲ್‌ ಮತ್ತು ಇಂಟರ್ನೆಟ್‌ ಬಳಕೆಗೆ ಸಮಯ ಮಿತಿಯನ್ನು ನಾವೇ ಹಾಕಿಕೊಳ್ಳಬೇಕು, ಅಗತ್ಯವಿದ್ದರೆ ಮನೋವೈದ್ಯರ ಸಲಹೆ ಪಡೆಯಿರಿ ಎಂದು ಮಾಹಿತಿ ನೀಡಿದರು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ ನಿತ್ಯಾನಂದ ವಿ ಗಾಂವಕರ  ಇವರು ವಹಿಸಿದ್ದು, ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ ವಿಷ್ಣುಮೂರ್ತಿ ಪ್ರಭು, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸುಷ್ಮಾ ಟಿ., ವಿದ್ಯಾರ್ಥಿಗಳ ಕ್ಷೇತ್ರಕಾರ್ಯ ಮಾರ್ಗದರ್ಶಕರಾದ ಶ್ರೀಮತಿ ಉಷಾ, ಶ್ರೀ ರಾಜೇಂದ್ರ ಎಮ್, ಶ್ರೀ ರವಿ ಎಸ್‌ ಮತ್ತು ಸಮಾಜಕಾರ್ಯ ಉಪನ್ಯಾಸಕರಾದ ಡಾ. ಗಣೇಶ ಪ್ರಸಾದ್‌ ಜಿ ನಾಯಕ್‌ ಮತ್ತು ಶ್ರೀ ಪ್ರಭಾಕರ ಆಚಾರ್ಯ ಉಪಸ್ಥಿತರಿದ್ದರು

 

            ದ್ವಿತೀಯ ವರ್ಷದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿನಿ ಕು. ಶ್ರೀನಿಧಿ ಬಿ.ಎಸ್ ನಿರೂಪಿಸಿದರು. ಮೊಹಮ್ಮದ್ ಸಹಾದ್ ಸ್ವಾಗತಿಸಿ, ಅಕ್ಷಯ್ ಬಿ.ಆರ್ ವಂದಿಸಿದರು. ಮತ್ತು ಇತರ ಆಯೋಜಕರಾದ ಕು. ಗೌತಮಿ ಜಿ.ಎಸ್.‌, ಶಾಂತಿಪ್ರಿಯ ಡಿಕೋಸ್ತ, ಅಂಕಿತ, ಪ್ರಿಯ ಆರ್.ಎಲ್‌, ಧೃತಿ ಕೆ.ವಿ. ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top