ತುಳುವರಲ್ಲಿದೆ ಸೌಹಾರ್ದ ಮನೋಭಾವ: ಒಡಿಯೂರು ಶ್ರೀ ಅಭಿಮತ

Upayuktha
0

 ತುಲುವೆರೆ ಕಲ ಮೂರನೇ ವಾರ್ಷಿಕೋತ್ಸವ

  

ವಿಟ್ಲ: ತುಳುವರಲ್ಲಿ ಸೌಹಾರ್ದ ಮನೋಭಾವವಿದೆ. ಎಲ್ಲ ಕಾಲಕ್ಕೂ, ಎಲ್ಲ ಪ್ರದೇಶಕ್ಕೂ ಹೊಂದಿಕೊಳ್ಳುವ ತುಳುವರ ಗುಣವೇ ಅವರ ಬಹುದೊಡ್ಡ ಆಸ್ತಿ. ತುಳು ಸಂಪನ್ನ ಹಾಗೂ ಸಮೃದ್ಧ ಭಾಷೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

 

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಗುರುದೇವ ಜ್ಞಾನಮಂದಿರದಲ್ಲಿ ತುಲುವೆರೆ ಕಲ ಟ್ರಸ್ಟ್ ವತಿಯಿಂದ ಆಯೋಜಿಸಿದ 'ತುಲುವೆರೆ ಕಲ' ಮೂರನೇ ವಾರ್ಷಿಕೋತ್ಸವ, ಕೃತಿ ಬಿಡುಗಡೆ ಮತ್ತು ಕವಿಗೋಷ್ಠಿಯನ್ನು ಭಾನುವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.

 

ಕಾರ್ಯದಲ್ಲಿ ಪ್ರೀತಿ, ಪ್ರಯತ್ನ ಇದ್ದಾಗ ಸಂಘಟನೆ ಯಶಸ್ವಿಯಾಗುತ್ತದೆ. ಭಾಷೆ ಸಂಸ್ಕೃತಿಯ ಹೃದಯವಾಗಿದ್ದು, ಅದರ ಉಳಿವಿಗೆ ಶ್ರಮ ಅಗತ್ಯ. ಕೃಷಿ ಸಂಸ್ಕೃತಿಯಲ್ಲಿ ತುಳುವರ ಬದುಕು ಅಡಗಿದೆ ಎಂದರು.

 

'ತುಲುವೆರೆ ಕಲ' ಟ್ರಸ್ಟ್ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಮುದ್ದು ಮೂಡುಬೆಳ್ಳೆ, ಒಡಿಯೂರು ಗುರುದೇವಪೀಠ ಸಂಚಾಲಕ ಗಣಪತಿ ಭಟ್ ಸೇರಾಜೆ, ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಸಾಹಿತಿ ರೂಪಕಲಾ ಆಳ್ವ, ಮೂಲ್ಕಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಿಥುನ್ ಉಡುಪ ಕೊಡೆತ್ತೂರು, ಉಪನ್ಯಾಸಕ, ಸಾಹಿತಿ ರಘು ಇಡ್ಕಿದು ಉಪಸ್ಥಿತರಿದ್ದರು.

 

ವಿಶ್ವನಾಥ ಕುಲಾಲ್ ಮಿತ್ತೂರು ಅವರಿಗೆ 'ಕಲತ ಬೊಳ್ಳಿ' ಪ್ರಶಸ್ತಿ ಪ್ರದಾನಿಸಲಾಯಿತು. 'ಬಾನ ಚಂದ್ರಮೆ', 'ಪೇರ್ ಪಂರ್ದ್', 'ಗುತ್ತುಗೊಂಜಿ ಕಲತ ಸುತ್ತು' ಮತ್ತು 'ಪದ ಪಾಡ್ದನ' ತುಳು ಕೃತಿಗಳನ್ನು ನಾರಾಯಣ ರೈ ಕುಕ್ಕುವಳ್ಳಿ, ರೂಪಕಲಾ ಆಳ್ವ, ಮಿಥುನ್ ಉಡುಪ, ಮುದ್ದು ಮೂಡುಬೆಳ್ಳೆ ಲೋಕಾರ್ಪಣೆಗೊಳಿಸಿದರು.

 

ಸ್ಪರ್ಧೆ ವಿಜೇತರಾದ ಹಂಸರಾಗ ಶೆಟ್ಟಿ, ದಿವ್ಯ ರೈ ಪೆರುವಾಜೆ, ಪೆರ್ಮುಖ ಸುಬ್ರಹ್ಮಣ್ಯ ಭಟ್, ಶಾರದಾ ತುಳುನಾಡ್, ಬನಶ್ರೀ ಅವಿನಾಶ್, .ರಾಮಕೃಷ್ಣ ಶಾಸ್ತ್ರಿ ಮತ್ತು ಸವಿತಾ ಎಸ್.ಭಟ್ ಅಡ್ವಾಯಿ ಅವರಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಹಿರಿಯ ಸಾಹಿತಿ, ಪತ್ರಕರ್ತ ಮಲಾರ್ ಜಯರಾಮ ರೈ ಅಧ್ಯಕ್ಷತೆಯಲ್ಲಿ 'ಬೊಲ್ಪುದಾರಗೆ' ಕವಿಗೋಷ್ಠಿಯಲ್ಲಿ ೩೫ ಮಂದಿ ಕವಿಗಳು ಪಾಲ್ಗೊಂಡರು.

 

ಪದ್ಮನಾಭ ಪೂಜಾರಿ ಪ್ರಾರ್ಥಿಸಿದರು. ತುಲುವೆರೆ ಕಲ ಟ್ರಸ್ಟ್ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಸ್ವಾಗತಿಸಿದರು. ಜಯರಾಮ ಪಡ್ರೆ ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.

  

ತುಳು ಭಾಷೆ ಪ್ರಾದೇಶಿಕತೆಗೆ ಅನುಗುಣವಾಗಿ ಬದಲಾವಣೆ ಹೊಂದಿದರೂ ಅದರ ಆತ್ಮ ಒಂದೇ. ಭಾಷೆಯ ಉಳಿವಿಗೆ 'ತುಳುವೆರೆ ಕಲ'ದಂತಹ ಸಂಘಟನೆಗಳು ಶಕ್ತಿ ತುಂಬುತ್ತಿದೆ. ಆಧುನಿಕತೆ ಭಾಷೆಗೆ ತೊಡಕಾಗದಂತೆ ಎಚ್ಚರ ವಹಿಸಬೇಕು. ಯುವಶಕ್ತಿ, ಮಾತೃಶಕ್ತಿಯಲ್ಲಿ ಅದಮ್ಯ ಚೇತನ ಅಡಗಿದೆ. ಅದರ ಸದ್ಭಳಕೆ ಅಗತ್ಯ.

- ಶ್ರೀ ಗುರುದೇವಾನಂದ ಸ್ವಾಮೀಜಿ

 ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top