ಹುನಗುಂದ:
ತಾಲೂಕಿನ ನಾಗೂರ ಗ್ರಾಮದ ಬಸವರಾಜ ಅಮರಪ್ಪ ಹೇರೂರ ಹಾಗೂ ಶೈಲಾ ಬಸವರಾಜ
ಹೇರೂರು ರವರ ಸುಪುತ್ರಿ, ಸ್ವಾತಿ
ಬಸವರಾಜ ಹೆರೂರ ರವರು ಹುನಗುಂದ ನಗರದ
ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ 2025 26ನೇ ಸಾಲಿನ ಎಸ್
ಎಸ್ ಎಲ್ ಸಿ ವಾರ್ಷಿಕ
ಪರೀಕ್ಷೆಯಲ್ಲಿ ಒಟ್ಟು 625ಕ್ಕೆ 584 ಅಂಕಗಳನ್ನು ಪಡೆದು 93.44% ಆ ಶಾಲೆಗೆ ದ್ವಿತೀಯ
ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆಗೈದಿದ್ದಾಳೆ.
ಹುನಗುಂದ
ತಾಲೂಕಿನ ತಿಮ್ಮಾಪುರ ಗ್ರಾಮದ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8 ತರಗತಿಯವರೆಗೆ ಓದಿದ ಈಕೆಯ ತಂದೆ ಒಂದು ಎಕರೆ ಜಮೀನು ಹೊಂದಿದ್ದಾರೆ.
ಮಕ್ಕಳ ಶಿಕ್ಷಣ ಸಲುವಾಗಿಯೇ ತಂದೆ ಹಾಗೂ ತಾಯಿ
ಗೋವಾದಲ್ಲಿ ಕೂಲಿ ಕೆಲಸವನ್ನು ಮಾಡುತ್ತಿದ್ದಾರೆ.
ಮಕ್ಕಳು ತಾಯಿಯ ತವರು ಮನೆ ತಿಮ್ಮಾಪುರ
ಗ್ರಾಮದ ಅಜ್ಜಿ ಗಂಗಮ್ಮ ಬದಾಮಿ ಇವರ ಮನೆಯಲ್ಲಿ ವಿದ್ಯಾಭ್ಯಾಸ
ಮುಂದುವರೆಸಿದ್ದಾರೆ.
ತಾವು
ಕಲಿತ ವಿಜಯ ಮಹಾಂತೇಶ ಪ್ರೌಢಶಾಲೆಯ
ಮುಖ್ಯ ಗುರುಗಳಾದ ಬಸವರಾಜ ಬನಹಟ್ಟಿ, ಶಿಕ್ಷಕರುಗಳಾದ
ಪಿ ಸಿ ಚೌಹಾನ್ ವೀರಪ್ಪ
ಕರಡಿ, ಮಹಾಂತೇಶ ಮಾವಿನಕಾಯಿ ಹಾಗೂ ಸಿಬ್ಬಂದಿ ವರ್ಗ
ಸಾಧನೆ ಮಾಡಿದ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಸನ್ಮಾನಿಸಲಾಯಿತು.
“ನನ್ನ
ಸಾಧನೆಗೆ ಶಿಕ್ಷಕರ ಮಾರ್ಗದರ್ಶನವೇ ಪ್ರಮುಖ ಕಾರಣ ಪ್ರತಿಯೊಂದು ಅನುಮಾನಕ್ಕೂ ಸಹನೆಯಿಂದ ಉತ್ತರ ನೀಡಿದ ಗುರುಗಳು ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಕಾಲೇಜಿನ ಶಿಸ್ತು ಎಲ್ಲವೂ ನನ್ನ ಯಶಸ್ಸಿಗೆ ಸಹಕಾರಿಯಾದವು ಎಂದು ಸ್ವಾತಿ ತನ್ನ ಸಂತೋಷ ಹಂಚಿಕೊಂಡರು.”
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


