ಮೌನವಾಗುತ್ತಿರುವ ಕಾಗೆಗಳ ಲೋಕ

Upayuktha
0

 


ಮ್ಮ ಭೂಮಿಯ ಮೇಲೆ ಸಾವಿರಾರು ಜೀವಸಂಕುಲಗಳನ್ನು ಕಾಣಬಹುದು. ಅಚ್ಚ ಹಸಿರಿನಿಂದ ಕೂಡಿದ ಪ್ರಕೃತಿಯಲ್ಲಿ ಪ್ರಾಣಿ-ಪಕ್ಷಿಗಳು ಅತ್ಯಂತ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷಿಗಳು ನೋಡ ಸಿಗುವುದೇ ಅಪರೂಪವಾಗಿದೆ. ಅಂತಹ ಪಟ್ಟಿಗಳಲ್ಲಿ ಕಾಗೆಯು ಒಂದಾಗಿದೆ. ಹೌದು! ಒಂದು ಕಾಲದಲ್ಲಿ ಬೆಳಗ್ಗೆ ಎದ್ದರೆ ಸಾಕು ವಿದ್ಯುತ್ ಕಂಬಗಳಲ್ಲಿ ಅಥವಾ ಮರದ ಕೊಂಬೆಯಲ್ಲಿ `ಕಾ....ಕಾ' ಎಂದು ಕೂಗುತ್ತಾ ಕುಳಿತಿರುತ್ತದೆ. ಆಗ ಕಾಗೆಗಳು ಕಾಣಿಸದೆ ಇದ್ದ ದಿನವೇ ಇರುತ್ತಿರಲಿಲ್ಲ  ಆದರೆ ಇತ್ತೀಚಿನ ದಿನಗಳಲ್ಲಿ ಕಾಗೆ ಕಾಣ ಸಿಗುವುದು  ಅಪರೂಪದ ಸಂಗತಿಯಾಗಿದೆ.

 

ಪರಿಸರದಲ್ಲಿ ಸದಾಕಾಲ ಇದ್ದ ಪಕ್ಷಿಯು ಕಾಲಕ್ರಮೇಣ ಅವನತಿ ಅಂಚಿನಲ್ಲಿದೆ. ಇತ್ತೀಚಿನ ಆಧುನಿಕ ಜೀವನ ಶೈಲಿಗೆ ಮಾರುಹೋಗುತ್ತಿದ್ದಾರೆ ಮನುಷ್ಯ ದೊಡ್ಡ-ದೊಡ್ಡ ಕಟ್ಟಡಗಳನ್ನು ಮತ್ತು ಮರಗಳನ್ನು ಕಡಿಯುವುದರಿಂದ ಕಾಗೆಗಳ ವಾಸಸ್ಥಾನವನೇ ನಾಶಪಡಿಸುತ್ತಿದ್ದಾನೆ .ಇದು ಕೇವಲ ನಗರ ಜೀವನ ಶೈಲಿಗಳ ಕಾರಣ ಮಾತ್ರವಲ್ಲ ಪ್ಲಾಸ್ಟಿಕ್ ಕಸ, ರಸಗೊಬ್ಬರ ಮಿಶ್ರಿತ ಆಹಾರಗಳು ಕಾಗೆಗಳಿಗೆ ಅಪಾಯಕಾರಿಯಾಗಿದೆ.ಕೆಲವೂಮ್ಮೆ ಹುಡುಕಾಟದಲ್ಲಿ ಪ್ಲಾಸ್ಟಿಕ್ ನುಂಗಿ ಸಾವನ್ನಪ್ಪುವ ಘಟನೆಗಳನ್ನು ಕಾಣಬಹುದು. ಕಾಗೆ ಕೇವಲ ಒಂದು ಪಕ್ಷಿಯಲ್ಲ, ಅದು ಪರಿಸರದ ಸಮತೋಲನವನ್ನು ಕಾಪಾಡುವ ಜೀವಿ. ಸತ್ತ ಪ್ರಾಣಿಗಳ ಅವಶೇಷವುಗಳನ್ನು ತಿನ್ನುವ ಮೂಲಕ ಪರಿಸರವನ್ನು ಸ್ವಚ್ಛವಾಗಿಡುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡುತ್ತದೆ. ಕಾಗೆಗಳ ಸಂತತಿ ಕಡಿಮೆಯಾಗುತ್ತಿರುವುದು ಇಡೀ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ.

 

ಇತ್ತೀಚಿನ ದಿನಗಳಲ್ಲಿ ಕಾಗೆ ಕಾಣಿಸದಿರುವುದು ಕೇವಲ ಒಂದು ಪಕ್ಷಿ ನಾಪತ್ತೆಯಲ್ಲ, ಅದು ಮಾನವ ಮತ್ತು ಪ್ರಕೃತಿಯ ನಡುವಿನ ಸಂಬಂಧ ದುರ್ಬಲವಾಗುತ್ತಿರುವ ಎಚ್ಚರಿಕೆಯ ಸೂಚನೆಯಾಗಿದೆ. ಹಾಗಾಗಿ ಅಂತಹ ಕಾಗೆಗಳ ಸಂತತಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅವರ `ಕಾ....ಕಾ' ಎನ್ನುವ ಕೂಗು ಪರಿಸರದಲ್ಲಿ ಕೇಳಬೇಕು ಹಾಗಾಗಿ ಮರೆಯಾಗುತ್ತಿರುವಂತಹ ಕಾಗೆಗಳ ಲೋಕವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

 

ಮಧುಶ್ರೀ ಸೊರಕೆ

ದ್ವಿತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು ಪುತ್ತೂರು

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top