ಸಕಲ
ಜೀವರಾಶಿಗಳಿಗೆ ಜೀವಿಸಲು ಗಾಳಿ, ನೀರು ಮುಂತಾದ ಸಂಪತ್ತನ್ನು
ಒದಗಿಸಿದೆ ಈ ಭೂಮಿ. ಆದರೆ
ಇತ್ತೀಚಿನ ದಿನಗಳಲ್ಲಿ ಜನರು ಪರಿಸರವನ್ನು ಒಂದಲ್ಲ
ಒಂದು ರೀತಿಯಲ್ಲಿ ಹಾಳು ಮಾಡುತ್ತಾ ಬರುತ್ತಿದ್ದಾರೆ.
ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅತ್ತ ಇತ್ತ ಕಣ್ಣು
ಹಾಯಿಸಿದರೆ ನಮ್ಮ ಕಣ್ಣಿಗೆ ಕಾಣುವುದು
ಪ್ಲಾಸ್ಟಿಕ್ ಒಂದೇ. ಇಂತಹ ದೃಶ್ಯಗಳು ಹೆಚ್ಚಾಗಿ
ಜನವಸತಿ ಇಲ್ಲದಂತಹ ನಿರ್ಜನ ಪ್ರದೇಶದಲ್ಲಿ ಕಂಡು ಬರುತ್ತಿದೆ. ನಾವು
ಬಸ್ಸುನಲ್ಲಿ ತೆರಳುವ ಸಂದರ್ಭದಲ್ಲಿ ತಿಂದ ತಿಂಡಿಯ ಅಥವಾ
ಕುಡಿದ ಜ್ಯೂಸ್ ಬಾಟಲಿ ಅಥವಾ ನೀರಿನ ಬಾಟಲಿ
ಖಾಲಿ ಆಯಿತೆಂದು ಅದನ್ನು ತಕ್ಷಣವೇ ಕಿಟಕಿಯಿಂದ ಹೊರ ಎಸೆಯುತ್ತೇವೆ. ಇಲ್ಲಿ
ಜನರು ಹಸಿವಿನ ಬಗ್ಗೆ ಮಾತ್ರ ಯೋಚಿಸುತ್ತಾರೆಯೇ ಹೊರತು ಪರಿಸರ ಸಂರಕ್ಷಣೆಯ ಬಗ್ಗೆ ಅಲ್ಲ. ಇಂದಿನ ಪೀಳಿಗೆಯು ಇನ್ನು ಕೂಡ ಪರಿಸರದ ಬಗ್ಗೆ
ಚಿಂತಿಸುತ್ತಿಲ್ಲ.
ಪ್ಲಾಸ್ಟಿಕ್
ನಿಂದ ಪರಿಸರ ಎದುರಿಸುತ್ತಿರುವ ಸಮಸ್ಯೆ:
ಪ್ಲಾಸ್ಟಿಕ್
ನಂತಹ ವಸ್ತುಗಳು ಮಣ್ಣಿನಲ್ಲಿ ಎಷ್ಟು ವರ್ಷವಾದರೂ ಕರಗುವುದಿಲ್ಲ. ಇದರಿಂದ ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತದೆ. ಜೈವಿಕವಾಗಿ ವಿಘಟನೆಯಾಗದ ಈ ವಸ್ತುಗಳು ನೂರಾರು
ಕಾಲ ಪರಿಸರದಲ್ಲಿ ಉಳಿದು ಜೀವಸಂಕುಲಕ್ಕೆ ಕುತ್ತು ತಂದೊಡ್ಡುತ್ತಿವೆ.
ಜಲಚರ
ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮ:
ಪ್ಲಾಸ್ಟಿಕ್
ಮಾಲಿನ್ಯಕಾರಕ ವಸ್ತುಗಳನ್ನು ನದಿ ನೀರಿಗೆ ಎಸೆಯುವುದರಿಂದ
ಜಲಮೂಲ ಕಲುಷಿತಗೊಳ್ಳುತ್ತದೆ. ಇದರಿಂದ ಜಲಚರಗಳಿಗೆ ಬದುಕಲು ಆಗುತ್ತಿಲ್ಲ. ಹಸಿವಿನಿಂದಾಗಿ ಅಲ್ಲಿರುವಂತಹ ಮಾಲಿನ್ಯಕಾರಕ ಕಸಗಳನ್ನು ತಿಂದು ಜೀವ ಕಳೆದುಕೊಳ್ಳುತ್ತಿವೆ. ಕೆಲವೊಮ್ಮೆ ಮೀನುಗಳನ್ನು
ಹಿಡಿದು ತಿನ್ನುವ ಜನರಿಗೂ ಸಹ ಅಪಾಯ ಉಂಟಾಗುತ್ತದೆ.
ಅಂತಹ ಮೀನುಗಳನ್ನು ಮನುಷ್ಯ ತಿನ್ನುವುದರಿಂದ ಮನುಷ್ಯನ ಆರೋಗ್ಯಕ್ಕೂ ಅಪಾಯವಿದೆ.
ಇನ್ನು ಹೇಳುವುದಾದರೆ ತಿಂದು ಉಳಿದ ಆಹಾರವನ್ನು ಪ್ಲಾಸ್ಟಿಕ್
ಚೀಲದಲ್ಲಿ ತುಂಬಿ ಕಸದ ತೊಟ್ಟಿಗೆ ಎಸೆಯುತ್ತಾರೆ.
ಅದನ್ನು ದನ, ಕರುಗಳು, ಶ್ವಾನಗಳು
ಸೇವಿಸುವುದರಿಂದ ಗಂಟಲಿನಲ್ಲಿ ಸಿಲುಕಿಕೊಂಡು ಜೀವಕ್ಕೆ ಆಪತ್ತು ಬರುತ್ತದೆ. ಹೀಗೆ ಅದೆಷ್ಟು ಪ್ರಾಣಿಗಳು
ಪ್ರಾಣಗಳನ್ನು ಕಳೆದುಕೊಂಡಿದೆ.
ಪ್ಲಾಸ್ಟಿಕ್
ನಿಂದ ಆರೋಗ್ಯದಲ್ಲಿ ಆಗುತ್ತಿರುವ ತೊಂದರೆ:
ಹೋಟೆಲ್
ಗಳಿಂದ ತರುವಂತಹ ಬಿಸಿ ಬಿಸಿ ಆಹಾರವನ್ನು
ಪ್ಲಾಸ್ಟಿಕ್ ಕವರ್ ನಲ್ಲಿ ತರುತ್ತೇವೆ.
ಅದರಿಂದ ಕ್ಯಾನ್ಸರ್, ಥೈರಾಯ್ಡ್ ರೋಗಗಳು ಮತ್ತು ಚರ್ಮದ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿದೆ.
ಪ್ಲಾಸ್ಟಿಕ್
ದಹನದಿಂದ ಗಾಳಿಯಲ್ಲಿ ಆಗುವ ಆಡಚಣೆ:
ಪ್ಲಾಸ್ಟಿಕ್
ತ್ಯಾಜ್ಯವನ್ನು ಬೆಂಕಿಯಲ್ಲಿ ಉರಿಸುವುದರಿಂದ ವಿಷಕಾರಿ ಅನಿಲಗಳು ಹೊರಬರುತ್ತವೆ. ಇವು ಗಾಳಿಯೊಂದಿಗೆ ಸೇರಿಕೊಂಡು
ಉಸಿರಾಟದ ಸಮಸ್ಯೆಯನ್ನು ಸೃಷ್ಟಿಸುತ್ತದೆ. ಮಾತ್ರವಲ್ಲದೇ ಇನ್ನೂ ಹಲವು ಪರಿಸರದ ಸಮಸ್ಯೆಗಳಿಗೆ
ಕಾರಣವಾಗಿದೆ.
ಪ್ಲಾಸ್ಟಿಕ್
ಚೀಲ, ಬಾಟಲಿ ಮುಂತಾದವುಗಳು ಚರಂಡಿಗಳಲ್ಲಿ ಸಿಲುಕಿ ನೀರು ಸರಾಗವಾಗಿ ಹರಿಯದಂತೆ
ತಡೆದು ನಿಲ್ಲುತ್ತಿವೆ. ಅವು ಮಳೆಗಾಲದಲ್ಲಿ ಪ್ರವಾಹ
ಬಂದಾಗ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತದೆ.
ಇವುಗಳಿಂದ
ಆಗುತ್ತಿರುವ ಸಮಸ್ಯೆಯನ್ನು ತಡೆಯಲು ನಾವು ಪರಿಹಾರ ಉಪಾಯಗಳನ್ನು
ಕಂಡುಕೊಳ್ಳಬೇಕು. ಪ್ಲಾಸ್ಟಿಕ್ ಚೀಲವನ್ನು ಬಳಸುವಲ್ಲಿ ಬಟ್ಟೆಯ ಚೀಲವನ್ನು ಬಳಸಬೇಕು. ಏಕೆಂದರೆ ಬಟ್ಟೆ ಚೀಲವನ್ನು ಮರುಬಳಕೆ ಮಾಡಬಹುದು. ಇದರಿಂದ ಪರಿಸರಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ನಮ್ಮೆಲ್ಲರ ಹೊಣೆ. ಆದ್ದರಿಂದ ನಾವು ಸುತ್ತಮುತ್ತಲಿನ ಪರಿಸರವನ್ನು
ಪ್ಲಾಸ್ಟಿಕ್ ಮುಕ್ತ ಪರಿಸರವನ್ನಾಗಿ ಮಾಡಬೇಕು.
-ದೀಪಿಕಾ ದೋಳ
ದ್ವಿತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


