ಕಲಬುರಗಿ: ಧರ್ಮಸ್ಥಳ ಗ್ರಾಮಾಭಿವೃದ್ಧಿಯ ನೂತನ ಯೋಜನಾಧಿಕಾರಿಗಳಿಗೆ ಅಭಿನಂದನೆ ಕಾರ್ಯಕ್ರಮ

Upayuktha
0

  


ಕಲಬುರಗಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಮಲಾಪುರದ ನೂತನ ಯೋಜನಾಧಿಕಾರಿ ರಜಬ್ ಅಲಿ ಹಾಗೂ ಕಲಬುರಗಿ ಯೋಜನಾಧಿಕಾರಿ ಸಂಗಪ್ಪ ಸಂಗಳದ ಅವರಿಗೆ ಸ್ವಾಗತ ಕೋರಿ ಅಭಿನಂದನೆ ವ್ಯಕ್ತಪಡಿಸಲಾಯಿತು.

 

ಕಲಬುರಗಿಯ ಆಮಂತ್ರಣ ಹೋಟೆಲ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೇ 12ರಂದು ನೂತನ ಯೋಜನಾಧಿಕಾರಿಗಳಿಗೆ ಖ್ಯಾತ ಉದ್ಯಮಿಗಳು ಮತ್ತು ಅನಂತ ಹೋಟೆಲ್ ಪಾಲುದಾರರಾದ ಮಹಾದೇವ ಗುತ್ತೇದಾರ್, ವೆಂಕಟೇಶ್ ಕಡೇಚೂರ್, ಯಾದಗಿರಿಯ ಪಿಎಸ್ಐ ವಿಠ್ಠಲ್ ನರೋಣ, ಜನಜಾಗೃತಿ ವೇದಿಕೆಯ ಕೋಶಾಧಿಕಾರಿ ಡಾ.ಸದಾನಂದ ಪೆರ್ಲ ಮತ್ತಿತರರು ಸೇರಿ ಶಾಲು ಪುಷ್ಪ ನೀಡಿ ಗೌರವಿಸಿದರು.

 

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪ್ರಗತಿಗೆ ಪೂರಕವಾದ ಸಂಸ್ಥೆಯಾಗಿದ್ದು ತಾಲೂಕು ಮಟ್ಟಗಳಲ್ಲಿ ಕೆರೆ ಅಭಿವೃದ್ಧಿಯಂತಹ ಉತ್ತಮ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಮಹಾದೇವ ಗುತ್ತೇ ದಾರ್ ಈ ಸಂದರ್ಭದಲ್ಲಿ ಹೇಳಿದರು.

 

ಯೋಜನೆಯ ಕಲಬುರಗಿ ಜಿಲ್ಲಾ ನಿರ್ದೇಶಕರಾದ ಗಣಪತಿ ಮಾಳಂಜಿ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಾರಂಭದಲ್ಲಿ ಉದ್ಯಮಿ ರಾಜೇಶ್ ದತ್ತು ಗುತ್ತೇದಾರ್, ಯೋಜನೆಯ ಜಿಲ್ಲಾ ಎಂಐಎಸ್ ಯೋಜನಾಧಿಕಾರಿ ಮಹಾಂತೇಶ ಕುಟಗಿ ಉಪಸ್ಥಿತರಿದ್ದರು.

 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top