ಲಿಂಗಾಯತ ರೆಡ್ಡಿ ಸಮಾಜದಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಹಾಗೂ ಸನ್ಮಾನ ಕಾರ್ಯಕ್ರಮ

Upayuktha
0

 


 

ಬಳ್ಳಾರಿ: ನಗರದ ಬಸವ ಭವನದಲ್ಲಿ ವೀರಶೈವ ಲಿಂಗಾಯತ ರೆಡ್ಡಿ ಸಮಾಜದಿಂದ ಹಮ್ಮಿಕೊಂಡಿದ್ದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ 604 ನೇ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯ್ತು.  

ಶೈಕ್ಷಣಿಕ ಕ್ಷೇತ್ರದ ಸೇವೆಗಾಗಿ ಕಿಷ್ಕಿಂದ ವಿಶ್ವ ವಿದ್ಯಾಲಯದ ಕಲಾಧಿಪತಿ ಡಾ.ಯಶವಂತ ಭೂಪಾಲ್. ಸಾಮಾಜಿಕ ಸೇವೆಗಾಗಿ ಸಂಗನಕಲ್ಲು ಬಸವರಾಜ್. ವೈದ್ಯಕೀಯ ಕ್ಷೇತ್ರದ ಸೇವೆಗಾಗಿ ಬಳ್ಳಾರಿ ಮೆಡಿಕಲ್ ಕಾಲೇಜಿನ ನಿವೃತ್ತ  ಪ್ರಾಂಶುಪಾಲ ಡಾ. ಎನ್. ಮಂಜುನಾಥ. ನ್ಯಾಯಾಂಗ ಕ್ಷೇತ್ರದ ಸೇವೆಗಾಗಿ ಮಾಜಿ ಮೇಯರ್ ಪಾರ್ವತಿ ಇಂದುಶೇಖರ್. ಸಾವಯವ ಕೃಷಿಗಾಗಿ  ಸಿಂದವಾಳ ಕೇಶವರಡ್ಡಿ ಮತ್ತು ಮಾಧ್ಯಮ ಕ್ಷೇತ್ರದ ಸೇವೆಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ನಡವಿ ವೀರಭದ್ರಗೌಡ ಅವರನ್ನು  ಸಮಾಜದ ಅಧ್ಯಕ್ಷ ಡಾ.ಎಸ್.ಜೆ.ವಿಮಹಿಪಾಲ್, ಮುಖಂಡರಾದ  ಉಡೇದ ಬಸವರಾಜ್ಸಂಗನಕಲ್ಲು ಹಿಂಮತರಾಜ್, ಜಾನೆಕುಂಟೆ ನೇಪಾಕ್ಷಪ್ಪ, ನೆಲ್ಲುಡಿ ಅಯ್ಯಪ್ಪ, ಸುರೇಖ ಮಲ್ಲನಗೌಡ, ಡಾ.ರೇಣುಕಾ ಮಂಜುನಾಥ, ಡಾ.ಭಾಗ್ಯಲಕ್ಷ್ಮಿ, ಸುಮಂಗಳಮ್ಮ ಬಸವರಾಜ್ಸುಮಾರೆಡ್ಡಿ ಮೊದಲಾದವರು ಸನ್ಮಾನಿಸಿ ಗೌರವಿಸಿದರು. ಡಾ.ಬಸವರಾಜ್ ಗದಗಿನ, ಮಿಂಚೇರಿ ನರೇಂದ್ರಬಾಬು ಸನ್ಮಾನಿತರನ್ನು ಪರಿಚಯಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top