ಮಾತಂಗ ಸೇವಾ ಟ್ರಸ್ಟ್ ವತಿಯಿಂದ ಮೊದಲನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ

Upayuktha
0

 


 

 ಬಳ್ಳಾರಿ: ಮಾತಂಗ ಸೇವಾ ಟ್ರಸ್ಟ್ ವತಿಯಿಂದ ಮೊದಲನೆ ವರ್ಷದ ಸಾಮೂಹಿಕ ವಿವಾಹ ಅದ್ದೂರಿಯಾಗಿ ನೆರವೇರಿತು.

ಸಾಮೂಹಿಕ ವಿವಾಹ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಕ್ತಾರ  ವೆಂಕಟೇಶ್ ಹೆಗಡೆ ನೂತನ ವಧು ವರರಿಗೆ ಶುಭ ಕೋರಿ ನಿಮ್ಮ ಜೀವನ ಸುಖಕರವಾಗಿರಲೆಂದು ಹಾರೈಸಿದರು. ಮಾತಂಗ ಸೇವಾ ಟ್ರಸ್ಟ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು

ಮುಖ್ಯ ಅತಿಥಿ ಯೂತ್ ಕಾಂಗ್ರೆಸ್ನ ತಾಲೂಕ್ ಅಧ್ಯಕ್ಷರಾದ ಬಸುರಾಜ್ ಬ್ರೂಸ್ಲಿ  ಮಾತನಾಡಿ ಸಂಡೂರು ತಾಲೂಕಿನಲ್ಲಿ  ಎಂದು ರೀತಿ ಅಚ್ಚುಕಟ್ಟಾಗಿ ಮಾಡಿರುವುದು ನಾನು ನೋಡಿಲ್ಲ ಎಂದರು  ಟ್ರಸ್ಟಿನ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್. ಮಾರೇಶ ವಹಿಸಿದ್ದು, ಪುರಸಭೆಯ ಅಧ್ಯಕ್ಷ ಸೂರಿನಾರಾಯಣ, ಮುಖ್ಯ ಅಧಿಕಾರಿ ಅರುಣ್ ಕುಮಾರ್, ಜೆಡಿಎಸ್ ಸ್ಟೇಟ್ ಸೆಕರಿಟರಿ ಎನ್ ಸೋಮಪ್ಪ, ಪುರಸಭೆಯ ಬಿಜೆಪಿ ಮಂಡಲ ಅಧ್ಯಕ್ಷರು ಹೆಚ್.ನಾರಯಣರೆಡ್ಡಿ ಕುರೇಕುಪ್ಪ ನೂತನ ವಧು ವರರಿಗೆ ಶುಭ ಹಾರೈಸಿದರು. 

ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಕಲ್ಗಡಪ್ಪ, ಸದಸ್ಯರಾದ ಕುಮಾರಪ್ಪ, ಊರಿನ ಮುಖಂಡರಾದ ಹೆಮ್ಮಿಗಿರಪ್ಪ, ಎಚ್ ಡಿ ಹೊನ್ನೂರಪ್ಪ ಪುಂಡಿ ಮಲ್ಲಿಕಾರ್ಜುನ, ಓಬರೆಡ್ಡಿ ವೆಂಕ್ಟ ರಾಮರೆಡ್ಡಿ, ಎಸ್ ಕೆ ಬಿ ಬಸವರಾಜ್, ಗಿರಪ್ಪ, ದ್ಯಾವಣ್ಣ, ಡಿ .ಮಂಜುನಾಥ್, ಎನ್ ಮಲ್ಲಿಕಾರ್ಜುನ, ಹುಲಗಪ್ಪ, ಹನುಮಂತಪ್ಪ ಈರಣ್ಣ, ವಿರೇಶ, ಆನಂದ ದೊಡ್ಡಮನಿ, ಸಣ್ಣ ಮಾರೆಪ್ಪ ಮಾಹರುದ್ರಪ್ಪ  ಮದುಗಪ್ಪ  ಹಾಜರಿದ್ದರು. ಕಾರ್ಯಕ್ರಮವನ್ನು ಟ್ರಸ್ಟಿನ ಕಾರ್ಯದರ್ಶಿಯಾದ ಹೆಚ್. ಪಂಪಾಪತಿ ನೆರೆವೇರಿಸಿದರು.

 

 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top