ಬಳ್ಳಾರಿ:
ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ತಂಡವು ಇತ್ತೀಚೆಗೆ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಗುಲ್ಬರ್ಗಾ ಅಂತರ್
ವಲಯದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಯ ಗಳಿಸಿತು. ಈ
ಪಂದ್ಯಾವಳಿಯಲ್ಲಿ ಕಲಬುರ್ಗಿ ವಲಯದ ಒಟ್ಟು 08 ತಂಡಗಳು ಭಾಗವಹಿಸಿದ್ದವು.
ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ತಂಡದಲ್ಲಿ ಪಿ.ಹೇಮಂತ್ (ಕ್ಯಾಪ್ಟನ್), ಕೆ.ಸಾಯಿವಿಕಾಸ್, ಸಮೀರ್, ಬಾಲಸುಭ್ರಮಣ್ಯಂ, ಕೆ.ಅಭಿಷೇಕ್, ವರುಣ್, ಧನುಂಜಯ್, ವೈಭವ್, ವಿಕಾಶ್ ಗೌಡ, ವೀರಭದ್ರಗೌಡ, ಪ್ರವೀಣ್, ಅನಿಲ್, ದೇವರಾಜ್, ಸಾಯಿಚರಣ, ವರುಣ್ ತೇಜ, ಯಶ್ವಂತ್, ಹರ್ಷವರ್ಧನ್, ನಿತಿನ್, ಪ್ರವೀಣ್ ಕುಮಾರ್ ಪಾಟಿಲ್, ಶಿವತೇಜ, ಇವರು ಭಾಗವಹಿಸಿದ್ದರು. ಕೆ. ಸಾಯಿವಿಕಾಸ್ ಮ್ಯಾನ್-ಆಫ್-ಟೂರ್ನಮೆಂಟ್ ಪಡೆದುಕೊಂಡರು.
ಡಾ.ಕೊಟ್ರೇಶ, ಡಾ.ಶಿವಪ್ರಸಾದ, ಕಾಲೇಜಿನ ದೈಹಿಕ ಶಿಕ್ಷಕ ವಿಜಯ ಮಹಂತೇಶ, ತುಮಕೂರ ಜೋನಲ್ ಸೆಲೆಕ್ಷನ್ ಕಮಿಟೀ ಚೇರ್ಮನ್ ಕಿಶೋರ್ ಬಾಬು, ಕೋಚ್ ಮಣಿಕಂಠ ಉಪಸ್ಥಿತರಿದ್ದರು. ಆರ್.ವೈ.ಎಂ.ಈ.ಸಿ
ವಿದ್ಯಾರ್ಥಿಗಳ ಸಾಧನೆಯನ್ನು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.
ಕಣೇಕಲ್ ಮಹಾಂತೇಶ್, ಉಪಾಧ್ಯಕ್ಷ ವಿ.ವಿ.ಸಂಘ ಮತ್ತು
ಆರ್.ವೈ.ಎಂ.ಇ.ಸಿ. ಅಧ್ಯಕ್ಷ ಜಾನೆಕುಂಟೆ
ಬಸವರಾಜ್, ವಿ.ವಿ.ಸಂಘದ
ಕಾರ್ಯದರ್ಶಿ ಡಾ. ಅರವಿಂದ್ ಪಟೇಲ್,
ಸಹಾಯಕ ಕಾರ್ಯದರ್ಶಿ ಯಾಲ್ಪಿ ಮೇಟಿ ಪಂಪನಗೌಡ, ಕೋಶಾಧಿಕಾರಿ
ಬೈಲುವದ್ದಿಗೇರಿ ಎರ್ರಿಸ್ವಾಮಿ, ಆರ್.ವೈ.ಎಂ.ಇ.ಸಿ. ಆಡಳಿತ
ಮಂಡಳಿ ಸದಸ್ಯ ಪ್ರಭುಸ್ವಾಮಿ ಎಸ್.ಎಂ. ಮತ್ತು
ಬಾಡದ ಪ್ರಕಾಶ್, ರಾವ್ ಬಹದ್ದೂರ್ ವೈ
ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್. ಮಹಾಬಲೇಶ್ವರ,
ಉಪಪ್ರಾಂಶುಪಾಲೆ ಡಾ. ಸವಿತಾ ಸೊನೋಳಿ
ಶುಭ ಹಾರೈಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


