ಯೋಗಾಸನ ವಿಶ್ವ ಚಾಂಪಿಯನ್‌ಶಿಪ್ ಗೆ ಚಾಲನೆ: 60ಕ್ಕೂ ಹೆಚ್ಚು ದೇಶಗಳು ಭಾಗಿ

Upayuktha
0

 

ಬೆಂಗಳೂರು: ಯೋಗಾಸನವನ್ನು ಒಂದು ಸ್ಪರ್ಧಾತ್ಮಕ ಕ್ರೀಡೆಯಾಗಿ ಪ್ರದರ್ಶಿಸುವ ಮೊದಲ ಜಾಗತಿಕ ಪಂದ್ಯಾವಳಿ  'ವಿಶ್ವ ಯೋಗಾಸನ ಚಾಂಪಿಯನ್ಶಿಪ್ 2026' ಗೆ ಇಂದು ಹೊಸದೆಹಲಿಯಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕೇಂದ್ರ ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರು ವಿವಿಧ ಯೋಗ ಒಕ್ಕೂಟಗಳ ಪ್ರಮುಖರ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 

ಜೂನ್ 4 ರಿಂದ 8, 2026 ರವರೆಗೆ ಅಹಮದಾಬಾದ್ ಏಕಾ ಅರೆನಾದಲ್ಲಿ ವಿಶ್ವ ಚಾಂಪಿಯನ್ಶಿಪ್ ನಡೆಯಲಿದೆ. ಇದರಲ್ಲಿ ಉಗಾಂಡ, ಜಾಂಬಿಯಾ, ಶ್ರೀಲಂಕಾ, ನೇಪಾಳ, ಕೀನ್ಯಾ, ಜಪಾನ್, ಓಮನ್, ಮಾರಿಷಸ್ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ 60 ಕ್ಕೂ ಹೆಚ್ಚು ದೇಶಗಳ ಗಣ್ಯ ಯೋಗಾಸನ ಕ್ರೀಡಾಪಟುಗಳು ಮತ್ತು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಪಂದ್ಯಾವಳಿಯ ಲಾಂಛನ, ವಿಜೇತರಿಗೆ ನೀಡುವ ಟ್ರೋಫಿ, ಆಟಗಾರರ  ಜರ್ಸಿ ಮತ್ತು 'ವೀರ್' ಎಂಬ ಸಿಂಹದ ಕ್ರೀಡಾ ಲಾಂಛನವನ್ನು (Mascot) ಬಿಡುಗಡೆ ಮಾಡಲಾಯಿತು.

 

'ವಿಶ್ವ ಯೋಗಾಸನ ಚಾಂಪಿಯನ್ಶಿಪ್ 2026' ಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ, ಆಯುಷ್ ಸಚಿವಾಲಯ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಸಂಪೂರ್ಣ ಬೆಂಬಲ ನೀಡುತ್ತಿವೆ. ಇದರೊಂದಿಗೆ ಗುಜರಾತ್ ಸರ್ಕಾರ, ಗುಜರಾತ್ ಪ್ರವಾಸೋದ್ಯಮ ಇಲಾಖೆ ಮತ್ತು ಗುಜರಾತ್ ಯೋಗಾಸನ ಕ್ರೀಡಾ ಸಂಸ್ಥೆಗಳು ಸಹ ಕೈಜೋಡಿಸಿವೆ. 

 

ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರು ಮಾತನಾಡಿ, "ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಯೋಗವನ್ನು ಇಡೀ ಜಗತ್ತಿಗೆ ಉಡುಗೊರೆಯಾಗಿ ನೀಡಿದೆ. ಈಗ ಯೋಗಾಸನವನ್ನು ಒಂದು ಸ್ಪರ್ಧಾತ್ಮಕ ಕ್ರೀಡೆಯಾಗಿ ಜಗತ್ತಿನಾದ್ಯಂತ ಬೆಳೆಸಲು ಭಾರತವೇ ಮುಂದೆ ನಿಂತಿದೆ. ವಿಶ್ವ ಚಾಂಪಿಯನ್ಶಿಪ್ ನಮ್ಮ ಯುವಕರ ಶಕ್ತಿ ಮತ್ತು ಸಂಸ್ಕೃತಿಯನ್ನು ತೋರಿಸುತ್ತದೆ” ಎಂದರು.

 

ವಿಶ್ವ ಯೋಗಾಸನ ಮತ್ತು ಯೋಗಾಸನ ಭಾರತದ ಪ್ರಧಾನ ಕಾರ್ಯದರ್ಶಿ ಡಾ. ಜೈದೀಪ್ ಆರ್ಯ ಅವರು ಮಾತನಾಡಿ, "ವಿಶ್ವದ ಎಲ್ಲಾ ಐದು ಖಂಡಗಳ ದೇಶಗಳು ಇದರಲ್ಲಿ ಭಾಗವಹಿಸುವಂತೆ ಮಾಡುವುದು ನನ್ನ ಮೊದಲ ಗುರಿಯಾಗಿತ್ತು. ಈಗ 60 ಕ್ಕೂ ಹೆಚ್ಚು ದೇಶಗಳು ನಮ್ಮೊಂದಿಗೆ ಕೈಜೋಡಿಸುತ್ತಿದ್ದು, ಕ್ರೀಡಾಪಟುಗಳ ಉತ್ಸಾಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೇವಲ ಪಂದ್ಯಾವಳಿಗಳನ್ನು ನಡೆಸುವುದು ಮಾತ್ರ ನಮ್ಮ ಉದ್ದೇಶವಲ್ಲ; ಭಾರತದ ಪ್ರಾಚೀನ ಜ್ಞಾನವಾದ ಯೋಗಾಸನವನ್ನು ಅಂತರರಾಷ್ಟ್ರೀಯ ನಿಯಮಗಳಿಗೆ ತಕ್ಕಂತೆ ಒಂದು ವ್ಯವಸ್ಥಿತ ಕ್ರೀಡೆಯಾಗಿ ಜಗತ್ತಿನಾದ್ಯಂತ ಬೆಳೆಸುವುದು ನಮ್ಮ ಕನಸಾಗಿದೆಎಂದರು.

 

ಯೋಗಾಸನ ಭಾರತದ ಅಧ್ಯಕ್ಷರಾದ ಉದಿತ್ ಶೇಠ್ ಅವರು ಮಾತನಾಡಿ, "ಯೋಗಾಸನವು ಜಗತ್ತಿಗೆ ಭಾರತ ನೀಡಬಹುದಾದ ಅತ್ಯುತ್ತಮ ಕ್ರೀಡಾ ಕೊಡುಗೆಯಾಗಿದೆ ಮತ್ತು ನಾವು ಈಗ ದಿಕ್ಕಿನಲ್ಲೇ ಹೆಜ್ಜೆ ಇಡುತ್ತಿದ್ದೇವೆ. ಇದು ಕೇವಲ ಒಂದು ಪಂದ್ಯಾವಳಿಯಲ್ಲ; ಭಾರತದಲ್ಲಿ ಹುಟ್ಟಿದ ಯೋಗವನ್ನು ಆಧುನಿಕ ತರಬೇತಿ, ಡಿಜಿಟಲ್ ಅಂಕ ಪದ್ಧತಿ ಮತ್ತು ನೇರ ಪ್ರಸಾರದ (Live streaming) ಮೂಲಕ ಇಡೀ ಜಗತ್ತಿಗೆ ಪರಿಚಯಿಸುತ್ತಿರುವ ಒಂದು ದೊಡ್ಡ ಕ್ರೀಡಾ ಆಂದೋಲನವಾಗಿದೆ ಎಂದರು.

 

ಏಷ್ಯನ್ ಯೋಗಾಸನ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಶ್ವ ಯೋಗಾಸನದ ಉಪಾಧ್ಯಕ್ಷರಾದ ಡಾ. ಸಂಜಯ್ ಮಾಲ್ಪಾನಿ ಅವರು ಮಾತನಾಡಿ, "ಏಷ್ಯಾ ಸೇರಿದಂತೆ ಇಡೀ ವಿಶ್ವದಲ್ಲಿ ಯುವ ಕ್ರೀಡಾಪಟುಗಳಿಗೆ ಯೋಗಾಸನವು ಒಂದು ಹೊಸ ಮತ್ತು ರೋಮಾಂಚನಕಾರಿ ಕ್ರೀಡೆಯಾಗಿ ವೇಗವಾಗಿ ಬೆಳೆಯುತ್ತಿದೆ ಎಂದರು.

 

ಜೂನ್ 2026 ಕೌಂಟ್ಡೌನ್ ಪ್ರಾರಂಭವಾಗುತ್ತಿದ್ದಂತೆ, ವಿಶ್ವ ಯೋಗಾಸನ ಚಾಂಪಿಯನ್ಶಿಪ್ ಕೇವಲ ಒಂದು ಕ್ರೀಡಾಕೂಟವಾಗಿ ಉಳಿಯದೆ, ಭಾರತದ ನೇತೃತ್ವದಲ್ಲಿ ಪ್ರಾಚೀನ ಜ್ಞಾನ ಮತ್ತು ಆಧುನಿಕ ಕ್ರೀಡಾ ಶ್ರೇಷ್ಠತೆಯು ಜಾಗತಿಕ ವೇದಿಕೆಯಲ್ಲಿ ಕೈಜೋಡಿಸುವ ಹೊಸ ಕ್ರೀಡಾ ಕ್ರಾಂತಿಗೆ ಮುನ್ನುಡಿ ಬರೆಯಲಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top