ಪರಿಸರವನ್ನು ಸಂರಕ್ಷಿಸಲು ಪರಿಸರದ ಪರಿಚಯ ಅಗತ್ಯ: ಪ್ರೊ.ಎಂ ದೇವಿಪ್ರಸಾದ್

Upayuktha
0

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿ ಶಾಸ್ತ್ರ ವಿಭಾಗ ಹಾಗೂ ನ್ಯಾಚುರಲ್ ಹಿಸ್ಟರಿ ಅಸೋಸಿಯೇಷನ್ ವತಿಯಿಂದ “ಜೀವ ವೈವಿಧ್ಯತಾ ದಿನ” ದ ಅಂಗವಾಗಿ, ಶುಕ್ರವಾರ ಮತ್ತು ಶನಿವಾರ, ಎರಡು ದಿನಗಳ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು –“ವೈವಿಧ್ಯ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ವಿಶ್ವವಿದ್ಯಾನಿಲಯದ ಡೀನ್ ಪ್ರೊಫೆಸರ್ ಮಂಜಯ್ಯ ಕಾರ್ಯಕ್ರಮವದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ತಜ್ಞ ಹಾಗೂ ಪರಿಸರ ಸಂರಕ್ಷಣಾವಾದಿ ದೇವಿ ಪ್ರಸಾದ್ ಕೆ. ಎನ್ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಜೀವ ವೈವಿಧ್ಯತೆ ಮತ್ತು ಅದರ ಮಹತ್ವದ ಬಗ್ಗೆ ಹಾಗೂ ಜೀವ ವೈವಿಧ್ಯತೆಯ ಸಂರಕ್ಷಣೆಯಲ್ಲಿ ಜೀವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯು ಮಹತ್ವವಾದುದು, ಎಂದು ಅವರು ಅಭಿಪ್ರಾಯಪಟ್ಟರು. ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್.ಮುಷ್ತಾಕ್, ನ್ಯಾಚುರಲ್ ಹಿಸ್ಟರಿ ಅಸೋಸಿಯೇಷನ್ ಸಂಚಾಲಕ ಡಾ. ನರಸಿಂಹಯ್ಯ, “ವೈವಿಧ್ಯ -2026” ಇದರ ಸಂಚಾಲಕ ಡಾ.ಜೈಸನ್ ಸಿಕ್ವೇರಾ ಹಾಗೂ ವಿಧ್ಯಾರ್ಥಿ ಸಂಚಾಲಕಿ ಸಿಂಚನ ಹೆಗ್ಡೆ ಉಪಸ್ಥಿತರಿದ್ದರು.


ವಿವಿಧ ಲೇಖನಗಳ ಸಂಗ್ರಹ ʼಫೂಟ್ ಪ್ರಿಂಟ್ʼ ಹೆಸರಿನ ವಿಭಾಗದ ಮ್ಯಾಗಜೀನ್‌ ಅನ್ನು ಬಿಡುಗಡೆಗೊಳಿಸಲಾಯಿತು.


ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.


ರಸಪ್ರಶ್ನೆ, ಚರ್ಚಾ ಸ್ಪರ್ಧೆ, ರಂಗೋಲಿ, ರೀಲ್ ಮೇಕಿಂಗ್ ಮುಂತಾದ ಸ್ಪರ್ಧೆಗಳಿದ್ದವು. ʼಬಯೋ ಬಜಾರ್ʼ ಸ್ಟಾಲ್‌ಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ವಿಭಾಗದ ವಿದ್ಯಾರ್ಥಿಗಳು ಕ್ಯಾಮರಾದಲ್ಲಿ ಸೆರೆಹಿಡಿದ ಚಿತ್ರಗಳ ಪ್ರದರ್ಶನ ಮತ್ತು ವಸ್ತು ಸಂಗ್ರಹಾಲಯದ ವೀಕ್ಷಣೆಗೆ ಅವಕಾಶ ಒದಗಿಸಲಾಗಿತ್ತು. ಲಯನಾ ಟ್ರಸ್ಟ್ ನ ವತಿಯಿಂದ ಶರಣ್ಯ ಮತ್ತು ತಂಡದವರು, ಹಾವುಗಳ ಕುರಿತಾಗಿ ಇರುವ ಕೆಲವು ಮೂಢನಂಬಿಕೆಗಳು, ಹಾವು ಕಡಿತ ಮತ್ತು ಚಿಕಿತ್ಸೆ ಕುರಿತಾಗಿ ಮಾಹಿತಿ ಹಂಚಿದರು.


ಸಮಾರೋಪ ಸಮಾರಂಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಆರ್.ಎಂ ಗೊಗೇರಿ, ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ. ಎಸ್. ಎಂ ಶಿವಪ್ರಕಾಶ್ ಸಂಶೋಧಕ ನಾಚಿಕೇತ್ ಶರ್ಮಾ ಭಾಗವಹಿಸಿದ್ದರು. ಮಧ್ಯಾಹ್ನದ ಅವಧಿಯಲ್ಲಿ ಹಳೆ-ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಫಾದರ್. ಸೂರಜ್ ಜೋಸೆಫ್ ಲೋಬೋ ಹಾಗೂ ವೈಷ್ಣವಿ. ಪೈ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿವಿಧ ಕಾಲೇಜುಗಳಿಂದ 200 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top