ಅ.ಭಾ.ಸಾ.ಪ ಮಂಗಳೂರು ತಾಲೂಕು ಸಮಿತಿಯಿಂದ "ತುಳುವರ ಪತ್ತನಾಜೆ' ಉಪನ್ಯಾಸ

Upayuktha
0

ಪತ್ತನಾಜೆಯಲ್ಲಿ ಕೃಷಿ ಸಂಸ್ಕೃತಿ ಅಂತರ್ಗತ: ಯುವ ವಾಗ್ಮಿ ವಿಜೇತ್ ಶೆಟ್ಟಿ ಮಂಜನಾಡಿ





ಮಂಗಳೂರು: ಪತ್ತನಾಜೆ ಆಚರಣೆಯ ಹಿಂದೆ ಈ ನೆಲದ ನಂಬಿಕೆ ಮತ್ತು  ಕೃಷಿ ಸಂಸ್ಕೃತಿ ಅಂತರ್ಗತವಾಗಿದೆ. ಸಾಂಪ್ರದಾಯಿಕ ಜಾತ್ರೆ, ಉತ್ಸವ, ದೈವಾರಾಧನೆ, ಯಕ್ಷಗಾನ ಮೇಳಗಳ ತಿರುಗಾಟಕ್ಕೆ ತೆರೆ ಎಳೆಯುವ ಕೃಷಿ ವರ್ಗದ ಜನರು ಕೃಷಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಗಡುವಿನಂತೆ ಪತ್ತನಾಜೆಯನ್ನು ಆಚರಿಸುತ್ತಾರೆ. ಇದೊಂದು ಕಾಲ ನಿರ್ಣಯದ ಮಹತ್ವವನ್ನು ಪಡೆದಿದೆ ಎಂದು ಯುವ ವಾಗ್ಮಿ ವಿಜೇತ್ ಶೆಟ್ಟಿ ಮಂಜನಾಡಿ ಹೇಳಿದರು.


ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಂಗಳೂರು ತಾಲೂಕು ಸಮಿತಿ ಹಾಗೂ ಥಿಯಾಸೋಫಿಕಲ್ ಸೊಸೈಟಿ ಮಂಗಳೂರು ಸಹಯೋಗದಲ್ಲಿ ನಗರದ ಥಿಯಾಸೋಫಿಕಲ್ ಸೊಸೈಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪತ್ತನಾಜೆ ಆಚರಣೆ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.


ಮುಖ್ಯ ಅತಿಥಿಯಾಗಿದ್ದ ವಿದ್ವಾನ್ ತುಪ್ಪೆಕಲ್ಲು ನರಸಿಂಹ ಶೆಟ್ಟಿ ಮಾತನಾಡಿ "ಚೆನ್ನಾಗಿ ಫಸಲು ಬರಲು ನೈಸರ್ಗಿಕ ಕ್ರಮವನ್ನು ಅಳವಡಿಸುವ ಮಹತ್ವದ ವಿಚಾರ ಪತ್ತನಾಜೆ ಆಚರಣೆಯ ಹಿಂದೆ ಇದೆ ಎಂದರು.


ಅಭಾಸಾಪ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷೆ ಡಾ. ಮೀನಾಕ್ಷಿ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಅಭಾಸಾಪ ಮಂಗಳೂರು ವಿಭಾಗ ಸಂಯೋಜಕ ಸುಂದರ ಶೆಟ್ಟಿ, ವಿದ್ವಾಂಸ ಡಾ. ಪ್ರಭಾಕರ ಜೋಷಿ ಉಪಸ್ಥಿತರಿದ್ದರು. ಅಭಾಸಾಪ ಕಾರ್ಯದರ್ಶಿ ಪ್ರೊ. ಶೈಲಜಾ ಪುದುಕೋಳಿ ಸ್ವಾಗತಿಸಿ, ಯಶೋದಾ ಕುಮಾರಿ ವಂದಿಸಿದರು. ಉಷಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top