ರಾಮೇನಹಳ್ಳಿಯಲ್ಲಿ ನಾಳೆ ರಾಜ್ಯ ಮಟ್ಟದ ಕವಿಗೋಷ್ಠಿ; ಬಿ.ಪುಟ್ಟಸ್ವಾಮಯ್ಯ ಬದುಕು-ಬರಹ ಉಪನ್ಯಾಸ

Upayuktha
0

  


ಹೊಳೆನರಸೀಪುರ: ಕರ್ನಾಟಕ ರಾಜ್ಯ ಬರಹಗಾರರ ಸಂಘದ ಹೂವಿನಹಡಗಲಿ ಹಾಗೂ ಹಾಸನ ಜಿಲ್ಲಾ ಘಟಕ ಮತ್ತು ಹೊಳೆನರಸೀಪುರ ತಾಲ್ಲೂಕು ಘಟಕದ ಕದಂಬ ಸೈನ್ಯ ಇವುಗಳ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ರಾಮೇನಹಳ್ಳಿಯ ಕಲ್ಕಿ ಪರಂಜ್ಯೋತಿ ದೇವಸ್ಥಾನದಲ್ಲಿ ಮೇ 24 ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿ, ರಂಗಗೀತೆ ಹಾಗೂ ನಾಟಕಕಾರ ಬಿ.ಪುಟ್ಟಸ್ವಾಮಯ್ಯ ಬದುಕು-ಬರಹ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅರಕಲಗೂಡು ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ .ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

 

ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷರಾದ ಮಧು ನಾಯ್ಕ ಲಂಬಾಣಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕದಂಬ ಸೇನೆಯ ಹೊಳೆನರಸೀಪುರ ತಾಲ್ಲೂಕು ಅಧ್ಯಕ್ಷ ರಾಮೇನಹಳ್ಳಿ ಪುಟ್ಯಸ್ವಾಮಿಗೌಡ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಇದೇ ವೇಳೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಹಾಸನ ಜಿಲ್ಲಾ ಘಟಕದ ಅಧ್ಯಕ್ಷರಾದ ಸುಂದರೇಶ್ ಡಿ. ಉಡುಗೊರೆ ಅವರು ಕಾರ್ಯಕ್ರಮಕ್ಕೆ ಶುಭನುಡಿಗಳನ್ನಾಡಲಿದ್ದಾರೆ.

 

ಪ್ರಸಿದ್ಧ ನಾಟಕಕಾರ ದಿವಂಗತ ಬಿ. ಪುಟ್ಟಸ್ವಾಮಯ್ಯನವರ 129ನೇ ವರ್ಷದ ಜನ್ಮದಿನ ಪುಣ್ಯ ಸ್ಮರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಬಿ. ಪುಟ್ಟಸ್ವಾಮಯ್ಯ ಬದುಕು-ಬರಹ ಕುರಿತು ಕವಿ ಹಾಗೂ ನಾಟಕಕಾರರಾದ ಗೊರೂರು ಅನಂತರಾಜು ಅವರು ಪ್ರಧಾನ ಉಪನ್ಯಾಸ ನೀಡಲಿದ್ದಾರೆ. ಮುಂದುವರಿದು, ಎಸ್.ಎಸ್.ಪುಟ್ಟೇಗೌಡರಛಲದೊಳ್ ದುರ್ಯೋಧನಂನಾಟಕದ ಕುರಿತು ಅಂಕಪುರದ ಪ್ರೊ..ಎಚ್.ಗಣೇಶ್ ಅವರು ಹಾಗೂಕುರುಕ್ಷೇತ್ರನಾಟಕದ ಕುರಿತು ಚನ್ನರಾಯಪಟ್ಟಣದ ಉಪನ್ಯಾಸಕರಾದ ಡಾ.ಬರಾಳು ಶಿವರಾಮ ಅವರು ಸವಿಸ್ತಾರವಾಗಿ ಮಾತನಾಡಲಿದ್ದಾರೆ.

 

ವೈಚಾರಿಕ ಹಾಗೂ ಸಾಂಸ್ಕೃತಿಕ ವೇದಿಕೆಯಲ್ಲಿ ಓಡನಹಳ್ಳಿಯ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರುತಿಕುಮಾರ್, ಮಂಡ್ಯದ ಕದಂಬ ಸೇನೆ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷರಾದ ಬೇಕ್ರಿ ರಮೇಶ್, ಹಾಸನದ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಾ.ನಂ.ಲೋಕೇಶ್, ಮೈಸೂರಿನ ನಾಟಕಕಾರರಾದ ಎಸ್.ಎಸ್.ಪುಟ್ಟೇಗೌಡರು, ಹಾಸನದ ಕವಿ ಎನ್.ಎಲ್.ಚನ್ನೇಗೌಡ ಹಾಗೂ ಹೊಳೆನರಸಿಪುರ ತಾಲೂಕು ಬರಹಗಾರರ ಸಂಘದ ಅಧ್ಯಕ್ಷರಾದ ಡಾ.ಲೋಕೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

 

ಕಾರ್ಯಕ್ರಮದ ಆರಂಭದಲ್ಲಿ ದಿಬ್ಬೂರು ರಮೇಶ್ ಅವರು ಪ್ರಾರ್ಥಿಸಲಿದ್ದು, ನಾಟಕ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಂಗಸಂಗೀತ ವಿಭಾಗದ ಅರಕಲಗೂಡು ತಾಲೂಕು ಸಂಚಾಲಕರಾದ ಕೇಶವ ಜಿ.ಜಿ. ಅವರು ಸ್ವಾಗತ ಭಾಷಣ ಮಾಡಲಿದ್ದಾರೆ. ಕದಂಬ ಸೇನೆಯ ಅರಕಲಗೂಡು ತಾಲ್ಲೂಕು ಅಧ್ಯಕ್ಷರಾದ ಬೇಕ್ರಿ ರಾಜೇಗೌಡರು ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಮಾಡಲಿದ್ದಾರೆ. ಸಮಗ್ರ ಸಮಾವೇಶದ ನಿರೂಪಣೆಯನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಸಿ.ಆರ್.ವಿಜಯಕುಮಾರ್ ಅವರು ನೆರವೇರಿಸಲಿದ್ದಾರೆ. ಬಾರಿಯ ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ರಂಗಗೀತೆ ಗಾಯನ ಕಾರ್ಯಕ್ರಮಕ್ಕಾಗಿ ಈಗಾಗಲೇ ರಾಜ್ಯದ ವಿವಿಧ ಭಾಗಗಳಿಂದ 60ಕ್ಕೂ ಹೆಚ್ಚು ಗಾಯಕರು ಮತ್ತು ಕವಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಆರ್. ವಿಜಯಕುಮಾರ್ ಚಿಕ್ಕಮಗಳೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top