ನಾಟ್ಯಮಯೂರಿ ಶಾಸ್ತ್ರೀಯ ನೃತ್ಯ ಶಾಲೆಯ ವಿದ್ಯಾರ್ಥಿನಿಯರ ರಂಗಪ್ರವೇಶ

Upayuktha
0


ಬೆಂಗಳೂರು: ನಾಟ್ಯಮಯೂರಿ ಶಾಸ್ತ್ರೀಯ ನೃತ್ಯ ಶಾಲೆಯ, ವಿದುಷಿ ಶ್ರೀ ಲಕ್ಷ್ಮಿ ರಂಗನಾಥ ಅವರ ವಿದ್ಯಾರ್ಥಿನಿಯರಾದ, ಕುಮಾರಿ ವೀ ಜೈತ್ರಿ ಶ್ರೀ, ಕುಮಾರಿ ಮೋಕ್ಷಿತ ಯು, ಕುಮಾರಿ ಎಂ ಶ್ರೀ ಸಂಯುಕ್ತ, ಕುಮಾರಿ ಎನ್ ಕನಿಷ್ಕ, ಕುಮಾರಿ ಧನ್ಯಶ್ರೀ ಎಚ್, ಕುಮಾರಿ ಜೀವಿಕ ವಿಕಾಸ್ ಘಾಗರೆ ಇವರೆಲ್ಲರ ಪ್ರಥಮ ಪ್ರವೇಶ ಅಂದರೆ ಗೆಜ್ಜೆಪೂಜೆ, ಇತ್ತೀಚೆಗೆ ಎಡಿಎ ರಂಗಮಂದಿರದಲ್ಲಿ ಜರುಗಿತು.


ಮುಖ್ಯ ಅತಿಥಿಗಳಾಗಿ ಡಾ. ಶಾಂತಲಾ ರವಿಶಂಕರ್, ಶೈಕ್ಷಣಿಕ ನಿರ್ದೇಶಕರು ಶ್ರೀ ಕೃಷ್ಣ ಇಂಟರ್ನ್ಯಾಷನಲ್ ಸ್ಕೂಲ್, ಶ್ರೀಮತಿ ಪಣಿಮಾಲ ಎನ್ ಎ ಸ್ಥಾಪಕ ನಿರ್ದೇಶಕರು ನೃತ್ಯ ಸಂಜೀವಿನಿ ಅಕಾಡೆಮಿ, ಶ್ರೀಮತಿ ಲಕ್ಷ್ಮಿ ಟಿ ಎನ್ ಪ್ರಾಂಶುಪಾಲರು, ವಿಶ್ವ ವೆಂಕಟೇಶ್ವರ ಇಂಟರ್ನ್ಯಾಷನಲ್ ಸ್ಕೂಲ್, ಮುಂತಾದವರು ಆಗಮಿಸಿದ್ದರು.


ಸುಮಾರು ಎರಡು ಗಂಟೆಗಳ ಕಾಲ ನೃತ್ಯ ಶಾಲೆಯ ಆರೂ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನವನ್ನು ನೀಡಿದರು. ವಳ್ಳುವೂರು ಶೈಲಿಯ ಭಂಗಿಗಳನ್ನು ಪರಂಪರೆಯಾಗಿ ಅನುಸರಿಸುವ ಇವರು ಶಿಷ್ಯರನ್ನೂ ಕೂಡ ಬಹಳ ಲಾಲಿತ್ಯಮಯವಾಗಿ ನರ್ತಿಸುವಂತೆ ವಿದ್ಯೆಯನ್ನು ಧಾರೆ ಏರೆದಿದ್ದಾರೆ. ಮೊದಲ ನೃತ್ಯವಾಗಿ ಪುಷ್ಪಾಂಜಲಿಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ, ಆರುಪಾಡೈ ಎಂಬ ಸುಬ್ರಮಣ್ಯನ ಗುಣಗಾನವಿರುವ ಕೃತಿ, ಈ ಆರೂ ವಿದ್ಯಾರ್ಥಿನಿಯರಿಂದ ಏಕ ವ್ಯಕ್ತಿ ಪ್ರದರ್ಶನಗಳಾದ ಕಾಯಿ ದೇವಿ, ಕೊರವತಿ ನೃತ್ಯ, ವೆಂಕಟೇಶ್ವರನ ಕೃತಿ ಭಜರೆ ಹನುಮಂತ, ಶಿವ, ವಾಸವಿ ದೇವಿ, ಹಾಗೂ ಕಡೆಯದಾಗಿ ಕೃಷ್ಣ ತಿಲ್ಲಾನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ಲಾಸ್ಯವೇ ಪ್ರಧಾನವಾಗಿರುವ ಒಳ್ಳುವೂರು ಶೈಲಿಯ ನಾಟ್ಯ ಸಭಿಕರೆಲ್ಲರನ್ನು ರಂಜಿಸಿತು.



ಅತಿಥಿ ಶಾಂತಲಾ ಇವರು ಮಾತನಾಡುತ್ತಾ ಯಾವುದೇ ಕಾರಣಕ್ಕೂ ಇಂತಹ ವಿದ್ಯೆಗಳನ್ನು ಕಲಿಯುವುದು ನಿಲ್ಲಬಾರದು ಎಂದು ಹೇಳಿದರೆ, ವಿದುಷಿ ಪರಿಮಳ ಇವರು ನೃತ್ಯ ಗುರುಗಳಾದ ಶ್ರೀ ಲಕ್ಷ್ಮಿ ರಂಗನಾಥ್ ಅವರ ಪರಿಶ್ರಮವನ್ನು ಶಾಸ್ತ್ರೀಯ ಕಲೆಗೆ ಅವರ ಕೊಡುಗೆಗಳನ್ನು ಹಾಗೂ ಬದ್ಧತೆಯನ್ನು ಪ್ರಶಂಸಿದರು.


ಶ್ರೀಮತಿ ಲಕ್ಷ್ಮಿ ಟಿ ಎನ್ ಅವರು ಮಾತನಾಡುತ್ತಾ ನೃತ್ಯ ಕಲಿಯುವ ವಿದ್ಯಾರ್ಥಿಯರೆಲ್ಲರೂ ಸಂಗೀತ ಮತ್ತು ಸಾಹಿತ್ಯವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಇವೆಲ್ಲವೂ ಕಲಿಯುವ ನಾಟ್ಯಕ್ಕೆ ಪೂರಕ ಎಂದು ಹೇಳಿದರು.



ವಿದುಷಿ ಶ್ರೀ ಲಕ್ಷ್ಮಿ ರಂಗನಾಥ್ ಉಳಿಸಿಕೊಂಡಿರುವ ಅವರ ಗುರು, ಭಾರತ ಶಿಖರಮ್, ನಾಟ್ಯರಾಣಿ ಶಾಂತಲಾ, ಗುರು ವಿದುಷಿ ಪದ್ಮಿನಿ ರಾಮಚಂದ್ರನ್ ರವರ ಪರಂಪರೆಯನ್ನು ಮುಂದುವರಿಸಿ ಆರು ಜನ ವಿದ್ಯಾರ್ಥಿನಿಯರೂ ಒಳ್ಳೆಯ ನೃತ್ಯ ಗುರುಗಳಾಗಿ ಹೊಮ್ಮಲಿ ಎಂದು ಆಶಿಸಿದರು.


ಒಟ್ಟಾರೆ ಇಡೀ ಕಾರ್ಯಕ್ರಮ ಮನೋರಂಜನೀಯವಾಗಿತ್ತು ಹಾಗೂ ನಮ್ಮ ಶ್ರೀಮಂತ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿತ್ತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top