ತುಮಕೂರು:
ಜಿಲ್ಲೆಯ ಗುಬ್ಬಿಯ ಶ್ರೀ
ಚಿದಂಬರ ಆಶ್ರಮದ ಶ್ರೀ ನಾರಾಯಣ ಗುರುಕುಲ
ಮಾದರಿಯ ಶಾಲೆಗೆ ( 4 ನೇ ತರಗತಿಯಿಂದ 8 ನೇ
ತರಗತೀವರೆಗೆ) ಸೇರಲು
ಬಯಸುವ ಬಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ತ್ರಿಮತಸ್ಥ
ಉಪನೀತ ಬ್ರಾಹ್ಮಣ ವಿದ್ಯಾರ್ಥಿಗಳಿಗೆ 2026-2027 ಸಾಲಿನ ಪ್ರವೇಶ ಪ್ರಕ್ರಿಯೆ ಶುರುವಾಗಿದೆ.
ಆಧುನಿಕ
ಶಿಕ್ಷಣದ ಜೊತೆಗೆ ವೈದಿಕ ಸಂಪ್ರದಾಯ, ವೇದ, ಉಪನಿಷತ್ತು, ಸಂಸ್ಕೃತ
ಭಾಷೆಯ ಪರಿಚಯ, ಗೀತಾರ್ಥ ಪ್ರಕಾಶ, ಯೋಗ, ಧ್ಯಾನ ಮತ್ತು
ಮೌಲ್ಯಯುತ ಶಿಕ್ಷಣವನ್ನು ಗುಬ್ಬಿಯ ಶ್ರೀ ಚಿದಂಬರ ಆಶ್ರಮದಲ್ಲಿ
ನೀಡಲಾಗುತ್ತಿದೆ.
ಕಳೆದ
ಹತ್ತು ದಶಕಗಳಿಂದ ಬ್ರಾಹ್ಮಣ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಅವಧೂತ ಪರಂಪರೆಯ ಶ್ರೀ ಚಿದಂಬರ ಆಶ್ರಮ
ನಿರಂತರವಾಗಿ ಶ್ರಮ ವಹಿಸುತ್ತಿದೆ.
ಗುರುಕುಲ
ಶಿಕ್ಷಣಕ್ಕೆ ಸೇರಲು ಬಯಸುವವರು ಆಶ್ರಮದ ಅಧ್ಯಕ್ಷರಾದ ಡಾ. ಸಚ್ಚಿದಾನಂದ ಶರ್ಮಾ
ಅವರನ್ನು ದೂರವಾಣಿ
ಸಂಖ್ಯೆ: 8660142615 ಗೆ
ಕರೆ ಮಾಡಿ ಅಥವಾ ವಾಟ್ಸಾಪ್
ಮೂಲಕ ಸಂಪರ್ಕಿಸಲು ಕೋರಲಾಗಿದೆ.
ಅಲ್ಲದೆ,
ಆಶ್ರಮದ ಈ ಮೇಲ್ : manager@ chidambara.org / ಸಂಪರ್ಕಿಸಬಹುದು. ಆಶ್ರಮದ ದೂರವಾಣಿ ಸಂಖ್ಯೆ: 99647 96451ಗೆ ಅಥವಾ ವಾಟ್ಸಾಪ್
ಮೂಲಕ ಸಹ ಸಂಪರ್ಕ ಮಾಡಬಹುದು
ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


