ಕುಳಾಯಿ:
ಇಲ್ಲಿನ ಮೈರ್ಪಾಡಿ ಕುಳಾಯಿ ನಾಗಬನದಲ್ಲಿ ಭಕ್ತ ವೃಂದದ ವತಿಯಿಂದ
ಶ್ರೀ ದೇವರ ಪ್ರತಿಷ್ಠಾ ವರ್ಧಂತಿ
ಮಹೋತ್ಸವವು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಡಗರದಿಂದ ಜರಗಿತು.
ವೇದಮೂರ್ತಿ
ಚಿತ್ರಾಪುರ ಲಕ್ಷ್ಮೀಶ ಆಚಾರ್ಯ ರವರ ವೈದಿಕ ಪೌರೋಹಿತ್ಯದಲ್ಲಿ,
ದಿವಾಕರ ಎಂ ಮತ್ತು ನಾಗೇಶ
ಎಂ ರವರ ನೇತೃತ್ವದಲ್ಲಿ ಸಾಂಪ್ರದಾಯಿಕ
ಧಾರ್ಮಿಕ ವಿಧಿವಿಧಾನಗಳು ಸಾಂಗವಾಗಿ ನೆರವೇರಿದವು.
ವರ್ಧಂತಿ
ಮಹೋತ್ಸವದ ಅಂಗವಾಗಿ ನಾಗಬನದಲ್ಲಿ ಶ್ರೀ ಅಶ್ವಥ ಪೂಜೆ,
ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಶನಿ ಪೂಜೆ,
ಶ್ರೀ ನಾಗ ತಂಬಿಲ, ಶ್ರೀ
ಆಶ್ಲೇಷಾ ಬಲಿ, ವಿಶೇಷ ಹೋಮ
ಹಾಗೂ ಕಲಶಾಭಿಷೇಕಗಳು ನಡೆದವು. ಇದೇ ಸಂದರ್ಭದಲ್ಲಿ ಶ್ರೀ
ಮಲರಾಯ ದೈವದ ತಂಬಿಲ ಸೇವೆ
ಸೇರಿದಂತೆ ವಿವಿಧ ಧಾರ್ಮಿಕ ಸೇವಾ ಕಾರ್ಯಕ್ರಮಗಳು ಭಕ್ತರ
ಸಮ್ಮುಖದಲ್ಲಿ ಜರಗಿದವು.
ಧಾರ್ಮಿಕ
ಸಭೆಯಲ್ಲಿ ನಿಕಟಪೂರ್ವ ಮನಪಾ ಸದಸ್ಯೆ ಶ್ರೀಮತಿ
ವೇದಾವತಿ, ಎಂ. ವೆಂಕಟ್ರಾವ್, ಆನಂದ
ರಾವ್, ಸುರೇಶ ಕೊಟ್ಟಾರಿ, ರೋಹಿಣೇಶ
ದೇವಾಡಿಗ, ರಾಮಚಂದ್ರ ಶೆಟ್ಟಿ ಹಾಗೂ ಪ್ರಸನ್ನ ಮೈರ್ಪಾಡಿ
ಉಪಸ್ಥಿತರಿದ್ದರು. ಹೊನ್ನೆಕಟ್ಟೆ ಫ್ರೆಂಡ್ಸ್ ಸರ್ಕಲ್ ಕುಳಾಯಿ ಇದರ ಅಧ್ಯಕ್ಷರಾದ ವಾಸುದೇವ
ದೇವಾಡಿಗ, ಶ್ರೀಹರಿ ಯಮ್, ಶ್ರೀಮತಿ ರಮಾ
ವೆಂಕಟ್ರಾವ್, ಶ್ರೀಮತಿ ಮಹಾಲಕ್ಷ್ಮೀ ದಿವಾಕರ, ಶ್ರೀಮತಿ ಸುಕನ್ಯಾ ನಾಗೇಶ್ ಮತ್ತು ಶ್ರೀಮತಿ ವಸಂತಿ ದಾಸಪ್ಪಯ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದು ದೇವರ ಕೃಪೆಗೆ ಪಾತ್ರರಾದರು.
ಪವನ್
ಮೈರ್ಪಾಡಿ ಮತ್ತು ವಿಕ್ರಮ್ ಮೈರ್ಪಾಡಿ ಅವರು ಸಮಗ್ರ ಕಾರ್ಯಕ್ರಮದ
ವ್ಯವಸ್ಥಿತ ಸಂಯೋಜನೆ ಮಾಡಿದ್ದು, ಪ್ರಮುಖರು, ಸ್ಥಳೀಯರು ಹಾಗೂ ಭಕ್ತ ವೃಂದದ
ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿಬಂದಿತು. ತದನಂತರ ನೆರೆದಿದ್ದ ಸಹಸ್ರಾರು ಭಕ್ತಾಧಿಗಳಿಗೆ ಶ್ರೀ ದೇವರ ಮಹಾಪ್ರಸಾದ
ವಿತರಣೆ ಮಾಡಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


