ಸ್ಪೂರ್ತಿ ಸೆಲೆ: ವಿಶ್ವ ಕುಟುಂಬ ದಿನ

Upayuktha
0


ಹಲೋ, ಹೇಗಿದ್ದೀರಾ?

ಕುಟುಂಬದ ಮಹತ್ವವನ್ನು ಎಲ್ಲೆಡೆ ಸಾರಲು ಪ್ರತಿ ವರ್ಷ ಮೇ 15ರಂದು "ವಿಶ್ವ ಕುಟುಂಬ ದಿನ"ವನ್ನಾಗಿ ಆಚರಿಸಲಾಗುತ್ತಿದೆ. ನಮ್ಮ ಸಂಸ್ಕೃತಿಯಲ್ಲಿ ವಸುಧೈವ ಕುಟುಂಬಕಂ ಎಂದರೆ ಜಗತ್ತೇ ಒಂದು ಕುಟುಂಬ ಎಂದು ಸಾರಿದ ಪರಂಪರೆ ನಮ್ಮದು. ನಮ್ಮಲ್ಲಿ ಎಷ್ಟೇ ಆಧುನಿಕತೆಯ ಗಾಳಿ ಬೀಸಿದರೂ ನಮ್ಮಲ್ಲಿ ಕುಟುಂಬದ ತಳಪಾಯ ಇನ್ನೂ ಗಟ್ಟಿಯಾಗಿ ಇದೆ.


ನಮ್ಮಲ್ಲಿ ಮಾತೃ ಪ್ರಧಾನ ಕುಟುಂಬ, ಪಿತೃ ಪ್ರಧಾನ ಕುಟುಂಬ. ವಿಭಕ್ತ,ಮತ್ತು ಅವಿಭಕ್ತ ಕುಟುಂಬ ಎಂಬ ಅನೇಕ. ಪ್ರಕಾರಗಳಿದ್ದರೂ ನಮ್ಮಲ್ಲಿ ಪ್ರಮುಖವಾಗಿರುವವುದು ಪಿತೃ ಪ್ರಧಾನ ಕುಟುಂಬ ಮಾತ್ರ. ಭಾರತೀಯ ಕುಟುಂಬ ವ್ಯವಸ್ಥೆ, ಅಮೆರಿಕನ್ ಡಾಲರ್, ಮತ್ತು ಚೈನೀಸ್ ಖಾದ್ಯ ಜಗತ್ತಿನಲ್ಲಿ ಶ್ರೇಷ್ಠ ಎಂದು ಹೇಳಲಾಗುತ್ತದೆ. ಕುಟುಂಬ ವ್ಯವಸ್ಥೆ ನಮ್ಮ ಸಂಬಂಧಗಳನ್ನು ಗಟ್ಟಿ. ಮಾಡುತ್ತದೆ ಮತ್ತು ನಮ್ಮಲ್ಲಿ ಸುರಕ್ಷತೆಯ ಭಾವನೆಯನ್ನು ಮೂಡಿಸುತ್ತದೆ.


ನಾವೆಲ್ಲ ಎಷ್ಟೇ ಪಾಶ್ಚಿಮಾತ್ಯರ ಅನುಕರಣೆಗೆ ಜೋತು ಬಿದ್ದರೂ ಕೊನೆಗೆ ನಮಗೆ ನೆನಪಾಗುವುದು ನಮ್ಮ ಮನೆ ಮತ್ತು ಮನೆಯವರು, ನಮ್ಮ ಸಂಬಂಧಗಳು ಮಾತ್ರ. ನಮ್ಮಲ್ಲಿ ವಿಚ್ಛೇದನಗಳು ಶುರು ಆಗಿದ್ದರೂ ಅವು ಇನ್ನೂ ನಮ್ಮ ಸಂಸ್ಕೃತಿಯಲ್ಲಿ ಬೇರು ಬಿಟ್ಟಿಲ್ಲ. ಈಗಲೂ  ಮದುವೆ ಮಾಡುವಾಗ ನಾವು ಚೆಕ್ ಮಾಡುವುದು ಕೌಟುಂಬಿಕ ಹಿನ್ನಲೆಯನ್ನು. ಶ್ರಾದ್ಧ ಮಾಡಿಸುವಾಗ ಕುಟುಂಬದ ಮೃತ ಸದಸ್ಯರ ಹೆಸರಿನಲ್ಲಿ ತರ್ಪಣ ಬಿಡಿಸುವ ಉದ್ದೇಶವೇ ನಮ್ಮ ಕುಟುಂಬದ ಮರೆಯಾದ ಸದಸ್ಯರನ್ನು ನೆನಪು ಮಾಡಿಕೊಳ್ಳುವುದು.

ಬನ್ನಿ, ಕುಟುಂಬ ವ್ಯವಸ್ಥೆಯನ್ನು ಸಂಭ್ರಮಿಸೋಣ. ಏನಂತೀರಾ?

- ಗಾಯತ್ರಿ ಸುಂಕದ, ಬದಾಮಿ


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top