ಬೆಂಗಳೂರು:
ಇಂದಿನ ಕಾಲಘಟ್ಟದಲ್ಲಿ ಹಿಂದೂ ಸಮಾಜ ಮತ್ತು ಧಾರ್ಮಿಕ
ಅಸ್ಮಿತೆಯ ವಿರುದ್ಧ ವಿವಿಧ ರೂಪಗಳಲ್ಲಿ ಸಂಘಟಿತ ಸವಾಲುಗಳು ಎದುರಾಗುತ್ತಿವೆ. ‘ಲವ್ ಜಿಹಾದ್’, ‘ಲ್ಯಾಂಡ್
ಜಿಹಾದ್’ ಬಳಿಕ ಇದೀಗ ‘ಕಾರ್ಪೊರೇಟ್
ಜಿಹಾದ್’ ಕುರಿತು ಸಮಾಜದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಪ್ರತಿಷ್ಠಿತ ಕಾರ್ಪೊರೇಟ್ ಕಂಪನಿಗಳಲ್ಲಿ ಹಿಂದೂ ಮಹಿಳೆಯರನ್ನು ಗುರಿ ಮಾಡಿ, ಅವರಿಗೆ
ಲೈಂಗಿಕ ಕಿರುಕುಳ ನೀಡಿ, ಅವರ ನಗ್ನ ವಿಡಿಯೋ
ಇಟ್ಟುಕೊಂಡು, ಕಿರುಕುಳ ನೀಡುವ ಮತ್ತು ಅವರನ್ನು ಮತಾಂತರ ಮಾಡುವ ಆಘಾತಕಾರಿ ಘಟನೆಗಳು ಸಮಾಜದಲ್ಲಿ ಆತಂಕ ಉಂಟುಮಾಡಿವೆ.
ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಕಾರ್ಪೊರೇಟ್ ಜಿಹಾದ್ : ಮಿಥ್ಯ ಮತ್ತು ವಾಸ್ತವ’ ಎಂಬ ವಿಷಯದ ಮೇಲೆ
ವಿಶೇಷ ಸಾರ್ವಜನಿಕ ಸಂವಾದ ಕಾರ್ಯಕ್ರಮವನ್ನು ದಿನಾಂಕ16 ಮೇ 2026, ಶನಿವಾರ ಸಂಜೆ 5.30ಕ್ಕೆ ಶ್ರೀ ಸತ್ಯಪ್ರಮೋದ ಕಲ್ಯಾಣ ಮಂಟಪ, ನ್ಯಾಷನಲ್ ಕಾಲೇಜ್ ಹತ್ತಿರ, ಬಸವನಗುಡಿ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಮಾಜ ಜಾಗೃತಿ, ಧಾರ್ಮಿಕ
ಅಸ್ಮಿತೆ ಮತ್ತು ಯುವ ಪೀಳಿಗೆಯ ರಕ್ಷಣೆಯ
ಕುರಿತು ಚರ್ಚೆ ನಡೆಯಲಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


