ಮಂಗಳೂರು:
ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ 2026-27 ನೇ ಶೈಕ್ಷಣಿಕ ವರ್ಷದ
ಹಿರಿಯ ಪ್ರಾಥಮಿಕ ಶಾಲಾ ಪೋಷಕರ ಸಮನ್ವಯ
ಕಾರ್ಯಕ್ರಮವು ರೇಷ್ಮಾ ಮೆಮೋರಿಯಲ್ ಆಡಿಟೋರಿಯಂ ನಲ್ಲಿ ನಡೆಯಿತು. ತಾಯಿ ಭಾರತ ಮಾತೆಗೆ
ದೀಪವನ್ನು ಬೆಳಗುವುದರ ಮೂಲಕ ಚಾಲನೆಗೊಂಡ ಈ
ಕಾರ್ಯಕ್ರಮಕ್ಕೆ ಹಿರಿಯ ಸಮಾಲೋಚಕರು, ಮಾನಸಿಕ ಆರೋಗ್ಯ ಶಿಕ್ಷಣತಜ್ಞರು, ಸಂಪರ್ಕ ಮತ್ತು ತರಬೇತಿ ತಂತ್ರಜ್ಞರು ಆಗಿರುವ ಶ್ರೀ ಜೋಯಲ್ ಕೆ
ಟಾಮ್ ಮುಖ್ಯ ಅತಿಥಿಗಳಾಗಿ ಆಗಮಿಸಿದರು.
ಶ್ರೀ
ಜೋಯಲ್ ಕೆ ಟಾಮ್ ಮಾತನಾಡಿ
ಹಲವು ಕಡೆಗಳಿಂದ ಬರುವಂತಹ ಒತ್ತಡಗಳಿಂದ
ಮಕ್ಕಳು ಗೊಂದಲಕ್ಕೊಳಗಾಗುತ್ತಾರೆ. ಈ ಎಲ್ಲಾ ಗೊಂದಲಗಳಿಂದ
ಮಕ್ಕಳನ್ನು ಹೊರತಂದು ಅವರ ಗುರಿ ಸಾಧನೆಗಾಗಿ
ಪೋಷಕರು ಹಾಗೂ ಶಿಕ್ಷಕರ ಪಾತ್ರ
ಮಹತ್ತರವಾದದ್ದು. ಮಕ್ಕಳ ಶಿಕ್ಷಣ ಪ್ರಯಾಣ ಮನೆಯಿಂದಲೇ ಪ್ರಾರಂಭವಾಗಬೇಕು. ಹದಿಹರೆಯದ ಮಕ್ಕಳ ಕೆಲವು ಮಾನಸಿಕ ಸ್ಥಿತಿಗತಿಯ ಬಗ್ಗೆ ಮಾತನಾಡಿದ ಇವರು ಪೋಷಕರಿಗೆ ಇದರ
ಬಗ್ಗೆ ಅರಿವು ಇರಬೇಕು. ಈ ಕುರಿತು ಪೋಷಕರು
ನಿರಂತರವಾಗಿ ಶಿಕ್ಷಕರ ಸಂಪರ್ಕದಲ್ಲಿರಬೇಕು ಎಂದರು.
ಪ್ರಾಸ್ತಾವಿಕ
ಮಾತುಗಳನ್ನಾಡಿದ ಶಕ್ತಿ ವಿದ್ಯಾ ಸಂಸ್ಥೆಯ ಮುಖ್ಯ ಸಲಹೆಗಾರರಾಗಿರುವ ಶ್ರೀ ರಮೇಶ್ ಕೆ
ನಮ್ಮ ನಗರದ ಸುಮಾರು 225 ಸ್ಥಳಗಳಿಂದ
ಹಾಗೂ ರಾಜ್ಯದ 31 ಜಿಲ್ಲೆಗಳಿಂದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಗೆ ವಿದ್ಯಾರ್ಜನೆಗಾಗಿ
ಬರುತ್ತಿದ್ದಾರೆ. ನಮ್ಮ ಉದ್ಧೇಶ ಭಾರತೀಯ
ಸಂಸ್ಕೃತಿ, ಮೌಲ್ಯದ ಜೊತೆಗೆ ಒಳ್ಳೆಯ ಸಂಸ್ಕಾರದ ಶಿಕ್ಷಣ ನೀಡುವುದಾಗಿದೆ ಎಂದು ಹೇಳಿದರು.
ಪೋಷಕರನ್ನು
ಉದ್ಧೇಶಿಸಿ ಮಾತನಾಡಿದ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ
ಶ್ರೀಮತಿ ಡಾ. ಸುರೇಖಾ ಭಟ್
ಮಗು ಒಂದು ದೀಪವಿದ್ದಂತೆ, ಪೋಷಕರು
ಹಾಗೂ ಶಿಕ್ಷಕರು ಆ ದೀಪವು ಆರದಂತೆ
ಕಾಪಾಡುವ ಹಸ್ತಗಳು ಎಂದರು. ಬಳಿಕ 2026-27 ರ ಸಂಪೂರ್ಣ ಕಾರ್ಯಚಟುವಟಿಕೆಗಳ
ಬಗ್ಗೆ ಮಾಹಿತಿಯನ್ನು ಪೋಷಕರಿಗೆ ನೀಡಿದರು.
ಶಕ್ತಿ
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರದೀಪ್ ಕುಮಾರ್
ಶೆಟ್ಟಿ ಮಾತನಾಡಿ ವಿಧ್ಯಾರ್ಥಿಗಳ ಉತ್ತಮ ಸಾಧನೆಗೆ ಕೇವಲ ಸಂಸ್ಥೆ, ಶಿಕ್ಷಕರು
ಮಾತ್ರ ಸಾಕಾಗಲ್ಲ, ಮಗುವಿನ ಅವಿರತ ಪ್ರಯತ್ನ ಹಾಗೂ ಪೋಷಕರ ನಿರಂತರ
ಪ್ರೋತ್ಸಾಹ ಅಗತ್ಯ. ಮಕ್ಕಳು ತನ್ನ ಗುರಿಯನ್ನು ಇಟ್ಟುಕೊಳ್ಳುವುದರಲ್ಲಿ
ಪೋಷಕರ ಮಾರ್ಗದರ್ಶನ ಅಮೂಲ್ಯವಾದದ್ದು ಎಂದರು.
ಅಧ್ಯಕ್ಷೀಯ
ನುಡಿಗಳನ್ನಾಡಿದ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ಕೆ ಸಿ
ನೈಕ್ ಅವರು ಮಕ್ಕಳು ದೇಶದ
ಸಂಪತ್ತಾಗಬೇಕು, ಹಾಗೆ ಆಗಬೇಕಾದರೆ ಮಕ್ಕಳ
ಸರ್ವಾಂಗೀಣ ಅಭಿವೃದ್ಧಿಗೆ ಪೋಷಕರು ಹಾಗೂ ಶಿಕ್ಷಕರು ಜೊತೆಯಾಗಿ
ಕಾರ್ಯಪ್ರವೃತ್ತರಾಗಬೇಕು, ಮಕ್ಕಳ ಲೋಪದೋಷಗಳನ್ನು ಎಳವೆಯಲ್ಲಿಯೇ ಕಿವುಚಿ ಹಾಕಬೇಕು ಎಂದರು.
ಶಕ್ತಿ
ರೆಸಿಡೆನ್ಶಿಯಲ್ ಶಾಲೆಯ ಶಿಕ್ಷಕಿ ಶ್ರೀಮತಿ ಚೇತನಾ ತಲಪಾಡಿ ನಿರೂಪಿಸಿ, ನಯನಾ ಸ್ವಾಗತಿಸಿದರು ಹಾಗೂ
ಅಕ್ಷಿತಾ ಶೆಟ್ಟಿ ಧನ್ಯವಾದವನ್ನು ಸಮರ್ಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



