ಮಂಗಳೂರು:
ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೇ 12 ದಂದು "ಕಾವ್ಯ ಕನ್ನಡಿಯಲ್ಲಿ ಕಂಡ ವಿವೇಕಾನಂದರು” ಎಂಬ
ವಿಷಯದ ಕುರಿತು ವಿವೇಕ ವಾಣಿ ಉಪನ್ಯಾಸ ಕಾರ್ಯಕ್ರಮ
ನಡೆಯಿತು.
ಕಾರ್ಯಕ್ರಮದಲ್ಲಿ
ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ
ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ.
ಧನಂಜಯ ಕುಂಬ್ಳೆ ಅವರು ಸ್ವಾಮಿ ವಿವೇಕಾನಂದರ
ವ್ಯಕ್ತಿತ್ವ, ಸೇವಾ ಮನೋಭಾವ, ದೇಶಭಕ್ತಿ
ಹಾಗೂ ಯುವಜನತೆಗೆ ನೀಡಿದ ಸಂದೇಶಗಳ ಕುರಿತು ಮನಮುಟ್ಟುವಂತೆ ಉಪನ್ಯಾಸ ನೀಡಿದರು.
ಸ್ವಾಮಿ
ವಿವೇಕಾನಂದರು ಕೇವಲ ಸನ್ಯಾಸಿಯಲ್ಲ, ಅವರು
ಜಾಗೃತ ಭಾರತದ ಚೇತನ, ಯುವಶಕ್ತಿಯ ಪ್ರತೀಕ ಹಾಗೂ ಆತ್ಮವಿಶ್ವಾಸದ ಜ್ಯೋತಿಯಾಗಿದ್ದಾರೆ
ಎಂದು ಅವರು ಅಭಿಪ್ರಾಯಪಟ್ಟರು. ಅವರ
ಚಿಂತನೆಗಳು ಇಂದಿಗೂ ಯುವಜನತೆಯಲ್ಲಿ ಸೇವಾಭಾವ, ಧೈರ್ಯ ಹಾಗೂ ಮಾನವೀಯ ಮೌಲ್ಯಗಳನ್ನು
ಬೆಳೆಸುತ್ತಿವೆ ಎಂದರು.
ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹಾರ್ದಿಕ್ ಪಿ.
ಚೌಹಾಣ್ ವಹಿಸಿದ್ದು, ಸ್ವಾಮಿ ವಿವೇಕಾನಂದರ ಜೀವನ, ಆದರ್ಶಗಳು ಹಾಗೂ ಯುವಜನತೆಗೆ ನೀಡಿದ
ಪ್ರೇರಣಾದಾಯಕ ಸಂದೇಶಗಳ ಕುರಿತು ಮಾತನಾಡಿದರು. “ಯುವಶಕ್ತಿ ದೇಶದ ಭವಿಷ್ಯವನ್ನು ರೂಪಿಸುವ
ಮಹತ್ತರ ಶಕ್ತಿ” ಎಂಬ ವಿವೇಕಾನಂದರ ಚಿಂತನೆಗಳನ್ನು
ಉಲ್ಲೇಖಿಸಿ, ವಿದ್ಯಾರ್ಥಿಗಳು ಆತ್ಮವಿಶ್ವಾಸ, ಶಿಸ್ತು, ಪರಿಶ್ರಮ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ಸುಚಿತ್ರ ಪಿ. ಶೆಟ್ಟಿ ಸ್ವಾಗತಿಸಿ ಭಾಷಣಕಾರರ ಪರಿಚಯವನ್ನು ಮಾಡಿದರು. ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಮಾರ್ಗದರ್ಶಕರಾದ ಪ್ರೊ ತಿಲಕ್ ಗೌಡ ವಂದಿಸಿ, ಸಂಯೋಜಕ ರಾಮಕೃಷ್ಣ ಆಶ್ರಮದ ಸಜಿತ್, ಸ್ವಯಂ ಸೇವಕರಾದ ಸನತ್, ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಮಾರ್ಗದರ್ಶಕರಾದ ಶ್ರೀಮತಿ ಅಶ್ವಿನಿ ಎಸ್. ಹಾಗೂ ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಕಾರ್ಯದರ್ಶಿ ಜಾಯ್ಲಿನ್ ರೆವೆನೋ ಪಿಂಟೋ ಉಪಸ್ಥಿತರಿದ್ದರು. ಪ್ರಥಮ ಬಿ ಕಾಂ ವಿದ್ಯಾರ್ಥಿನಿ ಮೇಘಾ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



