ಕೀವ್/ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮತ್ತಷ್ಟು ತೀವ್ರಗೊಂಡಿದ್ದು, ಬುಧವಾರ ರಷ್ಯಾ ನಡೆಸಿದ ಭೀಕರ ದಾಳಿಗೆ ಉಕ್ರೇನ್ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 19 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ ಪಡೆಗಳು ರಷ್ಯಾದ ಹೃದಯಭಾಗದಲ್ಲಿರುವ ಪ್ರಮುಖ ಕೈಗಾರಿಕಾ ವಲಯಗಳನ್ನು ಗುರಿಯಾಗಿಸಿಕೊಂಡು ಭಾರಿ ಡ್ರೋನ್ ದಾಳಿ ನಡೆಸಿವೆ.
ಉಕ್ರೇನ್ನ ಆಗ್ನೇಯ ನಗರವಾದ ಡ್ನಿಪ್ರೋ ಮೇಲೆ ರಷ್ಯಾ ಕ್ಷಿಪಣಿಗಳು, ಡ್ರೋನ್ಗಳು ಮತ್ತು ಫಿರಂಗಿಗಳಿಂದ ಮುಗಿಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳು ಟೆಲಿಗ್ರಾಮ್ನಲ್ಲಿ ಖಚಿತಪಡಿಸಿದ್ದಾರೆ. ಇದರೊಂದಿಗೆ ಉತ್ತರದ ಸುಮಿ ಪ್ರಾಂತ್ಯ ಹಾಗೂ ಆಗ್ನೇಯದ ಜಪೊರಿಜ್ಜಿಯಾ ಪ್ರದೇಶಗಳಲ್ಲಿ ಮೂರು ಮಕ್ಕಳು ಸೇರಿದಂತೆ ಒಟ್ಟು 13 ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ನಾಲ್ಕು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳು ತಾವು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿಲ್ಲ ಎಂದು ವಾದಿಸುತ್ತಿವೆಯಾದರೂ, ಪ್ರಾಣಹಾನಿ ಮಾತ್ರ ನಿರಂತರವಾಗಿ ಮುಂದುವರಿದಿದೆ.
ಇದೇ ವೇಳೆ ರಷ್ಯಾದ ಆದಾಯದ ಮೂಲವಾಗಿರುವ ಇಂಧನ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಲು ಉಕ್ರೇನ್ ತನ್ನ ಡ್ರೋನ್ ದಾಳಿಗಳನ್ನು ದುಪ್ಪಟ್ಟುಗೊಳಿಸಿದೆ. ಬುಧವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಉನ್ನತ ಅಧಿಕಾರಿಗಳೊಂದಿಗೆ ರಷ್ಯಾದ ಪ್ರಮುಖ ಇಂಧನ ಖರೀದಿದಾರ ದೇಶವಾದ ಚೀನಾಕ್ಕೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಈ ದಾಳಿಗಳು ನಡೆದಿವೆ. ರಷ್ಯಾದ ದಕ್ಷಿಣ ಸ್ಟಾವ್ರೊಪೋಲ್ ಪ್ರಾಂತ್ಯದ ನೆವಿನ್ನೊಮಿಸ್ಕ್ನಲ್ಲಿರುವ ಬೃಹತ್ ರಾಸಾಯನಿಕ ಕಾರ್ಖಾನೆಯ ಕೈಗಾರಿಕಾ ಪ್ರದೇಶವನ್ನು ಗುರಿಯಾಗಿಸಿ ಉಕ್ರೇನ್ ಡ್ರೋನ್ಗಳು ದಾಳಿ ನಡೆಸಿವೆ. ಇದರೊಂದಿಗೆ ಲುಕೋಯಿಲ್ ತೈಲ ಶುದ್ಧೀಕರಣ ಘಟಕವಿರುವ ನಿಜ್ನಿ ನವ್ಗೊರೊಡ್ನ ಕ್ಸ್ಟೊವೊ ಪ್ರದೇಶ, ಲೆನಿನ್ಗ್ರಾಡ್ನ ಪ್ರಮುಖ ತೈಲ ರಫ್ತು ಬಂದರು ವಲಯ, ರಾಜಧಾನಿ ಮೊಸ್ಕೋ ಮತ್ತು ತುಲಾ ಪ್ರಾಂತ್ಯಗಳ ಮೇಲೂ ಉಕ್ರೇನ್ ಡ್ರೋನ್ ಹರಿಸಿದೆ. ರಷ್ಯಾ ರಕ್ಷಣಾ ಸಚಿವಾಲಯವು ದೇಶದಾದ್ಯಂತ ಒಟ್ಟು 273 ಉಕ್ರೇನಿಯನ್ ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾದ ಟಾಸ್ (TASS) ಸುದ್ದಿ ಸಂಸ್ಥೆ ವರದಿ ಮಾಡಿದೆ. ಭೀಕರ ದಾಳಿಯ ನಡುವೆಯೂ ಗಡಿ ಪ್ರದೇಶವಾದ ಬೆಲ್ಗೊರೊಡ್ನಲ್ಲಿ ಆಂಬ್ಯುಲೆನ್ಸ್ ಚಾಲಕರೊಬ್ಬರು ಗಾಯಗೊಂಡಿರುವುದನ್ನು ಹೊರತುಪಡಿಸಿ, ಕೈಗಾರಿಕಾ ವಲಯಗಳಲ್ಲಿ ಸದ್ಯಕ್ಕೆ ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ