ಮೇ 12 ರಂದು ಮಂಜೇಶ್ವರದಲ್ಲಿ ಸಂಶೋಧನ ಕಮ್ಮಟ

Upayuktha
0



ಕಾಸರಗೋಡು: ಇಲ್ಲಿನ ಕನ್ನಡ ಸಂಶೋಧನಾ ಕೇಂದ್ರವು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಒಂದು ದಿನದ ಸಂಶೋಧನಾ ಕಮ್ಮಟವನ್ನು ಆಯೋಜಿಸಿದೆ. ಇದೇ ಬರುವ ಮೇ 12ರಂದು ಮಂಗಳವಾರ ಬೆಳಗ್ಗೆ ಹತ್ತು ಗಂಟೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಪ್ರಾಧ್ಯಾಪಕ ಡಾ.ಮೋಹನಕೃಷ್ಣ ರೈ ಕಮ್ಮಟವನ್ನು ಉದ್ಘಾಟಿಸಲಿದ್ದಾರೆ. ಕಾಲೇಜು ಪ್ರಾಂಶುಪಾಲ ಡಾ.ಮೊಹಮ್ಮದಾಲಿ ಅಧ್ಯಕ್ಷತೆ ವಹಿಸಲಿದ್ದು ಕೇಂದ್ರದ ನಿರ್ದೇಶಕ ಡಾ.ಮೋಹನ ಕುಂಟಾರ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಕನ್ನಡ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ಸಂಶೋಧನಾ ವಿಧಾನಕ್ಕೆ ಸಂಬಂಧಿಸಿದ ಪ್ರಾಥಮಿಕ ತಿಳುವಳಿಕೆಯನ್ನು ಪ್ರಸ್ತುತ ಕಮ್ಮಟದಲ್ಲಿ ನೀಡಲಾಗುತ್ತದೆ. ವಿವಿಧ ಜ್ಞಾನ ಶಿಸ್ತುಗಳ ಸಂಪನ್ಮೂಲ ವಿದ್ವಾಂಸರು ಉಪನ್ಯಾಸ,ಸಂವಾದಗಳ ಮೂಲಕ ಕಮ್ಮಟವನ್ನು ನಡೆಸಿಕೊಡಲಿದ್ದಾರೆ. ಅಕಾಡೆಮಿಕ್ ಹಾಗೂ ನಾನ್ ಅಕಾಡೆಮಿಕ್ ಸಂಶೋಧನಾಸಕ್ತರು ಇದರ ಪ್ರಯೋಜನ ಪಡೆಯಬಹುದು. ಭಾಗವಹಿಸುವವರು ದಿನಾಂಕ 10.05.2026 ಕ್ಕೂ ಮುಂಚಿತವಾಗಿ ಕೇಂದ್ರದ ನಿರ್ದೇಶಕರ 94489 97450 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಹೆಸರು ನೊಂದಾಯಿಸಬಹುದು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top