ಭಾರತ ಮತ್ತು MIOಗೆ ಹೆಮ್ಮೆಯ ಕ್ಷಣ: ಡಾ. ವಿಶ್ವಪ್ರಿಯಾ ಗೋಡ್ಖಿಂಡಿ ಅವರಿಗೆ ಪ್ರತಿಷ್ಠಿತ ಯುರೋಪಿಯನ್ ಪಥಾಲಜಿ ಗೌರವ

Upayuktha
0



ಮಂಗಳೂರು: ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (MIO) ಯೊಂದಿಗೆ ಪಥಾಲಜಿ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ವಿಶ್ವಪ್ರಿಯಾ ಗೋದ್ಖಿಂಡಿ ಅವರು ಪ್ರತಿಷ್ಠಿತ European Society of Pathology Academy 2026 ಗೆ ಆಯ್ಕೆಯಾಗಿದ್ದಾರೆ.


ಪಥಾಲಜಿ ಕ್ಷೇತ್ರದಲ್ಲಿ ಅವರ ಶೈಕ್ಷಣಿಕ ಹಾಗೂ ವೃತ್ತಿಪರ ಸಾಧನೆಯನ್ನು ಗುರುತಿಸಿ ಈ ಗೌರವ ಲಭಿಸಿದೆ. 2026ನೇ ಸಾಲಿನಲ್ಲಿ ಯೂರೋಪಿಯನ್ ಸೊಸೈಟಿ ಆಫ್ ಪಥಾಲಜಿ (EPS) ವತಿಯಿಂದ ಆಯ್ಕೆಯಾದ ಏಕೈಕ ಭಾರತೀಯ ಪ್ರಶಸ್ತಿ ಪುರಸ್ಕೃತರು ಡಾ. ವಿಶ್ವಪ್ರಿಯಾ ಗೋಡ್ಖಿಂಡಿ ಆಗಿದ್ದಾರೆ.


ಈ ಪ್ರತಿಷ್ಠಿತ ಅಂತರರಾಷ್ಟ್ರೀಯ ಮಾನ್ಯತೆಗೆ ಡಾ. ವಿಶ್ವಪ್ರಿಯಾ ಗೋಡ್ಖಿಂಡಿ ಅವರನ್ನು MIO ಆಡಳಿತ ಮಂಡಳಿ, ವೈದ್ಯರು ಹಾಗೂ ಸಿಬ್ಬಂದಿ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.


ಈ ಸಾಧನೆ MIO ಸಂಸ್ಥೆಯಲ್ಲಿನ ಶೈಕ್ಷಣಿಕ ಗುಣಮಟ್ಟ ಮತ್ತು ಉತ್ತಮ ಕ್ಯಾನ್ಸರ್ ನಿರ್ಣಯ ಹಾಗೂ ಚಿಕಿತ್ಸೆಯತ್ತ ಇರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅವರ ಮುಂದಿನ ಶೈಕ್ಷಣಿಕ ಹಾಗೂ ಸಂಶೋಧನಾ ಕಾರ್ಯಗಳಿಗೆ MIO ವತಿಯಿಂದ ಶುಭ ಹಾರೈಕೆಗಳನ್ನು ತಿಳಿಸಲಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top