ಕವನ: ಚಿಂತೆಯು ಕಾಡುವುದು

Upayuktha
0





ನೇಸರ ಕಿರಣವು ಬೆಂಕಿಯ ತೆರದಲಿ

ಬೇಸರದಿಂದಲಿ ನೊಂದಿದೆ ಹಸಿರೂ, 

ಬೇಸಿಗೆ ಕಾಲದ ಸೆಖೆಯನು ಸಹಿಸುತಲೊಡಲೊಳು ಬೇಯುತಲಿ |

ಘಾಸಿಯಗೊಳಿಸಿದೆ ಭಾನಿನ ತಾಪವು ದೂಷಿಸಲೇತಕೆ ಕಾಲದ ಮಾಪನ

ನಾಶವಗೊಳಿಸಿದೆ ಮನುಕುಲ ಪರಿಸರ ಹಾನಿಯಗೈಯುತಲಿ ||೧||


ಮಣ್ಣಿನ ಕಣಕಣ ನೀರನು ಕಾಣದೆ

ಕಣ್ಣಲಿ ಮೂಡಿದೆ ದಿಗಿಲಿನ ರೋದನ

ತಣ್ಣನೆ ಬೀಸುವ ಗಾಳಿಯ ಕಾದಿದೆ ಕುಗ್ಗಿದ ಮನಸಿನಲಿ |

ಹಣ್ಣಿನತೋಟದಿ ವಿಧವಿಧ ಫಲಗಳು

ನುಣ್ಣನೆ ರುಬ್ಬುತ ರಸವನು ಕುಡಿಯಲು

ತಣ್ಣಗೆ ಭಾವದಿ ಬಳಲಿಕೆ ಮರೆತಿದೆ

ದೇವರ ಕೊಡುಗೆಯಲಿ ||೨ ||


ಸುತ್ತಲು ವನಸಿರಿ ಬಾಡಿದೆ ಬೆಂದಿದೆ

ಕತ್ತಲು ಕವಿದಿದೆ ಸೃಷ್ಟಿಯು ಬಳಲಿದೆ

ಮುತ್ತಿದೆ ಜಗದೊಳು ಭೀತಿಯ ಛಾಯೆಯಲೆದೆಗುದಿ ಬೇಯುವುದು |

ಹೊತ್ತಿದೆ ಗಿಡಮರ ಕಿಚ್ಚಿನ ಧಗೆಯೊಳು 

ಸತ್ತಿದೆ ಕನಸಿನ ಗೋಪುರ ಕುಸಿದಿದೆ

ಧುತ್ತನೆ ಬೆವರುತ ಕುದಿಯುವ ಕುಲುಮೆಗೆ ಚಿಂತೆಯು ಕಾಡುವುದು ||೩||


- ಪ್ರಮೀಳಾ ಚುಳ್ಳಿಕ್ಕಾನ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Tags

Post a Comment

0 Comments
Post a Comment (0)
To Top