ಕವನ: ಕಾಲಮಾನ

Upayuktha
0

 (ಕುಸುಮ ಷಟ್ಪದಿ)





ಹಚ್ಚನೆಯ ಹಸಿರೆಲ್ಲ

ಬಿಸಿಲತಾಪವ ಸಹಿಸಿ

ಕಿಚ್ಚಿನಾ ಬೇಗೆಯೊಳು ಬೇಯುತಿಹುದು |

ಬೆಚ್ಚನೆಯ ಗಾಳಿತಾ

ಬೆಚ್ಚಿ ಬೀಳಿಸುತಿಹುದು

ಹುಚ್ಚರಂತಾಗಿ ಮನ ನೋಯುತಿಹುದು ||೧||


ಭಾವದಂಗಳದಲ್ಲಿ 

ಭಾವಜಲ ಬತ್ತಿಹುದು 

ಜೀವಕ್ಕು ಮಾರಕವೀ ಕಾಲಮಾನ |

ಸಾವು ನೋವೆಲ್ಲೆಡೆಯು 

ನೇವರಿಸುವವರಾರು

ಸಾವರಿಸಲಾರವೂ ಜೀವರಾಶಿ ||೨||


ನೇಸರನ ಕಿರಣದಿಂ

ಬೇಸರದಿ  ಬೆಂದಿಹೆವು

ದೋಷವೋ ಶಾಪವೋ ದೇವಲೀಲೆ |

ಕೋಶದೊಳು ಹಸಿರನೆಲೆ  

ಪಾಶ ಕಡಿಯುವ ತೆರದಿ

ದೇಶದೊಳು ಪರಿತಾಪ ಸುಡುವ ಶಾಖ ||೩||


-ಪ್ರಮೀಳಾ ಚುಳ್ಳಿಕ್ಕಾನ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top