ಕವನ: ನಗಬೇಕು ನಾನು ಮತ್ತೆ ಮಗುವಾಗಿ

Upayuktha
0



ಬಂಧಗಳ ಸರಪಣಿಯಲಿ

ಬದುಕು ಬಂದಿಯಾಗಿಹುದು

ಎಲ್ಲ ಸಂಕೋಲೆಗಳ ಕಳಚಿ 

ಬಾನಂಚಲಿ ಒಮ್ಮೆ  ಹಾರುವಾಸೆ


ನಗಬೇಕು ನಾನೊಮ್ಮೆ ಮನದುಂಬಿ

ದುಗುಡ- ದುಮ್ಮಾನಗಳ

ಸುಳಿಯಿಂದ ಹೊರಬಂದು

ಬೆಳಗಬೇಕು ಪ್ರೀತಿ ಜ್ಯೋತಿಯ

ನನ್ನವರೆನಿಸಿದವರ ಎದೆಯಲ್ಲಿ


ಮನುಜನಲ್ಲಡಗಿಹ ಇಬ್ಬಗೆಯ ನೀತಿಗೆ

ಮರುಗುತಿದೆ ಮನವು 

ನೋವು ನೀಡುವುದರಲ್ಲೇ ಮುದವ ಕಾಣುವ

ವಿಧಿ ಲೀಲೆಯನ್ನೂ ಹಳಿವ

ಹೀನ ಮನುಜರ ಕಂಡು


ಹಣ- ಸಂಪತ್ತಿನ ವ್ಯಾಮೋಹಕೆ

ಬಲಿಯಾಗಿ

ಪ್ರೀತಿ ವಾತ್ಸಲ್ಯವೇ ಮರೆತು

ಬಾಳುವುದು ಬದುಕೆ ?


ಎಲುಬಿಲ್ಲದ ನಾಲಿಗೆಯದು

ಗಳಿಗೆಗಳಿಗೆಗೂ ಬದಲಾಗುವ ನುಡಿಯು

ನಾನೇ ಎಂಬ ಹಮ್ಮಿನಲ್ಲಿ

ಎಲ್ಲವೂ ನನ್ನದೆಂಬ ಗುಗಿನಲ್ಲಿ

ಕರುಳ ಬಳ್ಳಿಗೂ 

ಸಾವು ಬಯಸುವವರು 


ನಮ್ಮೊಡನೆ ನಮ್ಮಂತಿದ್ದು

ಕತ್ತಿಮಸೆಯುತ ಒಳಗೆ

ತುಸು ಎಚ್ಚರ ತಪ್ಪಿದರೂ 

ಕತ್ತು ಕತ್ತರಿಸಲೂ

ಹಿಂಜರಿಯದವರು


ಬದುಕಬೇಕು ನಾವು ಇಂತವರೊಳಗೂ

ಎಲ್ಲರೊಳಗೊಂದಾಗಿ ನೋವೆಲ್ಲ ಮರೆತು

ನಮ್ಮನ್ನು ಪ್ರೀತಿಸುವ ಜೀವಗಳಿಗೆ

ಪ್ರೀತಿ ಹಂಚಲು

ನಗಬೇಕು ನಾನು ಮತ್ತೆ ಮಗುವಾಗಿ.


-ರೇಷ್ಮಾ ಉಮೇಶ ಮುಂಡಳ್ಳಿ

ಶಿಕ್ಷಕರು, ಶ್ರೀವಲ್ಲಿ ಪ್ರೌಢಶಾಲೆ ಚಿತ್ರಾಪುರ ಭಟ್ಕಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top