ಬಂಧನವು
ಇನ್ನಿಲ್ಲ
ಸುತ್ತುವೆನು
ಜಗವೆಲ್ಲ
ಹಚ್ಚ
ಹಸಿರಿನ ವನವು
ಕರೆಯುತಿದೆ
ಕೈಬೀಸಿ !!
ಪಂಜರದಲೀ
ನಾನು
ಬಂಧಿಯಾಗಿಹ
ದಿನದಿ
ಮೃಷ್ಟಾನ್ನ
ಭೋಜನವ
ಸಂತಸದಲುಣಲಿಲ್ಲಾ..!!
ಕೊಡುವುದನು
ತಿನ್ನುವುದು
ಹೊಟ್ಟೆಯನು
ತುಂಬುವುದು
ಬದುಕು
ಸಾಕಾಯ್ತೆನಿಸಿ
ಖುಷಿಯಲಿರಲಿಲ್ಲಾ
!!
ಅತ್ತಿತ್ತ
ನಿಲುಕುವುದು
ಕರೆದಾಗ
ಉಲಿಯುವುದು
ಸೆರೆವಾಸ
ಗೋಳೆನಿಸಿ
ಬೇಸರವು
ಕವಿದಿತ್ತು !!
ಸ್ವಚ್ಚಂದ
ಬದುಕಿನಲೀಗ
ಒಂಟಿತನ
ಎಲ್ಲಿಹುದು
ಮನ ಬಂದಂತೆ ಹಾಯಾಗಿ
ಹಾರಾಡುತಿರ
ಬಹುದು !!
ಕಾಡುಮರ
ಹಣ್ಣುಗಳ
ಇಷ್ಟವಾದುದ
ತಿಂದು
ಮೂಕ
ರೋದನ ಮರೆತು
ಸ್ವಾಭಿಮಾನದಿರ
ಬಹುದು !!
ನಾಲ್ಕು
ಗೋಡೆಗಳ ಮಧ್ಯೆ
ಇರಿಸಿ
ಸುಖವೆನ್ನುವಿರೆ
ಮೌನ
ವೇದನೆ ಬಾಳು
ಭಾವ
ಬಂಧನದ ಗೋಳು !!
✍️ಪ್ರಮೀಳಾ ಚುಳ್ಳಿಕ್ಕಾನ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


