ಪಾಣಾಜೆ ಸುಬೋಧ ಪ್ರೌಢಶಾಲಾ ಪ್ರಾರಂಭೋತ್ಸವ, ಲ್ಯಾಂಡ್ ಟ್ರೇಡ್ಸ್ ವತಿಯಿಂದ ಉಚಿತ ಬ್ಯಾಗ್ ವಿತರಣೆ

Upayuktha
0

ಪಾಣಾಜೆ: ಪಾಣಾಜೆ ಸುಬೋಧ ಪ್ರೌಢಶಾಲೆಯ 2026-27 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಮೇ ತಿಂಗಳ 29ರಂದು ಜರಗಿತು.

 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಲ್ಯಾಂಡ್ ಟ್ರೇಡ್ಸ್ ನ ಜನರಲ್ ಮ್ಯಾನೇಜರ್ ಪದ್ಮನಾಭ ಶೆಟ್ಟಿ ಹಾಗೂ ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿ ಪದ್ಮನಾಭ ಶೆಟ್ಟಿ ಶುಭ ಹಾರೈಸಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಸಂಚಾಲಕರು ಶಿಕ್ಷಣದ ಪ್ರಾಮುಖ್ಯತೆ, ವಿದ್ಯಾರ್ಥಿಗಳ ಜವಾಬ್ದಾರಿ, ಶಾಲಾ ಸ್ವಚ್ಛತೆ, ಸಮಯ ಪರಿಪಾಲನೆ ಹಾಗೂ ಶಿಸ್ತಿನ ಶಿಕ್ಷಣ ತಮ್ಮ ಯಶಸ್ಸಿಗೆ ಕಾರಣ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.


ಮಂಗಳೂರಿನ ಪ್ರತಿಷ್ಠಿತ ಲ್ಯಾಂಡ್ ಡೆವಲಪರ್ ಹಾಗೂ ಬಿಲ್ಡರ್ ಸಂಸ್ಥೆ ಲ್ಯಾಂಡ್ ಟ್ರೇಡ್ಸ್ ವತಿಯಿಂದ ಸಂಸ್ಥೆಯ ವಿದ್ಯಾಸಂಕಲ್ಪ ಯೋಜನೆಯಂತೆ ಶಾಲೆಯ ಎಲ್ಲಾ ಮಕ್ಕಳಿಗೆ ಶಾಲಾ ಬ್ಯಾಗುಗಳನ್ನು ಹಾಗೂ ಸಿಹಿ ತಿಂಡಿಯನ್ನು ವಿತರಿಸಲಾಯಿತು.


ಸಂಚಾಲಕರು ನೀಡಿದ ಪೆನ್ನುಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ, ಅತಿಥಿಗಳಿಗೆ, ಶಿಕ್ಷಕರಿಗೆ ಶಿಕ್ಷಕೇತರ ಸಿಬ್ಬಂದಿಯವರಿಗೆ ಪ್ರತಿವರ್ಷದಂತೆ ವಿತರಿಸಲಾಯಿತು. ಲ್ಯಾಂಡ್ ಟ್ರೇಡ್ಸ್ ನ ಪ್ರತಿನಿಧಿಗಳನ್ನು ಹೂ ನೀಡಿ ಅಭಿನಂದಿಸಲಾಯಿತು.


ವಿದ್ಯಾರ್ಥಿನಿಯರಾದ ವೈಶಾವಿ ಕೆ ಪಿ ಮತ್ತು ದೀಪಿಕಾ ಪಿ ಎಸ್ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸುಧೀರ್ ಎಸ್ ಪಿ ಶಾಲೆಯಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳನ್ನು ವಿವರಿಸಿ, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ  ನಿರ್ಮಲ ಕೆ ಲ್ಯಾಂಡ್ ಟ್ರೇಡ್ಸ್ ಸಿನ ಕಾರ್ಯಗಳನ್ನು ಶ್ಲಾಘಿಸಿ ವಂದಿಸಿದರು. ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಯವರು ಸಹಕರಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top