ಮೇ 21ರಂದು ಮಂಗಳೂರು ಸಿಟಿ ರೋಟರಿ ಮತ್ತು ಸ್ವಸ್ತಿಕ ರೋಟರಾಕ್ಟ್‌ನಿಂದ "ಅನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿ" ಪ್ರದಾನ

Upayuktha
0

  


ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸಿಟಿ ಹಾಗೂ ರೋಟರಾಕ್ಟ್ ಕ್ಲಬ್ ಮಂಗಳೂರು ಸ್ವಸ್ತಿಕ (ರೋಟರಿ ಕ್ಲಬ್ ಮಂಗಳೂರು ಸಿಟಿ ಪ್ರಾಯೋಜಕತ್ವದಲ್ಲಿ) ಇವುಗಳ ಜಂಟಿ ಆಶ್ರಯದಲ್ಲಿ 5ನೇ ಆವೃತ್ತಿಯ "ಅನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿ" (Anantamitra Kalbavi Young Achiever Award) ಪ್ರದಾನ ಸಮಾರಂಭವು ಮೇ 21 ರಂದು ಜರುಗಲಿದೆ.

 

ಅಂದು ಸಂಜೆ 7.30 ಕ್ಕೆ ಈಡನ್ ಕ್ಲಬ್, ಕದ್ರಿ ಹಿಲ್ಸ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ವರ್ಷದ ಪ್ರತಿಷ್ಠಿತ ಯುವ ಸಾಧಕ ಪ್ರಶಸ್ತಿಗೆ ಇಬ್ಬರು ಸಾಧಕಿಯರನ್ನು ಆಯ್ಕೆ ಮಾಡಲಾಗಿದ್ದು, ಹುಲಾ ಹೂಪ್ ದಾಖಲೆ ನಿರ್ಮಾತೃ ಆರಾಧ್ಯ . ಫಡ್ಕೆ ಹಾಗೂ ಟೆನ್ನಿಸ್ ಕ್ರೀಡಾಪಟು ಪ್ರಾಪ್ತಿ ಶೆಟ್ಟಿ ಇವರಿಗೆ ಸನ್ಮಾನ ನೆರವೇರಲಿದೆ.

 

ಕಾರ್ಯಕ್ರಮದಲ್ಲಿ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಅಧ್ಯಕ್ಷರಾದ ಡಾ. ರಾಘವೇಂದ್ರ ಹೊಳ್ಳ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ರೋಟರಿ ಕ್ಲಬ್ ಗೌರವಾನ್ವಿತ ಸಲಹೆಗಾರರಾದ ರೋಟೇರಿಯನ್ ಇಂಜಿನಿಯರ್ ರಾಜೇಂದ್ರ ಕಲ್ಬಾವಿ ಅವರು ಗೌರವ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ.

 

ರೋಟರಿ ಕ್ಲಬ್ ಮಂಗಳೂರು ಸಿಟಿಯ ಅಧ್ಯಕ್ಷರಾದ ರೋ. ಸಜ್ನಾ ಭಾಸ್ಕರ್, ಕಾರ್ಯದರ್ಶಿ ರೋ. ಪದ್ಮನಾಭ ನಾಯಕ್ ಹಾಗೂ ರೋಟರಾಕ್ಟ್ ಕ್ಲಬ್ ಮಂಗಳೂರು ಸ್ವಸ್ತಿಕದ ಅಧ್ಯಕ್ಷರಾದ ರೊಟರಾಕ್ಟರ್ ಮುಳಿಯ ಸಾತ್ವಿಕ್, ಕಾರ್ಯದರ್ಶಿ ರೊಟರಾಕ್ಟರ್ ಪ್ರಜ್ವಲ್ ಶೆಟ್ಟಿ ಮತ್ತು ಎರಡೂ ಕ್ಲಬ್ಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಎಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top