ಉಡುಪಿ: ಕನ್ನಡ ನಾಡು-ನುಡಿ, ಸಾಹಿತ್ಯ
ಮತ್ತು ಸಂಸ್ಕೃತಿಯ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ 'ನುಡಿತೋರಣ' ಬಳಗದ ನಾಲ್ಕನೇ ವಾರ್ಷಿಕೋತ್ಸವ
'ನುಡಿ ಸಂಭ್ರಮ-2026' ಇದೇ ಮೇ 23 ಮತ್ತು
24 ರಂದು ಉಡುಪಿಯಲ್ಲಿ ಜರುಗಲಿದೆ. ಈ ಸಂಭ್ರಮದ ವೇದಿಕೆಯಲ್ಲಿ
ಸಾಹಿತ್ಯ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಗಣನೀಯ ಸಾಧನೆ ಮಾಡಿದ ಮೂವರು ಮಹಿಳಾ ಸಾಧಕಿಯರಿಗೆ ಪ್ರತಿಷ್ಠಿತ 'ನುಡಿಭೂಷಣ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಪ್ರಶಸ್ತಿ ಪುರಸ್ಕೃತರು:
ಶ್ರೀಮತಿ ಶೈಲಾ ಜಯಕುಮಾರ್ (ಚಿತ್ರದುರ್ಗ):
ಚಿತ್ರದುರ್ಗದ ಅಪರ್ಣಾ ಎಂದೇ ಖ್ಯಾತಿ ಪಡೆದಿರುವ
ಇವರು, ನಿವೃತ್ತ ಆಂಗ್ಲ ಭಾಷಾ ಉಪನ್ಯಾಸಕಿ ಹಾಗೂ
ಹೆಸರಾಂತ ವಾಗ್ಮಿ. ಕಥೆ, ಕವನ, ವ್ಯಕ್ತಿಚಿತ್ರಣ
ಸೇರಿದಂತೆ 14ಕ್ಕೂ ಹೆಚ್ಚು ಕೃತಿಗಳನ್ನು
ರಚಿಸಿರುವ ಇವರು ಸಾಂಸ್ಕೃತಿಕ ಲೋಕದ
ಸಕ್ರಿಯ ಚೇತನ.
ಶ್ರೀಮತಿ ರಾಧಾ ಟೇಕಲ್ (ಬೆಂಗಳೂರು):
ಹಿರಿಯ ಸಾಹಿತಿ ಸಿದ್ಧವನಹಳ್ಳಿ ಕೃಷ್ಣಶರ್ಮರ ಪುತ್ರಿಯಾದ ಇವರು, ತೆಲುಗು ಮತ್ತು ಉರ್ದು ಭಾಷೆಯ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಅಪ್ರತಿಮ ಅನುವಾದಕಿ. ಸುಮಾರು 20ಕ್ಕೂ ಹೆಚ್ಚು ಕಾದಂಬರಿಗಳನ್ನು
ಕನ್ನಡಕ್ಕೆ ನೀಡಿದ ಇವರ ಸಾಹಿತ್ಯಿಕ ಬದ್ಧತೆ
ಅಪಾರ.
ಶ್ರೀಮತಿ ಶೋಭಾ ಹರಿಪ್ರಸಾದ್ (ಉಡುಪಿ):
ಛಂದೋಬದ್ಧ ಕಾವ್ಯ ರಚನೆಯಲ್ಲಿ ಸಿದ್ಧಹಸ್ತರಿರುವ ಇವರು 'ಶೋಭಾ ರಾಮಾಯಣ' ಎಂಬ
ಬೃಹತ್ ಗ್ರಂಥದ ಮೂಲಕ ಪ್ರಸಿದ್ಧರು. ಹತ್ತಾರು
ಸಾಹಿತ್ಯ ಪ್ರಕಾರಗಳಲ್ಲಿ ಪರಿಣಿತಿ ಪಡೆದಿರುವ ಇವರು ಉದಯೋನ್ಮುಖ ಕವಿಗಳಿಗೆ
ಮಾರ್ಗದರ್ಶಕರೂ ಹೌದು.
ಮೇ 23 ಮತ್ತು 24 ರಂದು ನಡೆಯಲಿರುವ ಎರಡು
ದಿನಗಳ ಈ ಸಾಹಿತ್ಯಿಕ ಹಬ್ಬದಲ್ಲಿ
ನಾಡಿನ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ
ಮಾಡಲಾಗುವುದು ಎಂದು ನುಡಿತೋರಣ ಬಳಗವು
ಪ್ರಕಟಣೆಯಲ್ಲಿ ತಿಳಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


