ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ: ಓಪನ್ ಹೌಸ್ ಎಕ್ಸ್ಪೋ ‘ಸಮನ್ವಯ 2026’ ಯಶಸ್ವಿ

Upayuktha
0

  


ಬೆಂಗಳೂರು: ಹವಾಮಾನ ವೈಪರೀತ್ಯಗಳಿಗೆ ಸಿಲುಕಿ ಕಂಗಾಲಾಗುವ ಬದಲು ಬದಲಾಗುವ ಹವಾಮಾನಕ್ಕೆ ಸಮರ್ಥ ರೀತಿಯಲ್ಲಿ ಹೊಂದಿಕೊಳ್ಳುವಂತೆ ನಾವು ನಮ್ಮ ಸಮಾಜದ ವಿವಿಧ ಸ್ಥರಗಳ ಜನರನ್ನು ಸಜ್ಜುಗೊಳಿಸಬೇಕು. ಇದು ನಮ್ಮ ಸಂಶೋಧನೆಗಳ ಅಧಾರ ಸೂತ್ರವಾಗಬೇಕು. ಆಗ ಮಾತ್ರ ಹವಾಮಾನದ ಏರುಪೇರು ಹಾಗೂ ಅಭಿವೃದ್ಧಿ ಯೋಜನೆಗಳ ನಡುವಣ ಕಂದಕವನ್ನು ನಿವಾರಿಸಿದಂತಾಗುತ್ತದೆ. ಬದಲಾಗುವ ಹವಾಮಾನಗಳು ಒಡ್ಡುವ ಅಪಾಯಗಳಿಂದ ತಪ್ಪಿಸಿಕೊಳ್ಳಲು ಹೊಂದಾಣಿಕೆ ಮಾತ್ರ ನಮ್ಮ ಮುಂದಿರುವ ಏಕೈಕ ಮಾರ್ಗ ಎಂದು ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನಿರ್ದೇಶಕ ಡಾ. ಶೈಲೇಶ್ ನಾಯಕ್ ನುಡಿದರು.


ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜನೆಗೊಂಡಿದ್ದ ವಿನೂತನ ಅನ್ವೇಷಣೆಗಳ ಓಪನ್ ಹೌಸ್ ಎಕ್ಸ್ಪೋಸಮನ್ವಯ 2026’ ಉದ್ಘಾಟಿಸಿ ಮಾತನಾಡುತ್ತಿದ್ದರು.



ಶಿಕ್ಷಣ
ಸಂಸ್ಥೆಗಳು ಹಾಗೂ ಕೈಗಾರಿಕೆಗಳ ನಡುವೆ ಸಮನ್ವಯತೆ ಹಾಗೂ ಪರಸ್ಪರ ಪಾಲ್ಗೊಳ್ಳುವಿಕೆ ಹಾಗೂ ಸಮಾಲೋಚನೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶ ಹೊಂದಿರುವ ಎಕ್ಸ್ಪೋನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾದರಪಡಿಸುತ್ತಿರುವ 373 ಪ್ರಾತ್ಯಕ್ಷಿಕೆಗಳು ನೋಡುಗರ ಕುತೂಹಲವನ್ನು ತಣಿಸುತ್ತಿವೆ. ಹವಾಮಾನ ಬದಲಾವಣೆಯ ಅರಿವು ತಂತ್ರಜ್ಞಾನದ ಪ್ರತಿ ಅನ್ವೇಷಣೆಗಳಲ್ಲಿ ಬಿಂಬಿತವಾಗಬೇಕು. ನಾವು ತ್ವರಿತಗತಿಯಲ್ಲಿ ಅತಿಯಾದ ಮಾಲಿನ್ಯ ಹೊರಸೂಸುವ ವಾಹನ/ಯಂತ್ರಗಳಿಂದ ಹೊರಬರಬೇಕು ಮತ್ತು ಸುಸ್ಥಿರ ಪರಿಸರಕ್ಕೆ ಮಾರಕವಾಗದಂತಹ ತಂತ್ರಜ್ಞಾನದ ಅನ್ವೇಷಣೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರೋಹಿತ್ ಪೂಂಜ ಅಧಕ್ಷೀಯ ಮಾತುಗಳನ್ನಾಡಿ, ಶಿಕ್ಷಣಕ್ಕೆ ಅದರಲ್ಲೂ ತಾಂತ್ರಿಕ ಶಿಕ್ಷಣಕ್ಕೆ ಅತ್ಯಗತ್ಯವಾಗಿರುವ ಕೈಗಾರಿಕೆಗಳ ಪಾಲ್ಗೊಳ್ಳುವಿಕೆ ಬಗ್ಗೆ ವಿವರಿಸಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ, ಭಾರತ ಸರ್ಕಾರದ ತೆಂಗಿನ ನಾರು ಮಂಡಳಿ ಸದಸ್ಯ ಸಿ.ಎಸ್. ಪ್ರಕಾಶ್, ಭಾರತೀಯ ರೈಲ್ವೆಯ ಹಿರಿಯ ಅಧಿಕಾರಿ ಡಾ. ಅನೂಪ್ ದಯಾನಂದ್ ಸಾಧು, ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಪ್ರೊ. ಕೆ.ಆರ್. ಶ್ರೀಧರ ಮೂರ್ತಿ, ಭಾರತ ಸರ್ಕಾರದಲ್ಲಿ ಕ್ವಾಂಟಮ್ ತಂತ್ರಜ್ಞಾನದ ಸಲಹೆಗಾರರಾಗಿರುವ ಡಾ. ಅಂಜನಿ ಪ್ರಿಯದರ್ಶಿನಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.  



ನಿಟ್ಟೆ
ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಸ್ವಾಗತಿಸಿ,ಸಮನ್ವಯ 2026’ ಎಕ್ಸ್ಪೋನ ಪ್ರಧಾನ ಸಂಯೋಜಕ ಡಾ. ಪ್ರಶಾಂತ್ ನಾಗರಾಜ್ ಅನ್ವೇಷಣೆಗಳ ಸಂಕ್ಷಿಪ್ತ ವರದಿಯನ್ನು ಸಾದರಪಡಿಸಿದರು. ಎಲೆಕ್ಟ್ರಾನಿಕ್ಸ್ ಆಂಡ್ ಕಮುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ರಾಮಚಂದ್ರ .ಸಿ, ಅನ್ವೇಷಣೆಗಳ ಹಿಂದಣ ಸಾಮಾಜಿಕ ಕಾಳಜಿಗಳ ಬಗ್ಗೆ ಬೆಳಕು ಚೆಲ್ಲಿದರು.

Post a Comment

0 Comments
Post a Comment (0)
To Top